Asianet Suvarna News Asianet Suvarna News

ಅಪ್ಪು ಮೆಚ್ಚಿದ ಕಥೆಗೆ ಜೀವಕೊಡ್ತಿದ್ದಾರೆ ಈ ಸ್ಟಾರ್ ನಟ

ಪುನೀತ್ ರಾಜ್ ಕುಮಾರ್ ಮಾಡಬೇಕಿದ್ದ ದ್ವಿತ್ವ ಸಿನಿಮಾಗೆ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಎಂಚ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಫಹಾದ್ ಫಾಸಿಲ್ ಬೇರೆ ಭಾಷೆಯ ದ್ವಿತ್ವದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೀಗ ಎಲ್ಲಾ ಭಾಷೆಯಲ್ಲೂ ಫಹಾದ್ ನಟಿಸಲಿದ್ದಾರೆ ಎನ್ನಲಾಗಿದೆ. 

ಅಪ್ಪು ಯಾವುದೇ ರೀತಿ ಸಿನಿಮಾ ಮಾಡಿದ್ರು ಚೆಂದ. ಮಾಸ್ ಇರಲಿ ಕ್ಲಾಸ್ ಇರಲಿ. ಪೌರಾಣಿಕವಿರಲಿ ಎಲ್ಲವೂ ಚೆಂದ. ಅದೇ ರೀತಿ ಪುನೀತ್ ದ್ವಿತ್ವ ಅನ್ನೋ ಸಿನಿಮಾದಲ್ಲಿ ಆಕ್ಟ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಈ ಚಿತ್ರದ ಮೂಲಕ ಪುನೀತ್ ಬೇರೆಯದ್ದೇ ಶೇಡ್ ನಲ್ಲಿ ಪ್ರೇಕ್ಷಕರ ಮುಂದೆ ಬರ್ತಾರೆ ಅನ್ನೋದು ಚಿತ್ರ ಅನೌನ್ಸ್ ಆದಾಗಲೇ ಅಭಿಮಾನಿಗಳಿಗೆ ಗೊತ್ತಿತ್ತು. ಆದ್ರೆ ಅಪ್ಪು ಅಕಾಲಿಕ ಮರಣದಿಂದ ಈ ಚಿತ್ರ ನಿಂತು ಹೋಯ್ತು. ಆದ್ರೆ ಮಲಯಾಳಂನ ಸ್ಟಾರ್ ನಟರೊಬ್ಬರು ಈ ಕಥೆಗೆ ಜೀವ ತುಂಬಲು ಬರ್ತಿದ್ದಾರೆ. ಫಹಾದ್ ಫಾಸಿಲ್. ಕಿಂಗ್ ಆಫ್ ಮೆಥಡ್ ಆಕ್ಟರ್ ಅಂತಾನೆ ಫೇಮಸ್ ಆಗಿರೋ ನಟ. ಸದ್ಯ ಎಲ್ಲಾ ಬಿಗ್ ಸ್ಟಾರ್ ಗಳ ಸಿನಿಮಾಗಳಿಗೆ ಬೇಕಿರೋ ಮೋಸ್ಟ್ ವಾಟೆಂಡ್ ಕಲಾವಿದ. ವಿಲನ್ ಆಗ್ಲಿ. ಯಾವುದೇ ಕ್ಯಾರೆಕ್ಟರ್ ಆಗ್ಲಿ ನೋಡುಗರ ಬಾಯಲ್ಲಿ ವಾವ್ಹ್ ಎಂದೆನಿಸಿಕೊಳ್ಳದೆ ಸ್ಕ್ರೀನ್ ಮೇಲಿಂದ ಹೋಗಲ್ಲ. ಸದ್ಯ ಈ ನಟನನ್ನ ಕನ್ನಡ ಇಂಡಸ್ಟ್ರಿಗೆ ಕರೆತರುವ ಪ್ರಯತ್ನ ಮಾಡಿದೆ ಹೊಂಬಾಳೆ ಸಂಸ್ಥೆ. ಅದು ಪುನೀತ್ ಮಾಡಬೇಕಿದ್ದ ಸಿನಿಮಾಗೆ ಅನ್ನೋದೆ ವಿಶೇಷ. ಪವನ್ ಕುಮಾರ್ ನಿರ್ದೇಶನದ ಹೊಂಬಾಳೆ ಸಂಸ್ಥೆ ನಿರ್ಮಾಣದ ದ್ವಿತ್ವ ಸಿನಿಮಾ ಕಥೆಯನ್ನ ಕೇಳಿ ಮೆಚ್ಚಿದ್ದಾರಂತೆ ನಟ ಫಹಾದ್ ಫಾಸಿಲ್. ಸಿನಿಮಾದಲ್ಲಿ ಅಭಿನಯಿಸಲು ಓಕೆ ಎಂದಿದ್ದು  ಇನ್ನೂ ಕೆಲವೇ ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗೋದಂತು ಕನ್ಫರ್ಮ್.

Video Top Stories