ಭಾರತದ ಈ ನಗರದಲ್ಲಿ ಆಗಸ್ಟ್ 16ಕ್ಕೆ ಆಚರಿಸ್ತಾರೆ ಸ್ವಾತಂತ್ರ್ಯ ದಿನ, ಕಾರಣ ಹೀಗಿದೆ!
ಇಡೀ ದೇಶವೇ ಇಂದು ಸ್ವಾತಂತ್ರ್ಯ ದಿನವನ್ನಾಚರಿಸಿದೆ. ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯ ಸಂಭ್ರಮ ಕಂಡು ಬಂದಿದೆ. ಆದರೆ ಭಾರತದ ಒಂದು ನಗರದಲ್ಲಿ ಮಾತ್ರ ಆಗಸ್ಟ್ 15ರ ಬದಲಾಗಿ, ಆಗಸ್ಟ್ 16ರಂದು ಸ್ವಾತಂತ್ರ್ಯ ದಿನವನ್ನಾಚರಿಸಲಾಗುತ್ತದೆ. ಅಷ್ಟಕ್ಕೂ ಆ ನಗರ ಯಾವುದು? ಇಲ್ಲಿದೆ ವಿವರ

ಈ ನಗರ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಿಂದ 30 ಕಿ, ಮೀ ದೂರದಲ್ಲಿರುವ ಠಿಯೋಗ್ ಆಗಿದೆ. ಇಲ್ಲಿ ಆಗಸ್ಟ್16ರಂದು ಸ್ವಾತಂತ್ರ್ಯ ದಿನ ಆಚರಿಸುತ್ತಾರೆ. ಈ ನಗರ ಎಲ್ಲಕ್ಕಿಂತ ಮೊದಲು ರಾಜರ ಆಡಳಿತ ದಿಂದ ಮುಕ್ತವಾಗಿತ್ತು. 1947ರ ಆಗಸ್ಟ್ 15 ರಂದು ಇಲ್ಲಿನ ರಾಜನಾಗಿದ್ದ ರಾಜಾ ಕರ್ಮಚಂದ್ ಜನರ ತೀವ್ರ ವಿರೋಧ ಎದುರಿಸಿದ್ದರು ಹಾಗೂ ತಮ್ಮ ಆಡಳಿತದಿಂದ ಕೆಳಗಿಳಿದಿದ್ದರು. ಬಳಿಕ ಇಲ್ಲಿ ಪ್ರಜಾಪ್ರಭುತ್ವ ಬಂದು, ಸೂರತ್‌ನ ರಾಜ್ ಪ್ರಕಾಶ್ ತನ್ನ ಎಂಟು ಮಂತ್ರಿಗಳೊಂದಿಗೆ ಪ್ರಮಾಣವಚನ ಸ್ವೀಕರಿಸಿದರು. ಅಂದದಿನಿಂದ ಇಂದಿನವರೆಗೂ ಇಲ್ಲಿ ಸ್ವಾತಂತ್ರ್ಯ ದಿನ, ಠಿಯೋಗ್ ಉತ್ಸವ್ಹಾಗೂ ಜಿಲ್ಲಾ ಮಟ್ಟದ ಉತ್ಸವ ಎಲ್ಲವೂ ಆಗಸ್ಟ್ 16ರಂದು ಆಚರಿಸಲಾಗುತ್ತಿದೆ.

ಪ್ರತಿ ವರ್ಷ ಇಲ್ಲಿ ಆಗಸ್ಟ್ 16 ರಂದು ಸರ್ಕಾರ ಕಾರ್ಯಕ್ರಮ ಆಯೋಜಿಸುತ್ತದೆ ಹಾಗೂ ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿಗಳು ಸೇರಿದಂತೆ ಪ್ರಾದೇಶಿಕ ಸರ್ಕಾರದ ಮಂತ್ರಿಗಳೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ನಾಳೆ ಭಾನುವಾರವೂ ಇಲ್ಲಿ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಸರ್ಕಾರದ ಪರವಾಗಿ ಯಾರಾದರೂ ಓರ್ವ ಮಂತ್ರಿ ಭಾಗಿಯಾಗಲಿದ್ದಾರೆ.

ಕಳೆದ ವರ್ಷ ಇಲ್ಲಿ ಠಿಯೋಗ್ ಉತ್ಸವ್ ಹಾಗೂ ಸ್ವಾತಂತ್ರ್ಯ ದಿನದ ಪ್ರಯುಕ್ತ ಸ್ವಾತಂತ್ರ್ಯ ದಿನವನ್ನಾಚರಿಸಲು ಮುಖ್ಯ ಅತಿಥಿಯಾಗಿ ಪ್ರಾದೇಶಿಕ ಸರ್ಕಾರದ ಶಿಕ್ಷಣ ಸಚಿವ ಸುರೇಶ್ ಭಾರದ್ವಾಜ್ ಭಾಗಿಯಾಗಿದ್ದರು.

ಕೊರೋನಾತಂಕದಿಂದಾಗಿ ಈ ಬಾರಿ ಉತ್ಸವ ನಡೆಯುವುದಿಲ್ಲ ಎನ್ನಲಾಗಿದೆ. ಸ್ವಾತಂತ್ರ್ಯ ದಿನದ ಪ್ರಯುಕ್ತ ಕೇವಲ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಠಿಯೋಗ್ ಹಿಮಾಚಲದ ಕಾನನನದ ನಡುವೆ ಇರುವ ನಗರವಾಗಿದೆ. ಇಲ್ಲಿ ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ