Asianet Suvarna News Asianet Suvarna News

ಮಲೆಯಾಳಂ ಹೀರೋಯಿನ್‌ಗೆ ಕಾಡಿದ ಕಾಮುಕ: ಖಾಸಗಿ ಅಂಗಾಂಗ ಮುಟ್ಟಿ ನಟಿಯರಿಗೆ ದೌರ್ಜನ್ಯ!

ಮಲೆಯಾಳಂ ಸಿನಿಮಾ ರಂಗದಲ್ಲಿ ಏನಾಗ್ತಿದೆ? ಆ ಚಿತ್ರರಂಗದಲ್ಲಿ ಹೀರೋಯಿನ್‌ಗೆ ರಕ್ಷಣೆ ಇಲ್ಲವಾ? ಹೀಗಂತ ಸಿನಿಮಾರಂಗದಲ್ಲಿ ಡೌಟ್ ಶುರುವಾಗಿದೆ. ಯಾಕ್ ಗೊತ್ತಾ? ಮಲೆಯಾಳಂ ಸಿನಿಮಾ ಇಂಡಸ್ಟ್ರಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯದ ಸುದ್ದಿಗಳು ಪದೇ ಪದೇ ಹೊರ ಬರುತ್ತಿವೆ. 

ಮಲೆಯಾಳಂ ಸಿನಿಮಾ ರಂಗದಲ್ಲಿ ಏನಾಗ್ತಿದೆ? ಆ ಚಿತ್ರರಂಗದಲ್ಲಿ ಹೀರೋಯಿನ್‌ಗೆ ರಕ್ಷಣೆ ಇಲ್ಲವಾ? ಹೀಗಂತ ಸಿನಿಮಾರಂಗದಲ್ಲಿ ಡೌಟ್ ಶುರುವಾಗಿದೆ. ಯಾಕ್ ಗೊತ್ತಾ? ಮಲೆಯಾಳಂ ಸಿನಿಮಾ ಇಂಡಸ್ಟ್ರಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯದ ಸುದ್ದಿಗಳು ಪದೇ ಪದೇ ಹೊರ ಬರುತ್ತಿವೆ. ಕಳೆದ ನಾಲ್ಕೈದು ವರ್ಷದ ಹಿಂದಷ್ಟೇ ಮಲೆಯಾಳಂ ನಟಿ ಮೇಲೆ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ಸುದ್ದಿ ದೊಡ್ಡದಾಗಿ ಹಬ್ಬಿತ್ತು. ಈಗ  ಮಲೆಯಾಳಂನ ಇಬ್ಬರು ಯುವ ನಟಿಯರ ಮೇಲೆ ಲೈಂಗಿಕ ಕಿರುಕುಳ ಆಗಿದೆ. ಕಾಮುಕರು ಜನ ಸಂಧಣಿ ಮಧ್ಯೆ ಆ ನಟಿಯರ ಖಾಸಗಿ ಅಂಗಾಂಗ ಮುಟ್ಟಿ ಕಿರುಕುಳ ಕೊಟ್ಟ ಘಟನೆ ನಡೆದಿದೆ. ಮಾಲಿವುಡ್‌ನ ಯುವ ನಟಿ ಸಾನ್ಯಾ ಇಯ್ಯಪ್ಪನ್ ಹಾಗು ಗ್ರೇಸ್ ಆಂಟೋನಿ ಸಟರ್ಡೇ ನೈಟ್ ಸಿನಿಮಾ ಪ್ರಚಾರಕ್ಕೆ ಕೇರಳದ ತಿರುವನಂತಪುರಂ ಕೋಯಿಕ್ಕೋಡ್ ಗೆ ತೆರಳಿದ್ರು. 

ಈ ಬ್ಯೂಟಿಫುಲ್ ಹೀರೋಯಿನ್ಸ್ ಬರೋ ವಿಚಾರ ತಿಳಿದು ಸಾವಿರಾರು ಜನ ಆ ಮಾಲ್‌ನಲ್ಲಿ ಸೇರಿದ್ರು. ಸಿನಿಮಾ ಪ್ರಚಾರ ಮುಗಿಸಿ ತೆರಗಳುವಾಗ ನಟಿಯರನ್ನ ಜನ ಮುತ್ತಿಕೊಂಡಿದ್ರು. ಈಗ ಸಾವಿರಾರು ಜನರಿದ್ರೂ, ರಕ್ಷಣೆಗೆ ಪೋಲೀಸರಿದ್ರೂ, ಕೆಲ ಕೆಟ್ಟ ಕಾಮುಖ ಮನಸ್ಸುಗಳು ನಟಿಯರ ಮೇಲೆ ಎರಗಿ ಖಾಸಗಿ ಅಂಗಗಳಿಗೆ ಕೈ ಹಾಕಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ನಟಿ ಸಾನ್ಯಾ ಇಯ್ಯಪ್ಪನ್ ಕಾಮುಕನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗುತ್ತಿದೆ. ನಟಿ ಸಾನ್ಯಾ ಇಯ್ಯಪ್ಪನ್ ಹಾಗು ಸಹ ಕಲಾವಿದೆ ಗ್ರೇಸ್ ಆಂಟೋನಿ ತಮಗಾದ ಕೆಟ್ಟ ಅನುಭವದ ಭಗ್ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೆಲ ಅಸಹ್ಯಕರ ವ್ಯಕ್ತಿಗಳು ಜನಸಂದಣಿಯಲ್ಲಿ ತಮ್ಮ ಕೈ ಹಿಡಿದು ಎಳೆದರು. ಮೈ ಸವರಿದರು. ಅವರು ಎಲ್ಲಿ ಮುಟ್ಟಿದ ಎಂದು ಹೇಳಲು ಅಸಹ್ಯ ಆಗುತ್ತೆ. ನನ್ನ ಸಹ ಕಲಾವಿದೆಗೂ ಇದೇ ರೀತಿಯ ಅನುಭವ ಆಗಿದೆ. ಆ ಕ್ಷಣ ಏನು ಮಾಡಬೇಕು ಅಂತ ನನಗೆ ಗೊತ್ತಾಗಲಿಲ್ಲ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತ ನಟಿ ಸಾನ್ಯಾ ಇಯ್ಯಪ್ಪನ್ ಬರೆದುಕೊಂಡಿದ್ದಾರೆ. ಸಧ್ಯ ಮಾಲ್‌ನಲ್ಲಿ ನಡೆದ ಘಟನೆಯ ವೀಡಿಯೋ ಈ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories