Asianet Suvarna News Asianet Suvarna News

ಬೈರಾಗಿಗೆ ಅದ್ದೂರಿ ಸ್ವಾಗತ ಕೋರಿದ ಜನ, ಶಿವಣ್ಣನ ಮಿಮಿಕ್ರಿ, ಡಾಲಿ ಡೈಲಾಗ್‌ಗೆ ಫಿದಾ..!

ಬೈರಾಗಿ ಚಿತ್ರದ ಪ್ರೀ ರಿಲೀಸ್‌ ಕಾರ್ಯಕ್ರಮ ಚಾಮರಾಜನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹಿನ್ನೆಲೆ ತವರಿಗೆ ಆಗಮಿಸಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ಡಾಲಿ ಧನಂಜಯ ಅವರಿಗೆ ನಗರದ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಲಾಯಿತು.

First Published Jun 26, 2022, 2:43 PM IST | Last Updated Jun 26, 2022, 4:17 PM IST

ಬೈರಾಗಿ ಚಿತ್ರದ ಪ್ರೀ ರಿಲೀಸ್‌ (Bairagee Pre Release Event) ಕಾರ್ಯಕ್ರಮ ಚಾಮರಾಜನಗರದ (Chamarajanagar)  ಡಾ.ಬಿ.ಆರ್‌.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹಿನ್ನೆಲೆ ತವರಿಗೆ ಆಗಮಿಸಿದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ಡಾಲಿ ಧನಂಜಯ ಅವರಿಗೆ ನಗರದ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಲಾಯಿತು.

ಡೊಳ್ಳು ಬಾರಿಸಿ, ಹೂ ಮಳೆ ಸುರಿಸಿ 'ಬೈರಾಗಿ' ರಥ ಸ್ವಾಗತಿಸಿದ ಫ್ಯಾನ್ಸ್

ನಗರದ ಸಂತೇಮರಹಳ್ಳಿ ವೃತ್ತಕ್ಕೆ ಶಿವಣ್ಣ ಬರುತ್ತಿದ್ದಂತೆ ಕ್ರೇನ್‌ ಸಹಾಯದಿಂದ ಭಾರೀ ಗಾತ್ರದ ಸೇಬಿನ ಹಾರವನ್ನು ಹಾಕಿ ಪುಷ್ಪವೃಷ್ಟಿಯನ್ನೇ ಸುರಿಸಲಾಯಿತು. ಚಾಮರಾಜನಗರ ನಂದು, ಬರ್ಕಳಯ್ಯ ಎಂದು ಜೋಗಪ್ಪನ ಚಿತ್ರದ ಡೈಲಾಗ್‌ ಹೇಳಿ ರಂಜಿಸಿದ ಶಿವಣ್ಣ ಎರಡು ನಿಮಿಷ ನೃತ್ಯವನ್ನೂ ಮಾಡಿದರು. ಸೈಲೆನ್ಸ್‌.. ಸೈಲೆನ್ಸ್‌ ಎಂದು ಅಭಿಮಾನಿಗಳಿಗೆ ಗದರಿ, ಮಾತು ಕೇಳುವಂತೆ ಕೋರಿಕೊಂಡಿದ್ದು ಅಭಿಮಾನಿ ಒಬ್ಬನಂತೆ ಮಿಮಿಕ್ರಿ ಮಾಡಿದರು. ಶಿವಣ್ಣಗೆ ಡಾಲಿ ಧನಂಜಯ ಸಾಥ್‌ ಕೊಟ್ಟರು.

ಶಿವಣ್ಣನ ಹತ್ತಿರ ಹೋಗಲು ನೂರಾರು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಪೊಲೀಸರು ಲಾಠಿ ಬೀಸಿ ಬೆತ್ತದ ರುಚಿ ತೋರಿಸಿದರು. ಸುತ್ತಮುತ್ತಲಿನ ಮನೆಗಳು, ಮಳಿಗೆ ಮೇಲೆಲ್ಲಾ ಜನರು ಹತ್ತಿ ನೆಚ್ಚಿನ ನಟನನ್ನು ಕಣ್ತುಂಬಿಕೊಂಡರು.