Asianet Suvarna News Asianet Suvarna News

Ek Love Ya ಸಿನಿಮಾ ಯಶಸ್ಸಿನ ಜೊತೆ ಶಿವರಾತ್ರಿ ಆಚರಣೆ!

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ ಅಭಿನಯದ 'ಏಕ್ ಲವ್ ಯಾ'  ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 

ಜೋಗಿ ಪ್ರೇಮ್ (Jogi Prem) ನಿರ್ದೇಶನದಲ್ಲಿ ಹಾಗೂ ನಟಿ ರಕ್ಷಿತಾ (Rakshita) ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ರಾಣಾ (Raanna) ಅಭಿನಯದ 'ಏಕ್ ಲವ್ ಯಾ' (Ek LOve Ya) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಂಭ್ರಮದ ಸಕ್ಸಸ್ ಖುಷಿಯಲ್ಲಿರುವ 'ಏಕ್ ಲವ್ ಯಾ' ಚಿತ್ರತಂಡ ರಾಜ್ಯ ಪ್ರವಾಸವನ್ನು ಮಾಡುತ್ತಿದೆ. ಈ ಪ್ರವಾಸದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಮಹಾಶಿವರಾತ್ರಿಯಂದು ನಿರ್ದೇಶಕ ಜೋಗಿ ಪ್ರೇಮ್, ನಟಿ ರೀಷ್ಮಾ ನಾಣಯ್ಯ (Rishma Nanayya) ಹಾಗೂ ನಾಯಕ ನಟ ರಾಣಾ ಭೇಟಿ ನೀಡಿ ಮಠದಲ್ಲಿ ಪೂಜೆ ಸಲ್ಲಿಸಿದ್ದಾರೆ.

Ek Love Ya ಯಶಸ್ಸಿನ ಜೊತೆ ಮತ್ತೊಂದು ಕುತೂಹಲ ಹುಟ್ಟಿಸಿದ ಪ್ರೇಮ್!

ಮಾತ್ರವಲ್ಲದೇ ಅಲ್ಲಿನ ಭಕ್ತವೃಂದಕ್ಕೆ ಊಟವನ್ನು ಬಡಿಸಿದ್ದಾರೆ. ಈ ವೇಳೆ ಭಕ್ತಾದಿಗಳು 'ಏಕ್ ಲವ್ ಯಾ' ತಂಡವನ್ನು ನೋಡಲು ಮುಗಿಬಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇನ್ನು 'ಏಕ್ ಲವ್ ಯಾ' ಚಿತ್ರದಲ್ಲಿ ರಾಣಾ ಚಿತ್ರದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್‌ (Rachita Ram) ಸಿಕ್ಕಾಪಟ್ಟೆ ಬೋಲ್ಡ್‌ ಲುಕ್‌ನಲ್ಲಿ ನಟಿಸಿದ್ದಾರೆ. ವಿಶೇಷವಾಗಿ ರಾಣಾ ಹಾಗೂ ರೀಷ್ಮಾ ನಾಣಯ್ಯ ಪ್ರೇಮಕಥೆಯ ದೃಶ್ಯ ವೈಭವ ಚಿತ್ರದಲ್ಲಿ ಅದ್ಧೂರಿಯಾಗಿ ಮೂಡಿಬಂದಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Video Top Stories