Asianet Suvarna News Asianet Suvarna News

ಬಾವಿಗೆ ಬಿದ್ದ ನಾಗರಹಾವನ್ನು ರಕ್ಷಿಸಿದ ಉರಗ ತಜ್ಞ, ಮೈ ಜುಂ ಎನಿಸುವ ಕಾರ್ಯಾಚರಣೆ

ಉಡುಪಿಯ ಕುಕ್ಕೆಹಳ್ಳಿ ಸಮೀಪದ ಕೊರ್ಗು ನಾಯ್ಕ್ ರವರ ಬಾವಿಗೆ ಆಕಸ್ಮಿಕವಾಗಿ ಬಿದ್ದ ನಾಗರಹಾವೊಂದು ಉರಗ ತಜ್ಞ ಸುಧೀಂದ್ರ ಐತಾಳ್ ರಕ್ಷಿಸಿದ್ದಾರೆ. 

ಉಡುಪಿ (ಮೇ. 30): ಇಲ್ಲಿನ ಕುಕ್ಕೆಹಳ್ಳಿ ಸಮೀಪದ ಕೊರ್ಗು ನಾಯ್ಕ್ ರವರ ಬಾವಿಗೆ ಆಕಸ್ಮಿಕವಾಗಿ ನಾಗರಹಾವೊಂದು ಬಿದ್ದಿತ್ತು. ಮೇಲೆ ಬರಲು ಹೆಣಗಾಡುತ್ತಿತ್ತು. ಕರಾವಳಿ ಭಾಗದ ಜನರಿಗೆ ನಾಗರ ಹಾವನ್ನು ಕಂಡರೆ ಭಯ ಮತ್ತು ಭಕ್ತಿ ಜಾಸ್ತಿ. ನಾಗಪ್ಪನನ್ನು ರಕ್ಷಿಸಲುಬೇಕೆಂದು ಪಣ ತೊಟ್ಟ ಮನೆಯವರು ಸಾಲಿಗ್ರಾಮದ ಉರಗ ತಜ್ಞ ಸುಧೀಂದ್ರ ಐತಾಳರಿಗೆ ಮಾಹಿತಿ ನೀಡುತ್ತಾರೆ. 

ಕೊಡಗಿನ ಹಳ್ಳಿ ಹಳ್ಳಿಗೂ ತೆರಳಿ ಸೋಂಕಿತರಿಗೆ ನೆರವು ನೀಡಿದ ಭುವನ್, ಹರ್ಷಿಕಾ!

ಮಳೆ ಬರುತ್ತಿದ್ದುದರಿಂದ ಬಾವಿಗಿಳಿದು ಕಾರ್ಯಾಚರಣೆ ನಡೆಸೋದು ಸಾಧ್ಯವಿರಲಿಲ್ಲ. ಹಾಗಾಗಿ ಟಯರ್ ವೊಂದನ್ನು ಎರಡು ಹಗ್ಗದ ಸಹಾಯದಿಂದ ಬಾವಿಗೆ ಇಳಿಸಲಾಯ್ತು. ಟಯರ್ ಮೂಲಕ ಹಾವನ್ನು ಮೇಲಕ್ಕೆತ್ತಿ, ನಂತರ ನಾಜೂಕಾಗಿ ಪೈಪ್ ನೊಳಗೆ ಬರುವಂತೆ ಮಾಡಿ ಸುರಕ್ಷಿತವಾಗಿ ರಕ್ಷಿಸಲಾಯ್ತು. ಸಾಲಿಗ್ರಾಮ ಉರಗ ತಜ್ಞ ಸುಧೀಂದ್ರ ಐತಾಳರ ಸಾಹಸಕ್ಕೆ ಮೆಚ್ಚುಗೆ ಪಾತ್ರವಾಗಿದೆ. 
 

Video Top Stories