SIIMA; ಅಪ್ಪು ಸರ್‌ನ ತುಂಬಾ ಮಿಸ್‌ ಮಾಡ್ತಿದ್ದೀವಿ- ಅಮೃತಾ ಅಯ್ಯಂಗಾರ್

ಸೈಮಾ ಸಮಾರಂಭದಲ್ಲಿ ಭಾಗಿಯಾದ ನಟಿ ಅಮೃತಾ ಅಯ್ಯಂಗಾರ್ ಮಾತನಾಡಿ, ಅಪ್ಪು ಸರ್ ಗಾಗಿ ಇಡಿ ಸೌತ್ ಇಂಡಿಯಾ ಒಂದಾಗಿ ಸೆಲೆಬ್ರೇಟ್ ಮಾಡುತ್ತಿರುವುದು ತುಂಬಾ ಇದೆ. ಅಪ್ಪು ಸರ್‌ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ.

First Published Sep 11, 2022, 5:32 PM IST | Last Updated Sep 11, 2022, 5:32 PM IST

ಪ್ರತಿಷ್ಠಿತ ಸೈಮಾ 2022 (SIIMA) ಪ್ರಶಸ್ತಿ ಕಾರ್ಯಕ್ರಮ ಸಮಾರಂಭ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಸೆಪ್ಟಂಬರ್ 10, 11ರಂದು ಬೆಂಗಳೂರಿನಲ್ಲಿ 10ನೇ ಸೈಮಾ ನಡೆಯಲಿದ್ದು ದಕ್ಷಿಣ ಭಾರತದ ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ.  ಬೆಂಗಳೂರಿನ ಪ್ಯಾಲೇಸ್ ​ಗ್ರೌಂಡ್ ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.  ಈ ಬಾರಿಯ ಸೈಮಾ ವಿಶೇಷ ಎಂದರೆ ಕಳೆದ ವರ್ಷ ನಿಧನ ಹೊಂದಿದ ಪುನೀತ್​ ರಾಜ್​ಕುಮಾರ್ ಅವರಿಗೆ ವಿಶೇಷ ಗೌರವ ನೀಡಲಾಗಿದೆ. ಸೈಮಾ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನಟಿರು ಸುಂದರವಾಗಿ ಕಂಗೊಳಿಸಿದ್ದಾರೆ. ನಟಿ ಅಮೃತಾ ಅಯ್ಯಂಗಾರ್ ಮಾತನಾಡಿ, ಅಪ್ಪು ಸರ್ ಗಾಗಿ ಇಡಿ ಸೌತ್ ಇಂಡಿಯಾ ಒಂದಾಗಿ ಸೆಲೆಬ್ರೇಟ್ ಮಾಡುತ್ತಿರುವುದು ತುಂಬಾ ಇದೆ. ಅಪ್ಪು ಸರ್‌ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಕಳೆದ ಬಾರಿ ಲವ್ ಮಾಕ್‌ಟೇಲ್ ನಿಂದ ನಾಮಿನೇಟ್ ಆಗಿದಂದ ಈ ಬಾರಿ ಭಡವ ರಾಸ್ಕಲ್ ನಿಂದ ನಾಮಿನೇಟ್ ಆಗಿದ್ದೇನೆ ಎಂದು ಹೇಳಿದರು. ಇನ್ನು ಮಾನ್ವಿತಾ, ಅಶಾ ಭಟ್ ಮಾತನಾಡಿ ಸಂತಸ ವ್ಯಕ್ತಪಡಿಸಿದರು. 
 

Video Top Stories