ಯಶ್ ಗೆಟಪ್ ಕಾಪಿ ಮಾಡಿದ್ರಾ ಸಲ್ಮಾನ್ ಖಾನ್?: ಉದ್ದನೆ ಕೂದಲು ಬಿಟ್ಟು ಕಾಣಿಸಿದ ಸಲ್ಲು!
ಕೆಜಿಎಫ್ನಲ್ಲಿ ಸಿಕ್ಕಾಪಟ್ಟೆ ಮಾಸ್ ಆಗಿ ಮಿಂಚಿದ್ದ ರಾಕಿಯನ್ನ ನೋಡೋದೆ ಒಂದು ಹಬ್ಬವಾಗಿತ್ತು. ಉದ್ದನೆ ಹೇರ್ಸ್ಟೈಲ್ ಮಾಡಿಕೊಂಡು ರಾ ಲುಕ್ನಲ್ಲಿ ಮಿಂಚಿದ್ದ ಯಶ್ ಲುಕ್ ಹಲವರ ಹಾರ್ಟ್ ಕದ್ದಿತ್ತು.
ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್. ಸೌತ್, ನಾರ್ಥ್, ಈಸ್ಟ್, ವೆಸ್ಟ್ ಎಲ್ಲೇ ಹೋದರೂ ರಾಕಿಯನ್ನ ಕೊಂಡಾಡುತ್ತಾರೆ. ಯಶ್ ಈಗ ಸ್ಟಾರ್ಗಳಿಗೆ ಐಕಾನ್ ಆಗಿದ್ದಾರೆ. ಇತ್ತೀಚೆಗಷ್ಟೆ ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಹುಡುಕಲ್ಪಟ್ಟ ಸ್ಟಾರ್ ಅನ್ನೋ ಹೆಗ್ಗಳಿಕೆ ರಾಕಿ ಮುಡಿಗೇರಿತ್ತು. ಇದೀಗ ಬಿಟೌನ್ನಲ್ಲಿ ನೂರಾರು ಕೋಟಿ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದ್ದ ಬಿಗ್ ಸ್ಟಾರ್ಗಳೇ ರಾಕಿಯ ಸ್ಟೈಲ್ ಅನ್ನ ಕಾಪಿ ಮಾಡುತ್ತಿದ್ದಾರೆ. ಯಶ್ ಸ್ಟೈಲ್ಗೆ ಹೆಸರುವಾಸಿ. ಯಶ್ ಕಣ್ಣಲ್ಲೊಂದು ಫೈಯರ್ ಇದೆ. ಲುಕ್ನಲ್ಲೊಂದು ಖದರ್ ಇದೆ. ಕೆಜಿಎಫ್ನಲ್ಲಿ ಸಿಕ್ಕಾಪಟ್ಟೆ ಮಾಸ್ ಆಗಿ ಮಿಂಚಿದ್ದ ರಾಕಿಯನ್ನ ನೋಡೋದೆ ಒಂದು ಹಬ್ಬವಾಗಿತ್ತು. ಉದ್ದನೆ ಹೇರ್ಸ್ಟೈಲ್ ಮಾಡಿಕೊಂಡು ರಾ ಲುಕ್ನಲ್ಲಿ ಮಿಂಚಿದ್ದ ಯಶ್ ಲುಕ್ ಹಲವರ ಹಾರ್ಟ್ ಕದ್ದಿತ್ತು.
SIIMA ಬಳಿಕ ಬೆಂಗಳೂರಿನಲ್ಲಿ ಅಲ್ಲು ಅರ್ಜುನ್ ಪಾರ್ಟಿ; ತನ್ನಿಷ್ಟದ ಜಾಗದಲ್ಲಿ ಪುಷ್ಪ ಸ್ಟಾರ್ ಮಸ್ತ್ ಡಾನ್ಸ್
ಇದೀಗ ಇದೇ ಲುಕ್ಅನ್ನ ಬಿಟೌನ್ ಬಾಯ್ಜಾನ್ ಸಲ್ಮಾನ್ ಖಾನ್ ಕಾಪಿ ಮಾಡಿದ್ದಾರಾ ಅನ್ನೋ ಡೌಟ್ ಶುರುವಾಗಿದೆ. ಯಾಕಂದ್ರೆ ಸಲ್ಲು ನಟಿಸುತ್ತಿರೋ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೆಜಿಎಫ್ನ ಯಶ್ ರೀತಿಯಲ್ಲೇ ಉದ್ದನೆ ಕೂದಲು ಬಿಟ್ಟಿದ್ದಾರೆ. ರಾಕಿ ಹಲವರಿಗೆ ಮಾದರಿ. ಎಷ್ಟೋ ಯುವಕರಿಗೆ ಯಶ್ ಸ್ಫೂರ್ತಿ. ಈಗ ಸಲ್ಮಾನ್ ಖಾನ್ ಕೂಡ ಯಶ್ ಅವರ ಸ್ಟೈಲ್ಗೆ ಮನಸೋತಂತಿದೆ. ಕೆಲ ಹೀರೋಗಳು ಯಶ್ ರೀತಿ ಗಡ್ಡ ಬಿಟ್ಟು ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸಲ್ಮಾನ್ ಖಾನ್ ಉದ್ದ ಕೂದಲಿನ ಗೆಟಪ್ ಯಶ್ರ ಕೆಜಿಎಫ್ ಲುಕ್ ಹೋಲುತ್ತಿದೆ. ಸಲ್ಲುರ ಈ ಲುಕ್ ನೋಡಿ ನೆಟ್ಟಿಗರು ಯಶ್ರ ಕೆಜಿಎಫ್ ಲುಕ್ಗೆ ಹೋಲಿಕೆ ಮಾಡುತ್ತಿದ್ದಾರೆ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಟೀಸರ್ನಲ್ಲಿ ಸಲ್ಲು ಹೀಗೆ ಉದ್ದ ಕೂದಲಿನ ಗೆಟಪ್ನಲ್ಲಿ ಕಾಣಿಸಿಕೊಳ್ಳಲು ಯಶ್ ಅವರೇ ಸ್ಫೂರ್ತಿ ಅಂತ ಜನ ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಮಂದಿ ಏನೇ ಮಾಡಿದರೂ ಅಲ್ಲಿ ಯಶ್ ಹೆಸರು ಬಂದೇ ಬರುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment