Asianet Suvarna News Asianet Suvarna News

Samantha: ಅನಾರೋಗ್ಯದ ವದಂತಿ ವೈರಲ್: ಮತ್ತೆ ಆಸ್ಪತ್ರೆಗೆ ದಾಖಲಾದ್ರಾ ಸ್ಯಾಮ್?

ಟಾಲಿವುಡ್ ಸ್ಟಾರ್ ಸಮಂತಾ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

Rumours Samantha hospitalised in Hyderabad after Myositis diagnosis sgk
Author
First Published Nov 24, 2022, 11:09 AM IST

ಟಾಲಿವುಡ್ ಸ್ಟಾರ್ ನಟಿ ಸಮಂತಾ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ.  ಸ್ಯಾಮ್ ಸಿನಿಮಾ, ಶೂಟಿಂಗ್, ಫೋಟೋಶೂಟ್ ಅಂತ ಸಖತ್ ಅಕ್ಟೀವ್ ಆಗಿದ್ದರು. ಆದರೀಗ Myositis ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸಮಂತಾ ಕೆಲವು ದಿನಗಳ ಹಿಂದೆಯಷ್ಟೆ ಬಹಿರಂಗ ಪಡಿಸಿದ್ದರು. ಸಮಂತಾ ಅನಾರೋಗ್ಯ ವಿಚಾರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ಸಮಂತಾ ಅನಾರೋಗ್ಯದ ಸುದ್ದಿ ಮತ್ತೆ ಸದ್ದು ಮಾಡುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ನವೆಂಬರ್ 23ರಂದು ಸಮಂತಾ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಈ ಸುದ್ದಿಯನ್ನು ಸಮಂತಾ ಟೀಂ ತಳ್ಳಿ ಹಾಕಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಸಮಂತಾ ಯಾವುದೇ ಆಸ್ಪತ್ರೆಗೆ ದಾಖಲಾಗಿಲ್ಲ. ಮನೆಯಲ್ಲೇ ಇದ್ದಾರೆ ಎಂದು ಸಮಂತಾ ಟೀಂ ಹೇಳಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. 

ನಟಿ ಸಮಂತಾ ಇತ್ತೀಚಿಗಷ್ಟೆ ಯಶೋದ ಸಿನಿಮಾ ಮೂಲಕ ಅಭಿಮಾನಿಗಳ  ಮುಂದೆ ಬಂದಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಾರೋಗ್ಯದ ನಡುವೆಯೂ ಸಮಂತಾ ಯಶೋದ ಪ್ರಮೋಶನ್ ನಲ್ಲಿ ಭಾಗಿಯಾಗಿದ್ದರು. ಪ್ರಮೋಷನ್ ವೇಳೆ ಅನಾರೋಗ್ಯದ ಬಗ್ಗೆ ಮಾತನಾಡಿ ಕಣ್ಣೀರಾಕಿದ್ದರು. ನಾನಿನ್ನೂ ಸತ್ತಿಲ್ಲ, ನನಗೆ ಬಂದಿರುವುದು ಮಾರಣಾಂತಿಕ ಕಾಯಿಲೆಯಲ್ಲ ಎಂದು ಭಾವುಕರಾಗಿದ್ದರು. 'ನನ್ನ ಸ್ಥಿತಿ ಜೀವಕ್ಕೆ ಅಪಾಯಕಾರಿ ಎಂದು ಅನೇಕ ವರದಿಗಳನ್ನು ನೋಡಿದೆ. ಆದರೆ ಇದು ಜೀವಕ್ಕೆ ಅಪಾಯಕಾರಿಯಲ್ಲ. ನಾನು ಇನ್ನೂ ಸತ್ತಿಲ್ಲ. ಇಂಥ ಹೆಡ್ ಲೈನ್ ಗಳು ತುಂಬಾ ಅಗತ್ಯ ಎಂದು ಭಾವಿಸಿಲ್ಲ' ಎಂದು ಹೇಳಿದ್ದರು. ಸಮಂತಾ ಭಾವುಕ ಸಂದರ್ಶನದ ವಿಡಿಯೋ ವೈರಲ್ ಆಗಿತ್ತು. ಅಭಿಮಾನಿಗಳು ಧೈರ್ಯ ತುಂಬಿ ಸಂದೇಶ ಕಳುಹಿಸಿದ್ದರು. 

ಅನಾರೋಗ್ಯದ ನಡುವೆಯೂ ಐವಿ ಡ್ರಿಪ್ಸ್ ಹಾಕೊಂಡೆ ವರ್ಕೌಟ್ ಮಾಡಿದ ಸಮಂತಾ; ವಿಡಿಯೋ ವೈರಲ್

ಅನಾರೋಗ್ಯದ ನಡುವೆಯು ಸಮಂತಾ ವರ್ಕೌಟ್ ಮಾಡುತ್ತಿದ್ದರು. ಐವಿ ಡ್ರಿಪ್ಸ್ ಹಾಕೊಂಡೆ ವರ್ಕೌಟ್ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದರು.  ಸಿನಿಮಾ ಸಕ್ಸಸ್‌ನ ಖುಷಿಯಲ್ಲಿರುವ ಸಮಂತಾ ಮತ್ತೆ ವರ್ಕೌಟ್ ಶುರುಮಾಡಿದ್ದರು. ಈ ಮೂಲಕ ಚೇತರಿಸಿಕೊಳ್ಳುತ್ತಿರುವುದಾಗಿ ಹೇಳಿದ್ದರು. ಐವಿ ಡ್ರಿಪ್ಸ್ ಹಾಕೊಂಡೆ ವರ್ಕೌಟ್ ಮಾಡುತ್ತಿರುವ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಸಮಂತಾ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಸಮಂತಾರ ಜೊತೆ ಡಿವೋರ್ಸ್‌ to ಬಾಲಿವುಡ್‌ ಎಂಟ್ರಿ: ನಾಗಚೈತನ್ಯರ ಇಂಟರೆಸ್ಟಿಂಗ್‌ ವಿಷಯಗಳು

ಜಿಮ್ ಟ್ರೈನರ್ ಬಗ್ಗೆ ಸಮಂತಾ ಮಾತು

ಇತ್ತೀಚಿಗಷ್ಟೆ ಸಮಂತಾ ಜಿಮ್ ಟ್ರೈನರ್‌ನನ್ನು ಅಪ್ಪಿಕೊಂಡು ಭಾವುಕ ಸಾಲನ್ನು ಬರೆದಿದ್ದರು. ಯಶೋದ ಸಕ್ಸಸ್‌ಗೆ ಕಾರಣರಾದವರಲ್ಲಿಒಬ್ಬರಾದ ಹಾಗೂ ತನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡಿದ ಜಿಮ್ ಟ್ರೈನರ್ ಜುನೈದ್ ಬಗ್ಗೆ ಪ್ರೀತಿಯ ಸಾಲುಗಳನ್ನು ಹಂಚಿಕೊಂಡಿದ್ದರು. ಜಿಲೇಬಿ ತಿಂದು ಸಕ್ಸಸ್ ಸಂಭ್ರಮಿಸಿದ್ದ ಸಮಂತಾ, 'ಜುನೈದ್ ನನಗೆ ಜಿಲೇಬಿ ತಿನ್ನಲು ಅನುಮತಿ ನೀಡಿದರು. ಯಶೋದ ಸಕ್ಸಸ್ ಆಚರಣೆ ಮಾಡಿದೆವು. ಅದರಲ್ಲೂ ಅಕ್ಷನ್ ದೃಶ್ಯಗಳು. ಕಳೆದ ಕೆಲವು ತಿಂಗಳಿಂದ ನನ್ನ ಜೊತೆ ಇದ್ದ ಕೆಲವೇ ಕೆಲವರಲ್ಲಿ ನೀವು ಒಬ್ಬರು' ಎಂದು ಹೇಳಿದ್ದರು.

Follow Us:
Download App:
  • android
  • ios