ಮಕ್ಕಳನ್ನು ಕಾಡೋ ಕೆಮ್ಮಿನ ಸಮಸ್ಯೆ, ಕಡಿಮೆ ಮಾಡೋದು ಹೇಗೆ?
ಕೊರೋನಾ ಸೋಂಕಿನ ನಂತರ ಮಕ್ಕಳನ್ನು ಕಾಡೋ ಅನಾರೋಗ್ಯ ಕಡಿಮೆ ಆಗ್ತಾನೇ ಇಲ್ಲ. ಜ್ವರ, ಶೀತ, ಕೆಮ್ಮು ಅಂತ ಆಗಾಗ ಆರೋಗ್ಯ ಹದಗೆಡ್ತಾನೆ ಇರುತ್ತೆ. ಇದಕ್ಕೇನು ಕಾರಣ, ಮಕ್ಕಳು ಆಗಾಗ ಹುಷಾರು ತಪ್ಪದಂತೆ ಏನ್ ಮಾಡ್ಬೋದು. ಇಲ್ಲಿದೆ ಮಾಹಿತಿ.
ಚಳಿಗಾಲ (Winter) ಬಂದ ಕೂಡಲೇ ಕಾಯಿಲೆಯ ಕಾಟ ಜಾಸ್ತಿಯಾಗುತ್ತದೆ. ಅದರಲ್ಲೂ ಮಕ್ಕಳಂತೂ ಕೆಮ್ಮು (Cough), ಶೀತದಿಂದ ಬಳಲ್ತಾನೆ ಇರ್ತಾರೆ. ಪದೇ ಪದೇ ಟ್ಯಾಬ್ಲೆಟ್ ಕೊಡೋದು ಸರಿಯಲ್ಲದ ಕಾರಣ ಪೋಷಕರಿಗೆ (Parents) ಏನು ಮಾಡಬೇಕೆಂದು ತಿಳಿದಿರುವುದಿಲ್ಲ. ಹೀಗಿರುವಾಗ ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಮಕ್ಕಳಿಗೆ ಬೇಗ ಜ್ವರ ತಗುಲದಿರಲು, ಆರೋಗ್ಯವಾಗಿರಲು ಏನು ಮಾಡಬೇಕೆಂದು ಹೇಳಿದ್ದಾರೆ. ಶಾಲೆಯಲ್ಲಿ ಮಕ್ಕಳು ನೈರ್ಮಲ್ಯವನ್ನು ಪಾಲಿಸುವಂತೆ ಹೇಳಿಕೊಡಬೇಕು. ಸೀನುವಾಗ, ಕೆಮ್ಮುವಾಗ ಕೈ ಅಡ್ಡ ಹಿಡಿಯುವಂತೆ ತಿಳಿಸಬೇಕು ಎಂದಿದ್ದಾರೆ.