Asianet Suvarna News Asianet Suvarna News

Adipurush Teaser Trolled: ಪ್ರಭಾಸ್ ಪಾತ್ರಕ್ಕೆ ಚೋಟಾ ಭೀಮ್ ಎಂದ ನೆಟ್ಟಿಗರು!

ತೆಲುಗು ಸ್ಟಾರ್ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ನಟನೆಯ ಆದಿಪುರುಷ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಬಂದ ಆದಿಪುರುಷ್ ಟೀಸರ್ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಚಿತ್ರದ ವಿಎಫ್‌ಎಕ್ಸ್, ರಾವಣ ಹಾಗೂ ರಾಮನ ಪಾತ್ರವನ್ನು ತೋರಿಸಿದ ರೀತಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ತೆಲುಗು ಸ್ಟಾರ್ ಪ್ರಭಾಸ್ ಮತ್ತು ಸೈಫ್ ಅಲಿ ಖಾನ್ ನಟನೆಯ ಆದಿಪುರುಷ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ನವರಾತ್ರಿ ಹಬ್ಬದ ಪ್ರಯುಕ್ತ ಬಂದ ಆದಿಪುರುಷ್ ಟೀಸರ್ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿದೆ. ಚಿತ್ರದ ವಿಎಫ್‌ಎಕ್ಸ್, ರಾವಣ ಹಾಗೂ ರಾಮನ ಪಾತ್ರವನ್ನು ತೋರಿಸಿದ ರೀತಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆದಿಪುರುಷ್ ಟೀಸರ್ ನೋಡಿದ ಪ್ರತಿಯೊಬ್ಬರು ಆದಿಪುರುಷ್ ಚಿತ್ರತಂಡಕ್ಕೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಮನಸ್ಸಿಗೆ ಬಂದ ಹಾಗೆ ಟ್ರೋಲ್ ಮಾಡುತ್ತಿದ್ದಾರೆ. ಕಳಪೆ ವಿಎಫ್‌ಎಕ್ಸ್ ಬಳಸಿ ಟೀಸರ್ ಮಾಡಿದ್ದಾರೆ. ಈ ಸಿನಿಮಾ ಟೀಸರ್ ಚೋಟಾ ಭೀಮ್ ಕಾರ್ಟೂನ್ ರೀತಿ ಕಾಣುತ್ತಿದೆ ಅಂತ ಕಮೆಂಟ್ ಮಾಡುತ್ತಿದ್ದಾರೆ. ‘ಆದಿಪುರುಷ್​’ ಚಿತ್ರದಲ್ಲಿ ಪ್ರಭಾಸ್​ ಅವರು ರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಫ್​ ಅಲಿ ಖಾನ್​ ಅವರಿಗೆ ರಾವಣನ ಪಾತ್ರ ನೀಡಲಾಗಿದೆ. ಸೀತೆಯಾಗಿ ಕೃತಿ ಸನೋನ್​ ನಟಿಸುತ್ತಿದ್ದಾರೆ. ರಾವಣನ ಪಾತ್ರ ಅಲ್ಲಾವುದ್ದೀನ್​ ಖಿಲ್ಜಿ ರೀತಿ ಇದೆ ಎಂದು ಅನೇಕರು ಟೀಕೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಬಾಲಿವುಡ್​ ನಿರ್ದೇಶಕ ಓಂ ರಾವತ್​ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಖ್ಯಾತ ನಿರ್ಮಾಪಕ ಭೂಷಣ್​ ಕುಮಾರ್​ ಅವರು ಬಂಡವಾಳ ಹೂಡುತ್ತಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories