ಇದೆಂಥಾ ಅಭಿವೃದ್ಧಿ? ರಸ್ತೆಗಾಗಿ ಒಂದೂವರೆ ಸಾವಿರ ಮರಗಳ ಸಮಾಧಿ!

ಕೃಷ್ಣಾ ನಗರಿ ಉಡುಪಿ ಹಸಿರಿನಿಂದ ಆವೃತವಾದ ಜಿಲ್ಲೆಯೂ ಹೌದು. ಕಡಲ ತಡಿಯ ಊರು ಹೌದು. ಇಲ್ಲಿನ ಮರಗಳಿಗೆ ಈಗ ಕೊಡಲಿ ಏಟು ಬೀಳುತ್ತಿದೆ. 

First Published Jan 2, 2021, 9:58 AM IST | Last Updated Jan 2, 2021, 6:19 PM IST

ಉಡುಪಿ (ಜ. 02): ಕೃಷ್ಣಾ ನಗರಿ ಉಡುಪಿ ಹಸಿರಿನಿಂದ ಆವೃತವಾದ ಜಿಲ್ಲೆಯೂ ಹೌದು. ಕಡಲ ತಡಿಯ ಊರು ಹೌದು. ಇಲ್ಲಿನ ಮರಗಳಿಗೆ ಈಗ ಕೊಡಲಿ ಏಟು ಬೀಳುತ್ತಿದೆ. ಬ್ರಹ್ಮಾವರ- ಪೇತ್ರಿ ರಸ್ತೆ ಅಗಲೀಕರಣಕ್ಕೆ 1500 ಮರಗಳ ಮಾರಣ ಹೋಮ ನಡೆಯುತ್ತಿದೆ. ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಇಲ್ಲಿ ಮರ ಕಡಿಯುತ್ತಿರುವುದು ಅಕ್ರಮವಲ್ಲ, ಕಾನೂನುಬದ್ಧವಾಗಿಯೇ ಎಲ್ಲವೂ ನಡೆಯುತ್ತಿದ್ದರೂ, ನಾಗರೀಕತೆ ಅಭಿವೃದ್ಧಿ ಹೆಸರಿನಲ್ಲಿ ಹೀಗೆ ಕಾಡು ನಾಶವಾಗುತ್ತಿರುವುದು ದುರಂತವೇ ಸರಿ. 

 

Video Top Stories