Asianet Suvarna News Asianet Suvarna News

ವಿಷ್ಣುವರ್ಧನ್ ಮನೆಗೆ ಹೊಸ ರೂಪ: ಹೇಗಿದೆ 'ಸಾಹಸ ಸಿಂಹ'ನ ಗುಹೆ?

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಹಳೆಯ ಮನೆಯನ್ನು ಬೀಳಿಸಿ, ಇದೀಗ ಅದೇ ಜಾಗದಲ್ಲಿ ಭವ್ಯವಾದ ಬಂಗಲೆ ನಿರ್ಮಾಣ ಮಾಡಲಾಗಿದೆ.
 

ವಿಷ್ಣುದಾದನ ಹೊಸ ಮನೆ ಹೇಗೆ ಇರಬಹುದು ಅನ್ನುವ ಕುತೂಹಲದೊಂದಿಗೆ, ಏಷ್ಯಾನೆಟ್ ಸುವರ್ಣ ನ್ಯೂಸ್ ದಾದನ ಮನೆ ದಾರಿ ಹಿಡಿದಿತ್ತು. ಬೆಂಗಳೂರಿನ ಜಯನಗರದ ನಾಲ್ಕನೇ ಬ್ಲಾಕ್'ನ 35ನೇ ಅಡ್ಡ ರಸ್ತೆಯಲ್ಲಿರೋ ವಿಷ್ಣುವರ್ಧನ್ ಮನೆ ಮುಂದೆ ನಿಂತು ನೋಡಿದ್ರೆ, ಕಾಣಿಸಿದ್ದು ಹೊಸ ವಿನ್ಯಾಸದ ಭವ್ಯವಾದ ದೊಡ್ಡ ಬಂಗಲೆ. ವಿಷ್ಣುವರ್ಧನ್ ಬಾಳಿ ಬದುಕಿ, ಬೆಳೆದು ಅದೆಷ್ಟೋ ನೆನಪುಗಳಿದ್ದ ಸಿಂಹಾಲಯ. ಈಗ ಈ ಸಿಂಹಾಲಯ ಹೊಸ ರೂಪದಲ್ಲಿ ತಲೆ ಎತ್ತಿದೆ. ವಿಷ್ಣುವರ್ಧನ್ ಅವ್ರ ಹಳೆಯ ಮನೆಯನ್ನ ಬೀಳಿಸಿ ಈಗ ಅದೇ ಜಾಗದಲ್ಲಿ ಭವ್ಯವಾದ ಬಂಗಲೆ ನಿರ್ಮಾಣ ಆಗಿದೆ. ವಿಷ್ಣುದಾದನ ಪತ್ನಿ ಭಾರತಿ ವಿಷ್ಣುವರ್ಧನ್ ಈ ಮನೆಯನ್ನ ನವೀಕರಣ ಮಾಡಿದ್ದಾರೆ. ಈ ಮನೆಯಲ್ಲೂ ವಿಷ್ಣುವರ್ಧನ್ ನೆನಪುಗಳಿಗೆ ಮರು ಜೀವ ಕೊಡಲಾಗಿದೆ. ವಿಷ್ಣುದಾದನ ಹೊಸ ಮನೆ ಈಗಿನ ಟ್ರೆಂಡ್‌ಗೆ ತಕ್ಕಂತೆ ನಿರ್ಮಾಣವಾಗಿದೆ. ಈ ಮನೆಯಲ್ಲಿ ವಿಷ್ಣುರ್ಧನ್ ಅವರಿಗೆ ಇಷ್ಟವಾದ ಕೆಲವು ಜಾಗಗಳನ್ನು ಹಾಗೆ ಉಳಿಸಿಕೊಳ್ಳಲಾಗಿದೆ. 

ಮಂಗಳಮುಖಿಯಾಗಿ ಬದಲಾದ ಖ್ಯಾತ ನಟ; ಯಾರೆಂದು ಗುರುತಿಸಬಲ್ಲಿರಾ?
 

Video Top Stories