Asianet Suvarna News Asianet Suvarna News

ಗರಿಗೆದರಿದ ಹಳ್ಳಿ ಪಾಲಿಟಿಕ್ಸ್: ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾದ PDO ಮನೆ

ಜಿಲ್ಲಾ ಪಂಚಾಯತ್ ಚುನಾವಣೆಗೆ ಇನ್ನೂ ಸಮಯ ಇದೆ, ಆದರೆ ಹಳ್ಳಿ ರಾಜಕೀಯ ಈಗಾಗಲೇ ಗರಿಗೆದರಿದೆ. ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ PDO ಒಬ್ಬರು ಕಟ್ಟಿಸಲು ಹೊರಟಿರುವ ಬಂಗಲೆ, ಈಗ ವಿವಾದದ ಕೇಂದ್ರಬಿಂದುವಾಗಿದೆ. 

ಉಡುಪಿ,(ಸೆ.22): ಜಿಲ್ಲಾ ಪಂಚಾಯತ್ ಚುನಾವಣೆಗೆ ಇನ್ನೂ ಸಮಯ ಇದೆ, ಆದರೆ ಹಳ್ಳಿ ರಾಜಕೀಯ ಈಗಾಗಲೇ ಗರಿಗೆದರಿದೆ. ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ PDO ಒಬ್ಬರು ಕಟ್ಟಿಸಲು ಹೊರಟಿರುವ ಬಂಗಲೆ, ಈಗ ವಿವಾದದ ಕೇಂದ್ರಬಿಂದುವಾಗಿದೆ. 

ಜಿಲ್ಲಾ, ತಾಲೂಕು ಪಂಚಾಯಿತಿ ಎಲೆಕ್ಷನ್ ಮುಂದೂಡಿಕೆಗೆ ಹೆಜ್ಜೆ ಇಟ್ಟ ಸರ್ಕಾರ

ಕಾಂಗ್ರೆಸ್ ಬೀದಿ ರಂಪಾಟ ಮಾಡುತ್ತಿದ್ದರೆ, ಬಿಜೆಪಿ ಪಿಡಿಒ  ಬೆಂಬಲಕ್ಕೆ ನಿಂತಿದೆ. ಇದು ಯಾವುದೇ ಉದ್ಯಮಿ ಕಟ್ಟಿಸುತ್ತಿರುವ ಬಂಗಲೆ ಅಲ್ಲ. ಪಕ್ಕದ ಹೆಬ್ರಿ ಪಂಚಾಯತ್ನಲ್ಲಿ ಪಿಡಿಒ ಆಗಿ ಅಧಿಕಾರ ನಿರ್ವಹಿಸುತ್ತಿರುವ ಸದಾಶಿವ ಸೇರ್ವೆಗಾರ್ ಎಂಬವರ ಮನೆ ಇದು. ಇಷ್ಟಕ್ಕೂ ದುಡಿದ ಹಣದಲ್ಲಿ ಯಾರಾದರೂ ಮನೆ ಕಟ್ಟಿಸಿಕೊಂಡರೆ ಆಕ್ಷೇಪ ಬರುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಮಾಡುತ್ತಿರುವುದು ಗಂಭೀರ ಆರೋಪ.