Asianet Suvarna News Asianet Suvarna News

ಅಕ್ಟೋಬರ್ 5ಕ್ಕೆ ಇನ್ನೊಂದು ಗುಡ್ ನ್ಯೂಸ್ ಕೊಡಲಿದ್ದಾರೆ ಮೋಹಕ ತಾರೆ ರಮ್ಯಾ

ಸ್ಯಾಂಡಲ್‌ವುಡ್‌ಗೆ ನಿರ್ಮಾಪಕಿಯಾಗಿ ಮತ್ತೆ ಕಮ್ ಬ್ಯಾಕ್ ಮಾಡಿರುವ ಮೋಹಕ ತಾರೆ ರಮ್ಯಾ, ಇತ್ತಿಚೆಗಷ್ಟೇ ತಮ್ಮ ಸಂಸ್ಥೆಯ ಹೆಸರನ್ನು ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ತಮ್ಮ ಆ್ಯಪಲ್ ಬಾಕ್ಸ್ ಸಿನಿಮಾ ಸಂಸ್ಥೆಯಿಂದ ಹಲವಾರು ಚಿತ್ರಗಳನ್ನು ಮತ್ತೆ ವೆಬ್ ಸೀರಿಸ್ ಮಾಡುವುದಾಗಿಯೂ ಘೋಷಣೆ ಮಾಡಿದ್ದರು. 

Oct 2, 2022, 1:03 PM IST

ಸ್ಯಾಂಡಲ್‌ವುಡ್‌ಗೆ ನಿರ್ಮಾಪಕಿಯಾಗಿ ಮತ್ತೆ ಕಮ್ ಬ್ಯಾಕ್ ಮಾಡಿರುವ ಮೋಹಕ ತಾರೆ ರಮ್ಯಾ, ಇತ್ತಿಚೆಗಷ್ಟೇ ತಮ್ಮ ಸಂಸ್ಥೆಯ ಹೆಸರನ್ನು ಅನೌನ್ಸ್ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದರು. ತಮ್ಮ ಆ್ಯಪಲ್ ಬಾಕ್ಸ್ ಸಿನಿಮಾ ಸಂಸ್ಥೆಯಿಂದ ಹಲವಾರು ಚಿತ್ರಗಳನ್ನು ಮತ್ತೆ ವೆಬ್ ಸೀರಿಸ್ ಮಾಡುವುದಾಗಿಯೂ ಘೋಷಣೆ ಮಾಡಿದ್ದರು. ಇದೀಗ ಮತ್ತೊಂದು ಗುಡ್ ನ್ಯೂಸ್ ಕೊಡಲು ಅವರು ಮುಂದಾಗಿದ್ದಾರೆ. ಹೌದು! ರಿಷಬ್‌ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ನೋಡಲು ಬಂದಿದ್ದ ರಮ್ಯಾ, ಮಾಧ್ಯಮಗಳ ಜೊತೆ ಮಾತನಾಡುತ್ತಾ, ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುವುದಾಗಿ ತಿಳಿಸಿದರು. ಅಕ್ಟೋಬರ್ 5 ರಂದು ಆ ಸುದ್ದಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment