Asianet Suvarna News Asianet Suvarna News

KGF​ ರಾಕಿಯ ಸೂಟ್ ಸ್ಟೈಲ್​​​​ ಈಗ ಟ್ರೆಂಡ್​: ನಯಾ ಸ್ಟೈಲ್​ ಐಕಾನ್​​​​ ರಾಕಿಂಗ್ ಸ್ಟಾರ್​ ಯಶ್​!

ಈಗ ಈ ಎಲ್ಲಾ ಡ್ರೆಸ್​​ ಕೋಡ್​​ಗಿಂತ ಹೆಚ್ಚು ಸೌಂಡ್ ಮಾಡುತ್ತಿರೋದು ರಾಕಿಂಗ್​ ಸ್ಟಾರ್ ಯಶ್​ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡ ಸೂಟ್ ಸ್ಟೈಲ್​. ಉದ್ದನೆ ಗಡ್ಡ, ಹೇರ್​ ಸ್ಟೈಲ್‌ನಿಂದ ಯಶ್ ಸ್ಟೈಲ್​ ಎಷ್ಟು ಟ್ರೆಂಡ್ ಆಯ್ತೋ ಅದಕ್ಕಿಂತ ಒಂದು ಕೈ ಜಾಸ್ತಿ ಎನ್ನುವಂತೆ ಯಶ್​​ರ ಸೂಟ್ ಸ್ಟೈಲ್ ಈಗ ಹವಾ ಸೃಷ್ಟಿಸಿದೆ.

ಭಾರತೀಯ ಸಿನಿ ಜಗತ್ತಿನ ನಯಾ ಫೈಯರ್​ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್​ ಅನ್ನೋ ಒಂದೇ ಒಂದು ಸಿನಿಮಾ ಯಶ್​​ರನ್ನ ಬಣ್ಣದ ಜಗತ್ತಿನ ಬ್ರ್ಯಾಂಡ್ ಅಂಬಾಸೀಡರ್​​​​​​ ಮಾಡಿದೆ. ಕೆಜಿಎಫ್​​ನಿಂದ ಹಲವು ಮೈಲುಗಲ್ಲನ್ನ ನೆಟ್ಟಿರೋ ಯಶ್​ ಸ್ಟೈಲ್​ಗೆ ಐಕಾನ್ ಕೂಡ ಹೌದು. ಯಾವ್ ಮಟ್ಟಕ್ಕೆ ಅಂದ್ರೆ ದೇಶಾದ್ಯಂತ ಯಶ್​ ಸ್ಟೈಲ್​​ ಟ್ರೆಂಡ್ ಆಗ್ತಿದೆ. ಆದ್ರೆ ಈಗ ಈ ಸ್ಟೈಲ್ ಐಕಾನ್ ಸ್ಟೋರಿಯನ್ನ ನಿಮ್ಗೆ ಬಿಡಿಸಿ ಹೇಳೋಕು ಮೊದಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಹಾಗು ಪ್ರಧಾನಿ ನರೇಂದ್ರ ಮೋದಿ ಸ್ಟೈಲ್​ ಬಗ್ಗೆ ಸಣ್ಣದೊಂದು ಇಂಟ್ರಡಕ್ಷನ್ ಕೊಟ್ ​ಬಿಡ್ತೀವಿ ನೋಡಿ. ದೇಶದ ಅಜಾತ ಶತ್ರು ಅಟಲ್ ಬಿಹಾರಿ ವಾಜೀಪೇಯಿ. ಇವ್ರು ನಡೆದು ಬರ್ತಿದ್ದಾರೆ ಅಂದ್ರೆ ನೋಡೋದೆ ಒಂದು ಚಂದ. ಜುಬ್ಬ ಪೈಜಾಮ ತೊಡುತ್ತಿದ್ದ ವಾಜಿಪೇಯಿ ಅರದ ಮೇಲೆ ಅರ್ಧ ತೋಳಿನ ಕೋಟ್ ಧರಿಸುತ್ತಿದ್ರು. ಈ ಡ್ರೆಸ್ ಕೋಡ್ ಅಂದು ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಅದೇ ರೀತಿ ಪ್ರಧಾನಿ ನರೇಂದ್ರ ಮೋಡಿ ಸ್ಟೈಲ್​ ಕೂಡ ಈಗ್ಲೂ ಟ್ರೆಂಡ್ ಆಗ್ತಾನೆ ಇರುತ್ತೆ. 

ಈಗ ಈ ಎಲ್ಲಾ ಡ್ರೆಸ್​​ ಕೋಡ್​​ಗಿಂತ ಹೆಚ್ಚು ಸೌಂಡ್ ಮಾಡುತ್ತಿರೋದು ರಾಕಿಂಗ್​ ಸ್ಟಾರ್ ಯಶ್​ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡ ಸೂಟ್ ಸ್ಟೈಲ್​. ಉದ್ದನೆ ಗಡ್ಡ, ಹೇರ್​ ಸ್ಟೈಲ್‌ನಿಂದ ಯಶ್ ಸ್ಟೈಲ್​ ಎಷ್ಟು ಟ್ರೆಂಡ್ ಆಯ್ತೋ ಅದಕ್ಕಿಂತ ಒಂದು ಕೈ ಜಾಸ್ತಿ ಎನ್ನುವಂತೆ ಯಶ್​​ರ ಸೂಟ್ ಸ್ಟೈಲ್ ಈಗ ಹವಾ ಸೃಷ್ಟಿಸಿದೆ. ದೆಹಲಿಯ ಹಲವು ಗಾರ್ಮೆಂಟ್ಸ್​ಗಳಲ್ಲಿ ರಾಕಿಯ ರೆಟ್ರೋ ಸ್ಟೈಲ್​​​ನ ಸೂಟ್​ಗಳು ಸಿದ್ಧವಾಗ್ತಿವೆ. ಸ್ಟೈಲ್​ಗೆ ಐಕಾನ್ ಯಶ್​ ರಾಕಿ ಸೂಟ್ಸ್​​​ಗಳು ಈಗ ದೇಶಾದ್ಯಂತ ಟ್ರೆಂಡ್ ಆಗುತ್ತಿದೆ. ಡೆಲ್ಲಿಯ ಬಟ್ಟೆ ಗಾರ್ಮೆಂಟ್ಸ್​ ಒಂದರಲ್ಲಿ ರಾಕಿ ಸ್ಟೈಲ್​​ನ ರೆಟ್ರೋ ಸೂಟ್​ಗಳನ್ನ ಸಿದ್ಧಪಡಿಸಲಾಗ್ತಿದೆ. ಟೈಲರ್ ಶಾಪ್​​ಗಳ ಎದುರು ಯಶ್​ ಫೋಟೋ ಹಾಕಿ ರಾಕಿ ತರ ಸ್ಟೈಲ್​ನ ಬಟ್ಟೆ ಧರಿಸಿ ಅಂತ ಪೋಸ್ಟ್​ ಹಚ್ಚುತ್ತಿದ್ದಾರೆ. ರಾಕಿಯ ಈ ಸೂಟ್​​ 15 ಸಾವಿರದಿಂದ ಶುರುವಾಗಿ 1 ಲಕ್ಷದವರೆಗೂ ರೇಟ್​ ಫಿಕ್ಸ್ ಮಾಡಲಾಗಿದೆ. ಈ ಹಿಂದೆ ವಿಷ್ಣುವರ್ಧನ್ ನಟನೆಯ ಯಜಮಾನ ಸೀರೆ, ಪುಪ್ಪ ಸಿನಿಮಾದಲ್ಲಿ ಶ್ರೀವಲ್ಲಿ ಧರಿಸಿದ್ದ ಸೀರೆ ಮಾರ್ಕೇಟ್​ಗೆ ಬಂದಿದ್ವು. ಈಗ ರಾಕಿಯ ಸೂಟ್ ದೇಶಾದ್ಯಂತ ಫ್ಯಾಷನ್​ ಲೋಕವನ್ನ ಸೆಳೆಯುತ್ತಿವೆ. ಹೀಗಾಗಿ ಯಶ್‌ ನ್ಯಾಷನಲ್ ಸ್ಟಾರ್ ಮಾತ್ರ ಅಲ್ಲ ನ್ಯಾಷನಲ್ ಸ್ಟೈಲ್ ಐಕಾನ್ ಕೂಡ ಹೌದು ಅನ್ನೋದೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಮತ್ತೊಂದಿಲ್ಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment