Asianet Suvarna News Asianet Suvarna News

ಕೊನೆಗೂ ನಯನತಾರ ಮದುವೆ ವಿಡಿಯೋ ರಿಲೀಸ್: ನೋಡಲು ದುಡ್ಡು ಕೊಡ್ಬೇಕು!

ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ವಿಡಿಯೋ ನೋಡಬೇಕಾದರೆ, ಓಟಿಟಿಗೆ ಸಬ್ ಸ್ಕ್ರೈಬ್ ಆಗಿರಲೇಬೇಕು. ಇಲ್ಲದಿದ್ದರೆ ಆ ವಿಡಿಯೋವನ್ನು ಖಂಡಿತಾ ನೋಡಲು ಸಾಧ್ಯವಿಲ್ಲ.

ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ವಿಡಿಯೋ ನೋಡಬೇಕಾದರೆ, ಓಟಿಟಿಗೆ ಸಬ್ ಸ್ಕ್ರೈಬ್ ಆಗಿರಲೇಬೇಕು. ಇಲ್ಲದಿದ್ದರೆ ಆ ವಿಡಿಯೋವನ್ನು ಖಂಡಿತಾ ನೋಡಲು ಸಾಧ್ಯವಿಲ್ಲ. ಈ ಜೋಡಿಯ ಮದುವೆ ವಿಡಿಯೋವನ್ನು ಎಕ್ಸ್ ಕ್ಲೂಸಿವ್ ಆಗಿ ನೆಟ್‌ಫ್ಲಿಕ್ಸ್ ಖರೀದಿಸಿದ್ದು, ಹಾಗಾಗಿ ಆಚೆ ನೋಡುವುದಕ್ಕೆ ವಿಡಿಯೋ ಲಭ್ಯವಿರುವುದಿಲ್ಲ. ತಮಿಳಿನ ಖ್ಯಾತ ಜೋಡಿಯ ಮದುವೆ ಇದಾಗಿದ್ದರಿಂದ ನೆಟ್ ಫ್ಲಿಕ್ಸ್ ಭಾರೀ ಮೊತ್ತ ಕೊಟ್ಟು ಮದುವೆ ವಿಡಿಯೋವನ್ನು ಖರೀದಿಸಿತ್ತು. ಈ ಮದುವೆ ವಿಡಿಯೋವನ್ನು ಶೂಟ್ ಮಾಡುವುದಕ್ಕಾಗಿಯೇ ತಂಡವನ್ನು ರಚನೆ ಮಾಡಿತ್ತು. ಫೋಟೋ ಹೊರತಾಗಿ ಒಂದೇ ಒಂದು ವಿಡಿಯೋ ತುಣುಕು ಆಚೆ ಬರಕೂಡದು ಎಂದು ತಾಕೀತು ಮಾಡಿತ್ತು. ಹಾಗಾಗಿ ಫೋಟೋ ಹೊರತಾಗಿ ಯಾವುದೇ ವಿಡಿಯೋ ನೋಡುವುದಕ್ಕೆ ಸಿಕ್ಕಿರಲಿಲ್ಲ. ಸದ್ಯ ಓಟಿಟಿಯಲ್ಲಿ ಮದುವೆ ಟೀಸರ್ ರಿಲೀಸ್ ಮಾಡಿದ್ದು, ಸದ್ಯದಲ್ಲೇ ವಿಡಿಯೋ ಕಂತುಗಳನ್ನು ರಿಲೀಸ್ ಮಾಡುವುದಾಗಿ ಓಟಿಟಿ ಹೇಳಿಕೊಂಡಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment