Asianet Suvarna News Asianet Suvarna News

ಡಿಸೆಂಬರ್​​ನಲ್ಲಿ ಸ್ಯಾಂಡಲ್​ವುಡ್​ನಲ್ಲಿ ನಡೆಯಲಿದೆ 3ಡಿ ಸ್ಟಾರ್ಸ್​ ಎಫೆಕ್ಟ್: ಚಿತ್ರಗಳ ಮಧ್ಯೆ ಕಿತ್ತಾಟ?

ಸ್ಯಾಂಡಲ್​ವುಡ್ ಫುಲ್ ಡಲ್ ಆಗಿದೆ. ಅದಕ್ಕೆ ಕಾರಣ ಕನ್ನಡದ ಸ್ಟಾರ್​​​ಗಳ ಸಿನಿಮಾಗಳು ಥಿಯೇಟರ್​ ಅಂಗಳಕ್ಕೆ ಬರುತ್ತಿಲ್ಲ ಅನ್ನೋದು. ಸ್ಟಾರ್ಸ್ ಸಿನಿಮಾಗಳಿಲ್ಲದೇ ಥಿಯೇಟರ್​​ಗಳು ಕ್ಲೋಸ್ ಆಗ್ತಿವೆ. ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕ ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. 

ಸ್ಯಾಂಡಲ್​ವುಡ್ ಫುಲ್ ಡಲ್ ಆಗಿದೆ. ಅದಕ್ಕೆ ಕಾರಣ ಕನ್ನಡದ ಸ್ಟಾರ್​​​ಗಳ ಸಿನಿಮಾಗಳು ಥಿಯೇಟರ್​ ಅಂಗಳಕ್ಕೆ ಬರುತ್ತಿಲ್ಲ ಅನ್ನೋದು. ಸ್ಟಾರ್ಸ್ ಸಿನಿಮಾಗಳಿಲ್ಲದೇ ಥಿಯೇಟರ್​​ಗಳು ಕ್ಲೋಸ್ ಆಗ್ತಿವೆ. ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕ ಚಿತ್ರಮಂದಿರದತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ತಿಂಗಳಿಗೊಂದು ಸ್ಟಾರ್ಸ್ ಸಿನಿಮಾ ಬರಬೇಕು ಅಂತ ಥಿಯೇಟರ್​ ಮಾಲೀಕರೇ ಬೇಡಿಕೆ ಇಡುತ್ತಿದ್ದಾರೆ. ಇಂತಹ ಸಂಕಷ್ಟದ ಹೊತ್ತಲ್ಲಿ ಕನ್ನಡದ ಮೂರು ಜನ ಸ್ಟಾರ್ಸ್​ ಬಾಕ್ಸಾಫೀಸ್​ ವಾರ್​​ಗೆ ಇಳಿಯೋ ಎಲ್ಲಾ ಲಕ್ಷಣ ಕಾಣುತ್ತಿದೆ. ಹೌದು, ಕನ್ನಡದಲ್ಲಿ ಸ್ಟಾರ್ಸ್​ ಸಿನಿಮಾಗಳಿಲ್ಲ ಅನ್ನೋ ಟೈಂಣಲ್ಲಿ ಸ್ಟಾರ್ಸ್​ ಚಿತ್ರಗಳ ಮಧ್ಯೆಯೇ ಬಾಕ್ಸಾಫೀಸ್ ಕಿತ್ತಾಟದ ಕಾವು ಏರೋ ಸಾಧ್ಯತೆ ಇದೆ. 

ಈ ವರ್ಷದ ಕೊನೆಯಲ್ಲಿ ಸ್ಯಾಂಡಲ್​ವುಡ್​​ನಲ್ಲಿ 3ಡಿ ಎಫೆಕ್ಟ್ ಆಗುತ್ತೆ ಅಂತ ಗಾಂಧಿನಗರದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಅಂದ್ರೆ ಡಿಸೆಂಬರ್​​ನಲ್ಲಿ ಕನ್ನಡದ ಮೂರು ಜನ ಡಿ ಸ್ಟಾರ್ಸ್​​ ಮಧ್ಯೆ ಬಾಕ್ಸಾಫೀಸ್ ವಾರ್​ ಆಗಲಿದೆ. ಅದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಟ ರಾಕ್ಷಸ ಡಾಲಿ ಧನಂಜಯ್ ಹಾಗು ನಟ ದರ್ಶನ್ ಮಧ್ಯೆ ಅನ್ನೋದು ಇಂಟ್ರೆಸ್ಟಿಂಗ್. ನಟ ದರ್ಶನ್ ಡಿಸೆಂಬರ್​​ನಲ್ಲಿ ಕ್ರಿಸ್​ ಮಸ್ ಹಬ್ಬದ ದಿನ ನಿಮಗೆ ಡೆವಿಲ್ ಕೇಕ್ ತಿನ್ನಿಸುತ್ತೇನೆ ಅಂತ ಫ್ಯಾನ್ಸ್​ಗೆ ಮಾತು ಕೊಟ್ಟಿದ್ದಾರೆ. ಅಂದ್ರೆ ಈ ವರ್ಷದ ಕ್ರಿಸ್​ ಮಸ್​​ಗೆ ಡೆವಿಲ್ ಸಿನಿಮಾ ರಿಲೀಸ್ ಪಕ್ಕಾ ಆಗಿದೆ. 

ಈ ಸುದ್ದಿ ಹೊರ ಬಂದು ಎರಡು ದಿನದ ಗ್ಯಾಪ್​ನಲ್ಲೇ ನಟ ಧ್ರುವ ಸರ್ಜಾ ನಾನು ಯುದ್ಧಕ್ಕೆ ರೆಡಿ ಎಂದಿದ್ದಾರೆ. ಅಂದ್ರೆ ಧ್ರುವ ಸರ್ಜಾ ನಟನೆಯ ಮೋಸ್ಟ್ ವಾಂಟೆಡ್ ಕೆಡಿ ಸಿನಿಮಾ ಕೂಡ ಡಿಸೆಂಬರ್​ನಲ್ಲೇ ರಿಲೀಸ್ ಮಾಡುತ್ತೇವೆ ಅನೌನ್ಸ್ ಮಾಡಿದ್ದಾರೆ. ಈಗಾಗ್ಲೆ ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ಮನಸ್ತಾಪ ಆಗಿದೆ. ಈ ಮನಸ್ತಾಪದ ಕಿಡಿ ಇಬ್ಬರ ಅಭಿಮಾನಿಗಳ ಮಧ್ಯೆ ಕಿತ್ತಾಟಕ್ಕೂ ನಾಂದಿ ಹಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕೆಸರೆರಚಾಟದ ಕಾರ್ಯಕ್ರಮ ನಡೆಯುತ್ತಿದೆ. ಇದು ಡಿಸೆಂಬರ್ನಲ್ಲಿ ಕಾಡ್ಗಿಚ್ಚಾಗಿ ಕನ್ನಡ ಚಿತ್ರರಂಗವನ್ನ ಆವರಿಸಿಕೊಳ್ಳುವ ಸಾಧ್ಯತೆ ಇದೆ. 

ಇದರ ನಡುವೆ ಡಿಸೆಂಬರ್ನಲ್ಲಿ ದರ್ಶನ್​ ಧ್ರುವ ಸಿನಿಮಾಗಳ ಮಧ್ಯೆ ಬಾಕ್ಸಾಫೀಸ್ ವಾರ್ ಮಾಡೋದಕ್ಕೆ ಡಾಲಿ ಧನಂಜಯ್​ ಕೂಡ ರೆಡಿ ಎನ್ನುತ್ತಿದ್ದಾರೆ. ಒಂದ್ ಕಡೆ ಡೆವಿಲ್​ ಮತ್ತೊಂದ್ ಕಡೆ ಕೆಡಿ ಸಿನಿಮಾ. ಈ ಡೆವಿಲ್ VS ಕೆಡಿ ಮಹಾಸಮರದ ನಡುವೆ ಡಿಸೆಂಬರ್ ನಲ್ಲೇ ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಸಿನಿಮಾ ರಿಲೀಸ್ ಆಗಿಲಿದೆಯಂತೆ. ಈಗ ಹಬ್ಬಿರುವ ಈ ಸುದ್ದಿ ನಿಜಾ ಆಗುತ್ತಾ..? ಗೊತ್ತಿಲ್ಲ. ಆದ್ರೆ ಬೆಂಕಿಯಿಲ್ಲದೆ ಹೊಗೆಯಾಡಲ್ಲ. ಈ ಕಾರಣಕ್ಕೆ ಈ ಬಾರಿಯ ಕ್ರಿಸ್ಮಸ್ ಕದನ ಅನೇಕರ ಕಣ್ಣಿಗೆ ಕೌತುಕದ ಗೂಡಾಗಿದೆ. ಆದ್ರೆ ಸಂಕಷ್ಟದಲ್ಲಿರೋ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಸಿನಿಮಾಗಳ ಮಧ್ಯೆ ವಾರ್ ಬೇಕಾ ಅನ್ನೋದೆ ಎಲ್ಲರಲ್ಲಿರೋ ಪ್ರಶ್ನೆ.