Asianet Suvarna News Asianet Suvarna News

ಡಿಂಪಲ್ ಕ್ವೀನ್ ರಚಿತಾ ಬರ್ತಡೇ ಪಾರ್ಟಿ ಹೇಗಿತ್ತು? ಇಲ್ಲಿದೆ ವಿವರ

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ಎಂದೇ ಫೇಮಸ್ ಆಗಿರುವ ನಟಿ ರಚಿತಾ ರಾಮ್ ಅದ್ದೂರಿಯಾಗಿ ಜನ್ಮದಿನ ಆಚರಿಸಿದ್ದಾರೆ.

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ಎಂದೇ ಫೇಮಸ್ ಆಗಿರುವ ನಟಿ ರಚಿತಾ ರಾಮ್ ಅದ್ದೂರಿಯಾಗಿ ಜನ್ಮದಿನ ಆಚರಿಸಿದ್ದಾರೆ. 29 ವರ್ಷಕ್ಕೆ ಕಾಲಿಟ್ಟಿರುವ ನಟಿ ರಚಿತಾಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಶುಭ ಕೋರಿದ್ದಾರೆ. ಸ್ಯಾಂಡಲ್ ವುಡ್‌ನ ಭಾರಿ ಬೇಡಿಕೆ ಸೃಷ್ಟಿಸಿಕೊಂಡವರು ರಚಿತಾ ರಾಮ್, ಸುದೀಪ್ ಶಿವಣ್ಣ, ಪುನೀತ್ ರಾಜ್ ಕುಮಾರ್ ಸೇರಿ ಸಾಕಷ್ಟು ಹೀರೋಗಳ ಜೊತೆ  ತೆರೆ ಹಂಚಿಕೊಂಡಿದ್ದಾರೆ. ಸದ್ಯ ಅಭಿಮಾನಿಗಳ ಜೊತೆ ಬರ್ತಡೇ ಆಚರಿಸಿಕೊಂಡಿರುವ ರಚಿತಾ ಅವರ ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗಿವೆ. ರಚಿತಾ ಸದ್ಯ ಬ್ಯಾಡ್ ಮ್ಯಾನರ್ಸ್, ಲವ್ ಮಿ ಆರ್ ಹೇಟ್ ಮಿ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ.