ಮಳೆಗಾಲದಲ್ಲಿ ಆಗಾಗ ಕಾಡೋ ಜ್ವರಕ್ಕೆ ಕಾರಣವೇನು?

ಮಳೆಗಾಲ ಬಂದ್ರೆ ಸಾಕು ಜೊತೆಯಲ್ಲೇ ಅನಾರೋಗ್ಯ ಕಾಡಲು ಶುರುವಾಗುತ್ತದೆ. ಅದರಲ್ಲೂ ಆಗಾಗ ಕಾಡೋ ಜ್ವರ ಮಳೆಗಾಲದಲ್ಲಿ ಸಾಮಾನ್ಯವಾಗಿದೆ. ಹೀಗಾಗಿ ಮಳೆಗಾಲದಲ್ಲಿ ಕಾಡೋ ಜ್ವರಕ್ಕೆ ಕಾರಣವೇನು? ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.

First Published Jul 13, 2023, 3:36 PM IST | Last Updated Jul 13, 2023, 3:36 PM IST

ಮಳೆಗಾಲ ಶುರುವಾಯ್ತ ಅಂದ್ರೆ ಶೀತ, ಕೆಮ್ಮು, ಜ್ವರ ಹೀಗೆ ನಾನಾ ಕಾಯಿಲೆಗಳು ವಕ್ಕರಿಸಿಕೊಳ್ಳುತ್ತವೆ. ಮಳೆಗಾಲದಲ್ಲಿ ಮುಖ್ಯವಾಗಿ ಮೂರು ಕಾರಣಗಳಿಗೆ ಜ್ವರ ಬರುತ್ತದೆ ಎಂದು ತಜ್ಞ ವೈದ್ಯರಾದ ಡಾ.ಪ್ರಮೋದ್ ವಿ.ಎಸ್ ವಿವರಿಸುತ್ತಾರೆ. ಮಳೆಯಿಂದ ನೀರು ನಿಂತು ನೊಣ, ಸೊಳ್ಳೆ, ತಿಗಣೆಗಳ ಕಾಟದಿಂದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ, ಫೈಲೇರಿಯಾ ಹೀಗೆ ನಾನಾ ಕಾಯಿಲೆಗಳು ಹರಡುತ್ತವೆ. ಮಳೆಗಾಲದಲ್ಲಿ ತೇವಾಂಶದಿಂದಾಗಿಯೂ ಕೆಲವರಲ್ಲಿ ಅಲರ್ಜಿ ಸಮಸ್ಯೆ ಕಾಣಿಸಿಕೊಂಡು ಆರೋಗ್ಯ ಹದಗೆಡೋದು ಇದೆ. ಇದು ಮಾತ್ರವಲ್ಲದೆ,  ಮಳೆಗಾಲದಲ್ಲಿ ಕಲುಷಿತ ನೀರನ್ನು ಕುಡಿದು ಜ್ವರ, ಬೇಧಿ, ವಾಂತಿ ಎಂದು ಕೆಲವರ ಆರೋಗ್ಯ ಹಾಳಾಗುತ್ತದೆ ಎಂದು ತಿಳಿಸಿದ್ದಾರೆ. ಹಾಗಿದ್ರೆ ಮಳೆಗಾಲದಲ್ಲಿ ಆರೋಗ್ಯದ ಕಾಳಜಿ ವಹಿಸೋದು ಹೇಗೆ? ಇಲ್ಲಿದೆ ಮಾಹಿತಿ.

Health Tips: ಮಳೆ ಬಂತೂಂದ್ರೆ ಅನಾರೋಗ್ಯನೂ ಕಾಡುತ್ತೆ, ನೀವ್ ತಿನ್ನೋ ಆಹಾರ ಹೀಗಿರ್ಲಿ