ಉಡುಪಿಯಲ್ಲಿ ಸರಳ ಸ್ವತಂತ್ರೋತ್ಸವ; ಪುಟಾಣಿಗಳಿಗೆ ಸಂಭ್ರಮವೋ, ಸಂಭ್ರಮ..!
ಈ ಸಲ ಕೊರೊನಾದಿಂದಾಗಿ ಸರಳವಾಗಿ ಎಲ್ಲಾ ಕಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ರೀತಿ ಉಡುಪಿಯಲ್ಲಿಯೂ ಕೂಡಾ ಸರಳವಾಗಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಅಜ್ಜರಕಾಡು ಮೈದಾನದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ದ್ವಜಾರೋಹಣ ಮಾಡಿದರು. ಪುಟ್ಟ ಪುಟ್ಟ ಮಕ್ಕಳೆಲ್ಲಾ ಡಿಸಿ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟರು. ಧ್ವಜಾರೋಹಣ ಕಾರ್ಯಕ್ರಮದ ಸಂಭ್ರಮ ಹೀಗಿತ್ತು ನೋಡಿ..!
ಉಡುಪಿ (ಆ. 16): ಸ್ವಾತಂತ್ರ್ಯ ದಿನಾಚರಣೆ ಎಂದ ತಕ್ಷಣ ಎಲ್ಲರಿಗೂ ಅವರ ಬಾಲ್ಯದ ನೆನಪು ತೆರೆದುಕೊಳ್ಳುತ್ತೆ. ಮುಂಜಾನೆ ಎದ್ದು ಬಿಳಿ ಯೂನಿಫಾರಂ ತೊಟ್ಟದ್ದು, ಸೆಲ್ಯೂಟ್ ಹೊಡೆದು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದು, ದೊಡ್ಡ ದೊಡ್ಡ ಬಾವುಟಗಳು ಹಾರುವುದನ್ನು ನೋಡಿದ್ದು, ಸ್ನೇಹಿತರ ಜೊತೆ ಲಡ್ಡು ತಿಂದದ್ದು , ದೇಶಭಕ್ತಿ ಗೀತೆಗಳನ್ನು ಹಾಡಿದ್ದು, ಹೀಗೆ ನೆನಪಿನ ಬುತ್ತಿ ಬಿಚ್ಚಿಕೊಳ್ಳುತ್ತದೆ. ಸ್ವಾತಂತ್ರ್ಯ ದಿನಾಚರಣೆಯ ಕ್ರೇಜ್ ಇವತ್ತಿಗೂ ಮಕ್ಕಳಲ್ಲಿ ಕಡಿಮೆಯಾಗಿಲ್ಲ.
ಈ ಸಲ ಕೊರೊನಾದಿಂದಾಗಿ ಸರಳವಾಗಿ ಎಲ್ಲಾ ಕಡೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ರೀತಿ ಉಡುಪಿಯಲ್ಲಿಯೂ ಕೂಡಾ ಸರಳವಾಗಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಅಜ್ಜರಕಾಡು ಮೈದಾನದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ದ್ವಜಾರೋಹಣ ಮಾಡಿದರು. ಪುಟ್ಟ ಪುಟ್ಟ ಮಕ್ಕಳೆಲ್ಲಾ ಡಿಸಿ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟರು. ಧ್ವಜಾರೋಹಣ ಕಾರ್ಯಕ್ರಮದ ಸಂಭ್ರಮ ಹೀಗಿತ್ತು ನೋಡಿ..!
ಭಾರತದ ಈ ನಗರದಲ್ಲಿ ಆಗಸ್ಟ್ 16 ಕ್ಕೆ ಆಚರಿಸ್ತಾರೆ ಸ್ವಾತಂತ್ರ್ಯ ದಿನ, ಕಾರಣ ಹೀಗಿದೆ!