Asianet Suvarna News Asianet Suvarna News

ಡೊಳ್ಳು ಬಾರಿಸಿ, ಹೂ ಮಳೆ ಸುರಿಸಿ 'ಬೈರಾಗಿ' ರಥ ಸ್ವಾಗತಿಸಿದ ಫ್ಯಾನ್ಸ್

ಬೆಂಗಳೂರಿನ ಗವಿಪುರಂನಿಂದ ಬೈರಾಗಿ ಯಾತ್ರೆ ಶುರುವಾಗಿದೆ. ಶಿವಣ್ಣ ಜೊತೆ ಡಾಲಿ ಧನಂಜಯ್, ಪೃಥ್ವಿ ಅಂಬರ್ ಸಾಥ್ ನೀಡಿದ್ದಾರೆ. ಬಿಡದಿ, ರಾಮನಗರ, ಮಂಡ್ಯ ಹಾಗೂ ಮೈಸೂರು ಮಾರ್ಗವಾಗಿ ಬೈರಾಗಿ ಯಾತ್ರೆ ಸಾಗಲಿದೆ. ರಾಮನಗರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಬೈರಾಗಿ ಯಾತ್ರೆಗೆ ಅದ್ದೂರಿ ಸ್ವಾಗತ ಸಿಕ್ಕಿದೆ. 

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಜುಲೈ 1ರಂದು ಸಿನಿಮಾ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇಂದಿನಿಂದ ಸಿನಿಮಾತಂಡ ಪ್ರಿ ರಿಲೀಸ್ ಯಾತ್ರೆ ಹಮ್ಮಿಕೊಂಡಿದೆ.  ಬೆಂಗಳೂರಿನ ಗವಿಪುರಂನಿಂದ ಬೈರಾಗಿ ಯಾತ್ರೆ ಶುರುವಾಗಿದೆ. ಶಿವಣ್ಣ ಜೊತೆ ಡಾಲಿ ಧನಂಜಯ್, ಪೃಥ್ವಿ ಅಂಬರ್ ಸಾಥ್ ನೀಡಿದ್ದಾರೆ. ಬಿಡದಿ, ರಾಮನಗರ, ಮಂಡ್ಯ ಹಾಗೂ ಮೈಸೂರು ಮಾರ್ಗವಾಗಿ ಬೈರಾಗಿ ಯಾತ್ರೆ ಸಾಗಲಿದೆ. ರಾಮನಗರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಬೈರಾಗಿ ಯಾತ್ರೆಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಅಭಿಮಾನಿಗಳು ಡೊಳ್ಳು ಬಾರಿಸಿ, ಹೂ ಮಳೆ ಸುರಿಸಿ ರಥಕ್ಕೆ ಸ್ವಾಗತ ಕೋರಿದ್ದಾರೆ.  ಅಂದಹಾಗೆ ನಾಳೆ ಸಂಜೆ ಚಾಮರಾಜನಗರದಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿಅದ್ದೂರಿಯಾಗಿ ಕಾರ್ಯಕ್ರಮ ನಡೆಯುತ್ತಿದೆ.