Asianet Suvarna News Asianet Suvarna News

ಪೊನ್ನಿಯಿನ್ ಸೆಲ್ವನ್ ಪ್ರೀ-ರಿಲೀಸ್ ಇವೆಂಟ್: ವಿಕ್ರಂ-ಕಾರ್ತಿ-ತ್ರಿಷಾ ನೋಡೋಕೆ ಬಂತು ಫ್ಯಾನ್ಸ್ ದಂಡು!

ಪೊನ್ನಿಯಿನ್ ಸೆಲ್ವನ್‌ ಚಾಪ್ಟರ್ 1 ಸಿನಿಮಾದ ಸುದ್ದಿಗೋಷ್ಠಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಮಣಿರತ್ನಂ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ತಮಿಳು ನಟ ವಿಕ್ರಂ, ಐಶ್ವರ್ಯ ರೈ, ತ್ರಿಶಾ, ಕಾರ್ತಿ, ಜಯಂ ರವಿ ನಟಿಸಿದ್ದು, ಇದೇ ಸೆಪ್ಟೆಂಬರ್ 30ಕ್ಕೆ ಪೊನ್ನಿಯಿನ್ ಸೆಲ್ವನ್ ಸಿನಿಮಾ ರಿಲೀಸ್ ಆಗುತ್ತಿದೆ.

ಪೊನ್ನಿಯಿನ್ ಸೆಲ್ವನ್‌ ಚಾಪ್ಟರ್ 1 ಸಿನಿಮಾದ ಸುದ್ದಿಗೋಷ್ಠಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ಮಣಿರತ್ನಂ ನಿರ್ದೇಶನದ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ತಮಿಳು ನಟ ವಿಕ್ರಂ, ಐಶ್ವರ್ಯ ರೈ, ತ್ರಿಶಾ, ಕಾರ್ತಿ, ಜಯಂ ರವಿ ನಟಿಸಿದ್ದು, ಇದೇ ಸೆಪ್ಟೆಂಬರ್ 30ಕ್ಕೆ ಪೊನ್ನಿಯಿನ್ ಸೆಲ್ವನ್ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ವಿಕ್ರಂ, ತ್ರಿಷಾ, ಕಾರ್ತಿ, ಜಯಂ ರವಿ ಭಾಗಿಯಾಗಿದ್ದು, ಇವರನ್ನು ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು. ಇನ್ನು ಪವರ್ ಸ್ಟಾರ್ ಸಿನಿಮಾದಲ್ಲಿ ಅಪ್ಪು ಜೊತೆ ನಟಿಸಿದ್ದರ ಅನುಭವ ಹಂಚಿಕೊಂಡಿದ್ದಲ್ಲದೆ, ದ್ವಿತ್ವ ಸಿನಿಮಾದಲ್ಲೂ ಅಪ್ಪು ಜೊತೆ ತ್ರಿಷಾ ನಟಿಸಬೇಕಿತ್ತು. ಅಪ್ಪುವನ್ನು ವೇದಿಕೆ ಮೇಲೆ ತ್ರಿಷಾ ನೆನಪು ಮಾಡಿಕೊಂಡು ಮಿಸ್ ಯೂ ಅಪ್ಪು ಎಂದರು. ನಟ ವಿಕ್ರಮ್ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರ ಗಮನ‌ ಸೆಳೆದರು. 

ಸೆ.30ಕ್ಕೆ ಪೊನ್ನಿಯನ್ ಸೆಲ್ವನ್ ಬಿಡುಗಡೆ: ತೆರೆ ಮೇಲೆ ಸಿಂಹಾಸನ ಕಿತ್ತಾಟದ ರೋಚಕ ಕಥೆ!

ಕನ್ನಡದಲ್ಲೇ ಮಾತು ಆರಂಭಿಸಿದ ನಟ ಚಿಯಾನ್ ವಿಕ್ರಂ, ಡಬ್ಬಿಂಗ್ ಮಾಡುವಾಗ ಕನ್ನಡ ಮಾತಾಡೋದನ್ನ ಕಲಿತೆ. ಹಿಸ್ಟಾರಿಕಲ್ ಫಿಕ್ಷನಲ್‌ ಸಿನಿಮಾ ಇದು. ಸೌತ್ ಇಂಡಿಯಾದ ಸಂಪ್ರದಾಯ ಈ ಸಿನಿಮಾದಲ್ಲಿದೆ. ಎಲ್ಲಾ ಪಾತ್ರಗಳು ಅದ್ಧೂರಿಯಾಗಿ ಬಂದಿದೆ ಎಂದರು. ಇನ್ನು ಇದು ಮಣಿರತ್ನಂ ಅವರ 'ಕನಸಿನ ಸಿನಿಮಾ'. ದೊಡ್ಡ ಬಜೆಟ್, ದೊಡ್ಡ ತಾರಾಗಣ ಹೊಂದಿರುವ ಈ ಸಿನಿಮಾದ ವಿಶೇಷವೆಂದರೆ ಇದೊಂದು ತಮಿಳಿನ ಜನಪ್ರಿಯ ಕಾದಂಬರಿಯನ್ನು ಆಧರಿಸಿದ ಕಥೆಯಾಗಿದೆ. ಕೃಷ್ಣಮೂರ್ತಿ ಅವರು ಬರೆದ ಈ ಕಾದಂಬರಿ ಚೋಳರ ಸುತ್ತ ಸುತ್ತುತ್ತದೆ ಮತ್ತು ಮುಖ್ಯವಾಗಿ ಲೇಖನ ಅರುಣ್ ಮೋಳಿ ವರ್ಮನ್ ಕಥೆಯಾಗಿದೆ. ಇತ ತಮಿಳು ಇತಿಹಾಸದಲ್ಲಿ ಒಬ್ಬ ಶ್ರೇಷ್ಠ ರಾಜರುಗಳಲ್ಲಿ ಒಬ್ಬನಾಗಿ ಕ್ರಿ.ಶ. 10ನೇ - 11ನೇ ಶತಮಾನದಲ್ಲಿ ರಾಜ್ಯವಾಳಿದ್ದನು ಹಾಗಾಗಿ ’ಪೊನ್ನಿಯಿನ್ ಸೆಲ್ವನ್’ ಸಿನಿಮಾದ ಮೇಲೂ ಕೂಡ ಬೆಟ್ಟದಷ್ಟು ನಿರೀಕ್ಷೆ ಬೆಳೆದಿದೆ. ಇದೇ ಸೆ.30ರಂದು ಬಿಡುಗಡೆ ಆಗಲಿದೆ. ಖ್ಯಾತ ನಟ ವಿಕ್ರಂ, ಐಶ್ವರ್ಯ ರೈ ಬಚ್ಚನ್, ತ್ರಿಷಾ, ಜಯಂ ರವಿ, ಪ್ರಕಾಶ್ ರೈ ಹೀಗೆ ಬಹುತಾರಾಗಣವೇ ಇದರಲ್ಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Video Top Stories