Asianet Suvarna News Asianet Suvarna News

ಸಮಂತಾ ಎರಡನೇ ಮದುವೆಗೆ ತಯಾರಿ?: ಯಾರ ಜೊತೆ ಗೊತ್ತಾ?

ಟಾಲಿವುಡ್‌ ನಟ ನಾಗ ಚೈತನ್ಯ ಮಾಜಿ ಪತ್ನಿ ನಟಿ ಸಮಂತಾ ಎರಡನೇ ಮದುವೆಗೆ ರೆಡಿಯಾಗಿದ್ದಾರೆ ಎನ್ನಲಾಗಿದೆ. ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ಉತ್ತಮ ಸ್ನೇಹಿತರಾಗಿ, ಬಳಿಕ ಪ್ರೀತಿಸಿ ಹಿರಿಯರನ್ನು ಒಪ್ಪಿಸಿ ಮದುವೆಯಾದರು. 

First Published Sep 27, 2022, 12:30 AM IST | Last Updated Sep 27, 2022, 12:30 AM IST

ಟಾಲಿವುಡ್‌ ನಟ ನಾಗ ಚೈತನ್ಯ ಮಾಜಿ ಪತ್ನಿ ನಟಿ ಸಮಂತಾ ಎರಡನೇ ಮದುವೆಗೆ ರೆಡಿಯಾಗಿದ್ದಾರೆ ಎನ್ನಲಾಗಿದೆ. ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ಉತ್ತಮ ಸ್ನೇಹಿತರಾಗಿ, ಬಳಿಕ ಪ್ರೀತಿಸಿ ಹಿರಿಯರನ್ನು ಒಪ್ಪಿಸಿ ಮದುವೆಯಾದರು. ಆದರೆ ಅವರ ಮದುವೆ ಮೂರು ವರ್ಷಗಳ ನಂತರ ಮುರಿದುಬಿದ್ದಿತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಮಂತಾ - ನಾಗ ಚೈತನ್ಯ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು. ಇದೀಗ ಸಮಂತಾ ಎರಡನೇ ಮದುವೆಗೆ ರೆಡಿಯಾಗಿದ್ದಾರೆ ಎಂಬ ಸಂಗತಿ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. ಬ್ಯುಸಿನೆಸ್‌ಮ್ಯಾನ್‌ನೊಂದಿಗೆ ಸಮಂತಾ ಎರಡನೇ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದ್ದು, ಸಮಂತಾ ಮ್ಯಾನೇಜರ್ ಕಡೆಯಿಂದ ಇನ್ನೂ ಯಾವುದೇ ಸ್ಪಷ್ಟನೇ ಸಹ ಬಾರದೇ ಇರುವುದರಿಂದ ಈ ವಿಚಾರ ನಿಜವೇ ಎಂಬ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment