ಬಾಕ್ಸಾಫೀಸಲ್ಲಿ ಅಭಿನಯ ಚಕ್ರವರ್ತಿಯ ಅಧಿಪತ್ಯ; 200 ಕೋಟಿಗೆ ವಿಕ್ರಾಂತ್ ರೋಣ ಟಾರ್ಗೆಟ್
ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ನಲ್ಲಿ ಈಗ ಕನ್ನಡ ಸಿನಿಮಾಗಳದ್ದೇ ಸದ್ದು.. ಸ್ಯಾಂಡಲ್ ವುಡ್ ನ ಮೂರು ಬಿಗ್ ಹಿಟಿ ಸಿನಿಮಾಗಳು ಇಂಡಿಯನ್ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಲೀಸ್ಟ್ ಸೇರಿವೆ. ಕೆಜಿಎಫ್-2 ಬಳಿಕ 777 ಚಾರ್ಲಿ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತ್ತು. ಈಗ ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ಅಭಿನಯ ಚಕ್ರವರ್ತಿ ಅಧಿಪತ್ಯ ಸಾಧಿಸುತ್ತಿದ್ದು, 200 ಕೋಟಿಗೆ ಟಾರ್ಗೆಟ್ ರೀಚ್ ಆಗೋಕೆ ಎರಡೇ ಮೆಟ್ಟಿಲು ಎನ್ನುತ್ತಿದ್ದಾನೆ ವಿಕ್ರಾಂತ್ ರೋಣ. ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ 13 ದಿನ ಕಳೆದಿದೆ. 25ನೇ ದಿನದತ್ತ ಮುನ್ನುಗ್ಗುತ್ತಿರೋ ವಿಕ್ರಾಂತ್ ರೋಣನನ್ನ ವೀಕ್ಎಂಡ್ನಲ್ಲಿ ಹೆಚ್ಚು ಜನ ನೋಡುತ್ತಿದ್ದಾರೆ.
ಭಾರತೀಯ ಚಿತ್ರರಂಗದ ಬಾಕ್ಸಾಫೀಸ್ನಲ್ಲಿ ಈಗ ಕನ್ನಡ ಸಿನಿಮಾಗಳದ್ದೇ ಸದ್ದು.. ಸ್ಯಾಂಡಲ್ ವುಡ್ ನ ಮೂರು ಬಿಗ್ ಹಿಟಿ ಸಿನಿಮಾಗಳು ಇಂಡಿಯನ್ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಲೀಸ್ಟ್ ಸೇರಿವೆ. ಕೆಜಿಎಫ್-2 ಬಳಿಕ 777 ಚಾರ್ಲಿ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತ್ತು. ಈಗ ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ಅಭಿನಯ ಚಕ್ರವರ್ತಿ ಅಧಿಪತ್ಯ ಸಾಧಿಸುತ್ತಿದ್ದು, 200 ಕೋಟಿಗೆ ಟಾರ್ಗೆಟ್ ರೀಚ್ ಆಗೋಕೆ ಎರಡೇ ಮೆಟ್ಟಿಲು ಎನ್ನುತ್ತಿದ್ದಾನೆ ವಿಕ್ರಾಂತ್ ರೋಣ. ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ 13 ದಿನ ಕಳೆದಿದೆ. 25ನೇ ದಿನದತ್ತ ಮುನ್ನುಗ್ಗುತ್ತಿರೋ ವಿಕ್ರಾಂತ್ ರೋಣನನ್ನ ವೀಕ್ಎಂಡ್ನಲ್ಲಿ ಹೆಚ್ಚು ಜನ ನೋಡುತ್ತಿದ್ದಾರೆ. ವೀಕ್ ಎಂಡ್ ಬಂದ್ರೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರೋ ವಿಕ್ರಾಂತ್ ರೋಣ ಫ್ಯಾಮಿಲಿ ಆಡಿಯೆನ್ಸ್ ಮನ ಮೆಚ್ಚಿದೆ. ಹೀಗಾಗಿ ಈ ಸಿನಿಮಾ ಕಳೆದ ಭಾನುವಾರ ಬರೋಬ್ಬರಿ 3.5 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟವನ್ನು ಮುಂದುವರೆಸಿದೆ. ಈಗಾಗ್ಲೆ 150 ಕೋಟಿ ಗಡಿ ದಾಟಿರೋ ಕಿಚ್ಚನ ಸಿನಿಮಾ ಸದ್ಯದಲ್ಲೇ 200 ಕೋಟಿ ಕ್ಲಬ್ ಸೇರಲಿದೆ ಎನ್ನಲಾಗ್ತಿದೆ. ಸುದೀಪ್ ಸಿನಿಮಾಗಳಲ್ಲಿ ಹಿಂದೆಲ್ಲಾ ಹೀರೋಯಿಸಂ ಎದ್ದು ಕಾಣುತ್ತಿತ್ತು. ಭರ್ಜರಿ ಡೈಲಾಗ್, ಆಕ್ಷನ್, ಜೊತೆ ಲವ್ ಸೆಂಟಿಮೆಂಟ್ ಇಟ್ಟು ಸಿನಿಮಾ ಮಾಡಲಾಗ್ತಿತ್ತು. ಆದ್ರೆ ವಿಕ್ರಾಂತ್ ರೋಣ ಹಾಗಲ್ಲ. ಹೀರೋಯಿಸಂ ಗಿಂತ ಕಥೆ, ವಿಶ್ಯೂವಲ್ ಟ್ರೀಟ್ ಮ್ಯೂಸಿಕ್ ಮುಖ್ಯ ಅನ್ನೋ ಫಾರ್ಮುಲಾವನ್ನ ಕಿಚ್ಚ ಫಸ್ಟ್ ಟೈಂ ಟ್ರೈ ಮಾಡಿದ್ರು. ಅನೂಪ್ ಭಂಡಾರಿಯ ಕಥೆಗೆ ಅಭಿನಯದಿಂದಷ್ಟೇ ಕಿಚ್ಚ ಜೀವ ತುಂಬಿದ್ರು. ಸುದೀಪ್ ಹೀರೋಯಿಸಂ ಬ್ರೇಕ್ ಮಾಡಿ, ಒಬ್ಬ ನಟನಾಗಿ ಕಾಣಿಸಿದ್ದು ಸಿನಿಮಾದ ಮೈನ್ ಹೈಲೆಟ್ ಆಗಿತ್ತು. ಇದರ ಜೊತೆ ತ್ರಿಡಿ ಎಫೆಕ್ಟ್, ವಿಶ್ಯೂವಲ್ ಟ್ರೀಟ್ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ನುಗ್ಗಿ ಬುರುವಂತೆ ಮಾಡಿದೆ. ಹೀಗಾಗೆ ಇಂದು ಬಾಕ್ಸಾಫೀಸ್ನಲ್ಲಿ ವಿಕ್ರಾಂತ್ ರೋಣ ರಾರಾಜಿಸುತ್ತಿದ್ದಾನೆ.