Asianet Suvarna News Asianet Suvarna News

ರೆಟ್ರೋ ಸ್ಟೈಲ್‌ನಲ್ಲಿ ಹೆಡ್ ಬುಷ್ ಪ್ರಚಾರ: ಜಯರಾಜ್ ಲುಕ್‌ನಲ್ಲೇ ಸುತ್ತಾಡುತ್ತಾರೆ ಡಾಲಿ!

ಹೆಡ್‌ಬುಷ್.. ಬೆಂಗಳೂರಿನ ಭೂಗತ ಲೋಕದ ಹಳೇ ಹಿಸ್ಟರಿಯನ್ನ ಹೇಳೋ ಸಿನಿಮಾ. ಡಾಲಿ ಧನಂಜಯ್ ಇಲ್ಲಿ  ಡಾನ್ ಜಯರಾಜ್ ಪಾತ್ರ ಮಾಡುತ್ತಿದ್ದಾರೆ. ಡಾನ್ ಜಯರಾಜ್ ರೋಲ್ ಡಾಲಿಗೆ ಬಿಟ್ರೆ ಮತ್ತಿನ್ಯಾರಿಗೆ ಸೂಟ್ ಆಗುತ್ತೆ ಅಲ್ವಾ.

ಹೆಡ್‌ಬುಷ್.. ಬೆಂಗಳೂರಿನ ಭೂಗತ ಲೋಕದ ಹಳೇ ಹಿಸ್ಟರಿಯನ್ನ ಹೇಳೋ ಸಿನಿಮಾ. ಡಾಲಿ ಧನಂಜಯ್ ಇಲ್ಲಿ  ಡಾನ್ ಜಯರಾಜ್ ಪಾತ್ರ ಮಾಡುತ್ತಿದ್ದಾರೆ. ಡಾನ್ ಜಯರಾಜ್ ರೋಲ್ ಡಾಲಿಗೆ ಬಿಟ್ರೆ ಮತ್ತಿನ್ಯಾರಿಗೆ ಸೂಟ್ ಆಗುತ್ತೆ ಅಲ್ವಾ. ಆ ಬೆಲ್ಬಾಟಂ ಸ್ಟೈಲ್, ಬಾಯಲ್ಲೊಂದು ಸಿಗರೇಟ್, ಕಣ್ಣಿಗೊಂದು ಕನ್ನಡಕ ಹಾಕಿಕೊಂಡು ಬಂದ್ರೆ ಡಾಲಿ ತೇಟ್ ಡಾನ್ ಜಯರಾಜ್ ತರಾನೇ ಕಾಣ್ತಾರೆ. 1980-90ರ ದಶಕದ ಡಾನ್ ಜಯರಾಜ್ ಸ್ಟೋರಿಯನ್ನ ಹೆಡ್ ಬುಷ್ ಸಿನಿಮಾದಲ್ಲಿ ತೆರೆ ಮೇಲೆ ತರಲಾಗ್ತಿದೆ. ಈ ಸಿನಿಮಾದ ಪ್ರಚಾರವನ್ನ ವಿಭಿನ್ನವಾಗಿ ಮಾಡೋ ಪ್ಲಾನ್ ಮಾಡಿರೋ ನಟ ರಾಕ್ಷಸ ಧನಂಜಯ್ ತಾವು ಎಲ್ಲೆಲ್ಲಿ ಓಡಾಡುತ್ತಾರೋ ಆ ಎಲ್ಲಾ ಕಡೆ ರೆಟ್ರೋ ಸ್ಟೈಲ್‌ನಲ್ಲೇ ಹೋಗಲಿದ್ದಾರಂತೆ. ಈಗ ಕನ್ನಡ ಚಿತ್ರರಂಗದ ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್ ಡಾ.ರಾಜ್ ಕಪ್ ಕ್ರಿಕೆಟ್ ಟೂರ್ನಿ ದುಬೈನಲ್ಲಿ ನಡೆಯುತ್ತಿದೆ. ಈ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರೋ ಧನಂಜಯ್ ಬೆಲ್ಬಾಟಂ ಸ್ಟೈಲ್‌ನಲ್ಲೇ ದುಬೈ ಫ್ಲೈಟ್ ಹತ್ತಿದ್ದಾರೆ. ಹೆಡ್‌ಬುಷ್ ಸಿನಿಮಾದಲ್ಲಿ ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ವಷಿಷ್ಠ ಸಿಂಹ, ರಘು ಮುಖರ್ಜಿ ಶೃತಿ ಹರಿಹರನ್ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಹೆಡ್‌ಬುಷ್ ಸಿನಿಮಾ ಅಕ್ಟೋಬರ್ 21ಕ್ಕೆ ತೆರೆ ಮೇಲೆ ಬರಲಿದೆ. ಈ ಸಿನಿಮಾ ಪ್ರಚಾರವನ್ನ ವಿಭಿನ್ನವಾಗಿ ಮಾಡೋದಕ್ಕೆ ಇಡೀ ಚಿತ್ರತಂಡ ಬೆಲ್ಬಾಟಂ ಸ್ಟೈಲ್‌ನಲ್ಲೇ ಎಲ್ಲಾ ಕಡೆ ಎಂಟ್ರಿ ಕೊಡಲಿದ್ದಾರಂತೆ. ಅಲ್ಲಿಗೆ ಇನ್ಮುಂದೆ ಜಯರಾಜ್‌ನ ರೆಟ್ರೋ ಸ್ಟೈಲ್ ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಆಗೋದ್ರಲ್ಲಿ ಡೌಟೆ ಇಲ್ಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories