ಯೋಗವನ್ನೇ ಉಂಡು, ಉಟ್ಟು ಉಸಿರಾಡುವ ಪೋರಿಯಿಂದ ಮತ್ತೊಂದು ದಾಖಲೆ

  • ಮೈಯಲ್ಲಿ ಮೂಳೆಯೇ ಇಲ್ವಾ ಈ ಹುಡುಗಿಗೆ?
  • ಯೋಗವನ್ನೇ ಉಂಡು, ಉಟ್ಟು ಉಸಿರಾಡುವ ಪೋರಿ
First Published Aug 25, 2021, 12:12 PM IST | Last Updated Aug 25, 2021, 12:59 PM IST

ಉಡುಪಿ(ಆ.25): ಇವಳು ಜಗತ್ತೇ ಬೆರಗುಗಣ್ಣಿನಿಂದ ನೋಡುವಂತಹಾ ಸಾಧನೆ ಮಾಡಿದ್ದಾಳೆ. ದೇಹದೋಳಗೆ ಮೂಳೆಯೇ ಇಲ್ಲದವಳಂತೆ ಲೀಲಾಜಾಲವಾಗಿ ತಿರುಗುವ ಈಕೆ, ಅತೀ ಕಡಿಮೆ ಅವಧಿಯಲ್ಲಿ ಅತೀಹೆಚ್ಚು ಯೋಗಾಸನ ಭಂಗಿಗಳನ್ನು ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಿದ್ದಾಳೆ. ಇದು ಈಕೆ ಮಾಡುತ್ತಿರುವ ಏಳನೇ ವಿಶ್ವ ದಾಖಲೆ.

ಆರಾಧನಾ ಮಹೋತ್ಸವ: ರಾಯರಿಗೆ ಚಿನ್ನದ ಪಾತ್ರೆಗಳಿಂದ ಪೂಜೆ

ಉಡುಪಿ ಬಾಲೆಗೆ ದಾಖಲೆಗಳ ಗರಿ. ಮೈಯಲ್ಲಿ ಮೂಳೆಯೇ ಇಲ್ವಾ ಈ ಹುಡುಗಿಗೆ? ಯೋಗವನ್ನೇ ಉಂಡು, ಉಟ್ಟು ಉಸಿರಾಡುವ ಪೋರಿ ಇವಳು. ಈಗಿನ್ನೂ ಹನ್ನೆರಡರ ಹರೆಯದ ತನುಶ್ರೀ ಪಿತ್ರೋಡಿ 43.18 ನಿಮಿಷಗಳಲ್ಲಿ 245 ಆಸನಗಳನ್ನು ಮಾಡಿ ದಾಖಲೆ ಮಾಡಿದ್ದಾರೆ.

Video Top Stories