Asianet Suvarna News Asianet Suvarna News

Raymo; ನಾಳೆ ರೇಮೊ ಸಿನಿಮಾ ಬಿಡುಗಡೆ: ಹೀರೋ ಇಶಾನ್ ಬಗ್ಗೆ ನಿಮಗೆಷ್ಟು ಗೊತ್ತು?

ಕನ್ನಡದ ರೇಮೊ ಸಿನಿಮಾ ನಾಳೆ ಬೆಳ್ಳಿತೆರೆ ಮೇಲೆ ಬರುತ್ತಿದ್ದು, ಆಶಿಕಾ ರಂಗನಾಥ್ ಹಾಗೂ ಇಶಾನ್ ಜೋಡಿ ಕುತೂಹಲ ಮೂಡಿಸಿದೆ.

ರೇಮೊ ಟ್ರೈಲರ್'ನಲ್ಲಿ ಇಶಾನ್ ನಟನೆ ನೋಡಿ, ಸ್ಯಾಂಡಲ್ ವುಡ್ ಮಂದಿ ಮಾಡಾಡುತ್ತಿದ್ದಾರೆ. ಇಶಾನ್'ಗೆ ನಟನಾಗುವ ಹುಚ್ಚು ಬಿಟ್ಟರೆ ಮತ್ತಿನ್ನೇನು ಇಲ್ಲ. ಇದಕ್ಕಾಗಿ ಯಾವಾಗ್ಲೂ ನಟನೆ, ಡ್ಯಾನ್ಸ್ ಕಲಿಯೋದ್ರ ಜೊತೆ ಜಿಮ್'ನಲ್ಲಿ ಕಸರತ್ತು ಮಾಡ್ತಾರೆ. ಇಶಾನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ರ ನೆಚ್ಚಿನ ಹುಡುಗ. ಈ ರೋಗ್ ಹೀರೋನ ಆಟಿಟ್ಯೂಡ್,ಸ್ಟೈಲ್, ಹೈಟ್, ಸಿಂಪ್ಲಿಸಿಟಿ ಎಲ್ಲವೂ ಕಿಚ್ಚನಿಗೆ ಇಂಪ್ರೆಸ್ ಮಾಡಿದೆ. ಹೀಗಾಗೆ ದಿ ವಿಲನ್ ಸಿನಿಮಾದಲ್ಲಿ ಕಿಚ್ಚನ ಎಂಟ್ರಿ ಹಾಡಿನಲ್ಲಿ ಇಶಾನ್ ಕಾಣಿಸಿಕೊಂಡಿದ್ರು. ಇಶಾನ್ ಈಗ ಕನ್ನಡಿಗರ ಮನಸ್ಸು ಗೆಲ್ಲುತ್ತಿದ್ದಾರೆ. ಆದ್ರೆ ಇದರ ಹಿಂದೆ ಇಶಾನ್ 8 ವರ್ಷದ ಶ್ರಮ ಇದೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಶಿವಂ ಸಿನಿಮಾದ ಒಂದು ಆಕ್ಷನ್ ದೃಶ್ಯದಲ್ಲಿ ಇಶಾನ್ ಕಾಣಿಸಿಕೊಂಡಿದ್ರು. ಅದಾದ ನಂತರ ವಿಲನ್ ಸಿನಿಮಾ. ಬಳಿಕ ಸ್ಟಾರ ಡೈರೆಕ್ಟರ್ ಪುರಿ ಜಗನ್ನಾಥ್ ನಿರ್ದೇಶನದ ರೋಗ್ ಸಿನಿಮಾದಲ್ಲಿ ನಟನೆ ಮಾಡಿದ್ರು.

Samantha: ಅನಾರೋಗ್ಯದ ವದಂತಿ ವೈರಲ್: ಮತ್ತೆ ಆಸ್ಪತ್ರೆಗೆ ದಾಖಲಾದ್ರಾ ಸ್ಯಾಮ್?

Video Top Stories