Asianet Suvarna News Asianet Suvarna News

ರಶ್ಮಿಕಾ ಸಾಮಿ ಸಾಮಿ ಎಂದು ಕುಣಿದಿದ್ದೇ ತಪ್ಪಾಯ್ತಾ?: ದಿಢೀರ್ ಆಸ್ಪತ್ರೆಗೆ ದಾಖಲಾದ ಶ್ರೀವಲ್ಲಿ!

ತನ್ನ ಬ್ಯೂಸಿ ಲೈಫ್ ಮಧ್ಯೆ ರಶ್ಮಿಕಾ ಈಗ ಆಸ್ಪತ್ರೆ ಸೇರಿದ್ದಾರೆ. ಅರೆ ಇಷ್ಟೊಂದು ಚೆನ್ನಾಗಿರೋ ರಶ್ಮಿಕಾ ಆಸ್ಪತ್ರೆ ಸೇರುವಂತದ್ದು ಏನಾಯ್ತು ಅಂತ ಕೇಳುತ್ತೀರಾ? ಅದಕ್ಕೆ ಕಾರಣ ಪುಷ್ಪ ಬ್ಯೂಟಿ ಶ್ರೀವಲ್ಲಿ ಸಾಮಿ ಸಾಮಿ ಎಂದು ಕುಣಿದಿದ್ದಂತೆ. 

ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಕನ್ನಡದ ವಿಚಾರಕ್ಕೆ ಕಿರಿಕ್ ಮಾಡಿಕೊಳ್ಳೋದು ಕಾಮನ್ ಆಗಿ ನೀವೆಲ್ಲಾ ನೋಡಿದ್ದೀರಾ. ಈ ಎಳೆ ವಯಸ್ಸಿನ ಬ್ಯೂಟಿ ಬಣ್ಣದ ಜಗತ್ತಿನಲ್ಲಿ ಈಗಾಗ್ಲೆ ಆಕಾಶದೆತ್ತರಕ್ಕೆ ಹಾರಿದ್ದಾರೆ. ಸ್ಯಾಂಡಲ್‌ವುಡ್ ಬಿಟ್ಟು ಹೀಗಿರೋ ರಶ್ಮಿಕಾ, ಟಾಲಿವುಡ್, ಕಾಲಿವುಡ್, ಬಾಲಿವುಡ್‌ನಲ್ಲೇ ಬ್ಯುಸಿ ಆಗ್ಬಿಟ್ಟಿದ್ದಾರೆ. ತನ್ನ ಬ್ಯೂಸಿ ಲೈಫ್ ಮಧ್ಯೆ ರಶ್ಮಿಕಾ ಈಗ ಆಸ್ಪತ್ರೆ ಸೇರಿದ್ದಾರೆ. ಅರೆ ಇಷ್ಟೊಂದು ಚೆನ್ನಾಗಿರೋ ರಶ್ಮಿಕಾ ಆಸ್ಪತ್ರೆ ಸೇರುವಂತದ್ದು ಏನಾಯ್ತು ಅಂತ ಕೇಳುತ್ತೀರಾ? ಅದಕ್ಕೆ ಕಾರಣ ಪುಷ್ಪ ಬ್ಯೂಟಿ ಶ್ರೀವಲ್ಲಿ ಸಾಮಿ ಸಾಮಿ ಎಂದು ಕುಣಿದಿದ್ದಂತೆ. ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಕಾರಣದಿಂದ ರಶ್ಮಿಕಾ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಪುಷ್ಪ ಸಿನಿಮಾದಲ್ಲಿ ಸಾಮಿ ಸಾಮಿ ಅನ್ನೋ ಡಾನ್ಸ್ ಅನ್ನ ರಶ್ಮಿಕಾ ಹೋದಲ್ಲಿ ಬಂದಲ್ಲೆಲ್ಲಾ ಮಾಡುತ್ತಾರೆ. ಹೀಗಾಗಿ ಈ ಡಾನ್ಸ್‌ನಿಂದ ರಶ್ಮಿಕಾಗೆ ಮೊಣಕಾಲು ನೋವು ಬಂದಿದೆ ಅಂತ ಚಿಕಿತ್ಸೆ ನೀಡಿರೋ ವೈದ್ಯ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ತಿಳಿಸಿದ್ದಾರೆ. ರಶ್ಮಿಕಾ ಹೈದರಾಬಾದ್‌ನಲ್ಲಿ ತಮ್ಮ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆದುಕೊಂಡಿದ್ದು, ಆದಷ್ಟು ಬೇಗ ಚೇತರಿಸಿಕೊಂಡು ಮತ್ತೆ ಶೂಟಿಂಗ್ ಮರಳಲಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories