ಜಿಲ್ಲಾ, ತಾಲೂಕು ಪಂಚಾಯಿತಿ ಎಲೆಕ್ಷನ್ ಮುಂದೂಡಿಕೆಗೆ ಹೆಜ್ಜೆ ಇಟ್ಟ ಸರ್ಕಾರ

* ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ
* ಚುನಾವಣೆ ಮುಂದೂಡಲು ಹೆಜ್ಜೆ ಇಟ್ಟ ಸರ್ಕಾರ
* ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮಂಡನೆ 

gram swaraj and panchayat raj amendment-bill-presented-in Karnataka Assembly session rbj

ಬೆಂಗಳೂರು, (ಸೆ.14): ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಎಲೆಕ್ಷನ್ ಮೀಸಲಾತಿ ಪ್ರಕಟವಾಗಿದ್ದು, ಚುನಾವಣೆಯ ಕಾವು ಆರಂಭವಾಗಿದೆ.

ಆಕಾಂಕ್ಷಿಗಳು ಟೆಕೆಟ್‌ಗಾಗಿ ಕಸರತ್ತು ನಡೆಸಿದ್ರೆ, ನಾಯಕರು ತಮ್ಮ-ತಮ್ಮ ಕ್ಷೇತ್ರಗಳ ಪಕ್ಷದ ಪ್ರಮುಖ ನಾಯಕರು ಸಭೆ ನಡೆಸಿ ಚುನಾವಣೆಯ ತಯಾರಿ ನಡೆಸಿದ್ದಾರೆ. ಆದ್ರೆ, ರಾಜ್ಯ ಸರ್ಕಾರ  ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮುಂದೂಡಲು ಹೆಜ್ಜೆ ಇಟ್ಟಿದೆ.

ತಾಲೂಕು, ಜಿಲ್ಲಾ ಪಂಚಾಯಿತಿ ಎಲೆಕ್ಷನ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್

ಹೌದು...ಇಂದು (ಸೆ.14) ಕಲಾಪದಲ್ಲಿ  ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ.   ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆಗೆ ಅವಕಾಶ ಮಾಡಿಕೊಡುವ ವಿಧೇಯಕವಾಗಿದೆ.
 
ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮರು ವಿಂಗಡಣೆ, ವಾರ್ಡ್, ಕ್ಷೇತ್ರಗಳ ಗಡಿ ಗುರುತಿಸುವಿಕೆಗಾಗಿ ಆಯೋಗ ರಚನೆಯಾಗಲಿದೆ.  ಸರ್ಕಾರ ನಿವೃತ್ತ ಸಿಎಸ್ ಅಥವಾ ಎಸಿಎಸ್ ಅಧ್ಯಕ್ಷತೆಯಲ್ಲಿ ಆಯೋಗ ರಚನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಇನ್ನಷ್ಟು ದಿನ  ವಿಳಂಬವಾಗಲಿದ್ದು, ಚುನಾವಣೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ.

Latest Videos
Follow Us:
Download App:
  • android
  • ios