Asianet Suvarna News Asianet Suvarna News

Head Bush: ಯೋಗಿಯ ಗೆಲುವಿನ ರಹಸ್ಯಗಳನ್ನು ಬಾಯಿ ಬಿಡಿಸಿದ ಡಾಲಿ ಧನಂಜಯ್!

ಹೆಡ್‌ಬುಷ್ ಸಿನಿಮಾದಲ್ಲಿ ಡಾಲಿ ಧನಂಜಯ್ ಜೈರಾಜ್ ರೋಲ್ ಮಾಡಿದ್ರೆ ಲೂಸ್ ಮಾದ ಯೋಗಿ ಗಂಗ ಅನ್ನೋ ರೌಡಿ ಪಾತ್ರ ಮಾಡಿದ್ದಾರೆ. ಸದ್ಯ ಸಿನಿಮಾದ ಪ್ರಚಾರವನ್ನ ಆರಂಭಿಸಿರೋ ನಟ ರಾಕ್ಷಸ ಡಾಲಿ, ಯೋಗಿಯ ಸ್ಪೆಷಲ್ ಇಂಟರ್ವ್ಯೂ ಮಾಡಿದ್ದು, ಹಲವು ಸಂಗತಿಳನ್ನ ಬಾಯ್ ಬಿಡಿಸಿದ್ದಾರೆ.

Oct 5, 2022, 2:52 PM IST

ಹೆಡ್‌ಬುಷ್ ಸಿನಿಮಾದಲ್ಲಿ ಡಾಲಿ ಧನಂಜಯ್ ಜೈರಾಜ್ ರೋಲ್ ಮಾಡಿದ್ರೆ ಲೂಸ್ ಮಾದ ಯೋಗಿ ಗಂಗ ಅನ್ನೋ ರೌಡಿ ಪಾತ್ರ ಮಾಡಿದ್ದಾರೆ. ಸದ್ಯ ಸಿನಿಮಾದ ಪ್ರಚಾರವನ್ನ ಆರಂಭಿಸಿರೋ ನಟ ರಾಕ್ಷಸ ಡಾಲಿ, ಯೋಗಿಯ ಸ್ಪೆಷಲ್ ಇಂಟರ್ವ್ಯೂ ಮಾಡಿದ್ದು, ಹಲವು ಸಂಗತಿಳನ್ನ ಬಾಯ್ ಬಿಡಿಸಿದ್ದಾರೆ. ಇನ್ನು ಬೆಂಗಳೂರಿನ ಭೂಗತ ಲೋಕದ ಡಾನ್‌ ಜಯರಾಜ್‌ ಅವರ ಜೀವ ಆಧರಿತ ಕತೆ ಹೆಡ್‌ ಬುಷ್‌ ಸಿನಿಮಾ ಅಕ್ಟೋಬರ್‌ 21ಕ್ಕೆ ಬಿಡುಗಡೆಯಾಗುತ್ತಿದ್ದು, ಶೂನ್ಯ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದೀಪಾವಳಿ ಹಬ್ಬಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಈ ಚಿತ್ರಕ್ಕೆ ಅಗ್ನಿ ಶ್ರೀಧರ್‌ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದ ನಾಯಕಿಯಾಗಿ ಪಾಯಲ್‌ ರಜಪೂತ್‌ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment