Asianet Suvarna News Asianet Suvarna News

ಡ್ರಾಮಾ..ಡ್ರಾಮಾ..ಡ್ರಾಮಾ..! ಪ್ರೀತಿಸಿ ಮದುವೆಯಾಗಿದ್ರೂ ಮತ್ತೊಬ್ಳ ಆಸೆಗೆ ಮಾಡಿದ ಭಲೇ ನಾಟಕ!

ಕೆಲಸದ ನಿಮಿತ್ತ ಮಲ್ಪೆಗೆ ವಲಸೆ ಬಂದಿದ್ದ ಶಿವಪ್ಪ ನಾಯಕ ಅವತ್ತು ನಾಪತ್ತೆಯಾಗಿಬಿಟ್ಟಿದ್ದ. ಆದ್ರೆ ಅವನ ಬೈಕ್ ಸೇತುವೆಯೊಂದರ ಮೇಲೆ ಸಿಗುತ್ತೆ. ಇನ್ನೂ ಇದೇ ಪ್ರಕರಣದ ತನಿಖೆ ಆರಂಬಿಸಿದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಕ್ಲೂ ಸಿಗದೇ ತಲೆಕೆಡಸಿಕೊಂಡುಬಿಡ್ತಾರೆ. ಎಷ್ಟೇ ಹುಡುಕಾಡಿದ್ರೂ ಅವನ ಮೃತದೇಹವೂ ಸಿಗೋದಿಲ್ಲ. 

ಬೆಂಗಳೂರು (ಅ.1): ಅವರಿಬ್ಬರು ಪ್ರೀತಿಸಿ ಮದುವೆಯಾದವರು. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಮೂಲದ ಜೋಡಿ ಹೊಟ್ಟೆಪಾಡಿಗಾಗಿ ಮಲ್ಪೆಗೆ ವಲಸೆ ಬಂದಿತ್ತು. ಇನ್ನೂ ಮದುವೆಯಾಗಿ ಐದು ತಿಂಗಳಾಗಿತ್ತು ಅಷ್ಟೇ ವೀಕ್ಷಕರೇ.. ಮಧ್ಯರಾತ್ರಿಯಲ್ಲಿ ಕೆಲಸಕ್ಕೆ ಹೋಗಿದ್ದ ಗಂಡ ಇದ್ದಕ್ಕಿದ್ದಂತೆ ನಾಪತ್ತೆ. ಎಲ್ಲಿ ಹೋದನಪ್ಪ ಅಂತ ಹುಡುಕುತ್ತಿದ್ದಾಗ್ಲೇ ಮಲ್ಪೆ ಪಡುಕೆರೆ ಸೇತುವೆಯಲ್ಲಿ ಈತನ ಬೈಕ್ ಪತ್ತೆಯಾಗಿತ್ತು, ಅಲ್ಲಿ ಹೋಗಿ ನೋಡಿದ್ರೆ ಅವನ ಬೈಕ್ ಮತ್ತು ಅದರ ಪಕ್ಕದಲ್ಲೇ ರಕ್ತದ ಕಲೆಗಳು. ಮೊಬೈಲ್ ಕೂಡ ಅಲ್ಲೇ ಇತ್ತು. 

ಸ್ಥಳಕ್ಕೆ ಬಂದ ಪೊಲೀಸರಿಗೆ ಅನುಮಾನಗಳ ಮೇಲೆ ಅನುಮಾನ. ಇರಲಿ ಅಂತ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ರೆ ಒಂದರ ಹಿಂದರಂತೆ ಶಾಕಿಂಗ್ ಕ್ಲೂಗಳು. ಆಪ್ರಕರಣದಲ್ಲಿ ಆರೋಪಿ ಚಾಪೆ ಕೆಳಗೆ ನುಗ್ಗಿದ್ರೆ ಪೊಲೀಸರು ರಂಗೋಲಿ ಕೆಳಗೆ ನುಸುಳೋ ಕೆಲಸ ಮಾಡಿದ್ರು. ಕೊನೆಗೆ ನಾಪತ್ತೆಯಾದವನ್ನು ಪತ್ತೆ ಹಚ್ಚಲು ಪೊಲೀಸರು ಯಶಸ್ವಿಯಾಗಿದ್ದಾರೆ.

ಮತ್ತೆ ನಿರ್ಮಾಪಕ ಸೌಂದರ್ಯ ಜಗದೀಶ್‌ ಪುತ್ರನ ಬೀದಿ ರಂಪ; ಜಾತಿ ನಿಂದನೆ ಕೇಸ್‌?

ನಾಪತ್ತೆಯಾಗಿದ್ದ ಶಿವಪ್ಪ ನಾಯಕನ ಬೈಕ್ ಸೇತುವೆಯೊಂದರ ಮೇಲೆ ಸಿಗುತ್ತೆ. ಇನ್ನೂ ಇದೇ ಪ್ರಕರಣದ ತನಿಖೆ ಆರಂಬಿಸಿದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಸುಳಿವು ಸಿಗದೇ ತಲೆ ಕೆಡಿಸಿಕೊಂಡುಬಿಡ್ತಾರೆ. ಎಷ್ಟೇ ಹುಡುಕಾಡಿದ್ರೂ ಅವನ ಮೃತದೇಹವೂ ಸಿಗೋದಿಲ್ಲ. ಏನಪ್ಪ ಮಾಡೋದು ಅಂತ ಪೊಲೀಸರು ಕೂತಿರುವಾಗ್ಲೇ, ಶಿವಪ್ಪ ನಾಯಕನ ಬೈಕ್‌ನಲ್ಲಿ ಸಿಕ್ಕ ಮೊಬೈಲ್‌ಗೆ ಒಂದು ಮೆಸೆಜ್ ಬರುತ್ತೆ. ಅದೊಂದು ಮೆಸೆಜ್ ತನಿಖೆಯ ದಿಕ್ಕನ್ನೇ ಬದಲಿಸಿಬಿಡುತ್ತೆ.