Vaastu tips for wall color: ಮನೆ ಗೋಡೆಗಳ ಬಣ್ಣ ಯಾವ ದಿಕ್ಕಿಗೆ ಹೇಗಿರಬೇಕು ಗೊತ್ತಾ?

ನಾವು ನಮ್ಮ ಮನೆಯ ಹೊರಗಿನ ಗೋಡೆಗಳಿಗೆ ತಿಳಿ ನೀಲಿ, ಬಿಳಿ, ಹಳದಿ, ಕಿತ್ತಳೆ, ಕ್ರೀಮ್ ಅಥವಾ ಇತರ ತಿಳಿ ಬಣ್ಣಗಳನ್ನು ಬಳಸುತ್ತೇವೆ. ಆದರೆ ನಾವು ಹೀಗೆ ಬಳಸುವ ಬಣ್ಣಗಳು ನಮ್ಮ ಭವಿಷ್ಯ ಮತ್ತು ಜೀವನದ ಮೇಲೆ ಪರಿಣಾಮವನ್ನು ಬೀರುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹೀಗಾಗಿ ಕೋಣೆಯ ಹಾಗೂ ಗೋಡೆಗಳ ಬಣ್ಣವನ್ನು ವಾಸ್ತು ಶಾಸ್ತ್ರದ ಅನುಸಾರ ಬಳಿಯಬೇಕು.

Wall colors to pick for prosperity as per Vaastu

ಮನೆಯನ್ನು (House) ಸುಂದರವಾಗಿ, ಬೇಕಾದಂತೆ ಕಟ್ಟಿಸಲಾಗಿದೆ. ಕಿಟಿಕಿ (Window), ಬಾಗಿಲ (Door) ಸಹಿತ ಒಳ್ಳೊಳ್ಳೇ ಫರ್ನಿಚರ್‌ಗಳನ್ನೂ (Furniture)  ಹಾಕಲಾಗಿದೆ. ನೋಡಿದ ಕೋಡಲೇ ವಾವ್ಹ್ ಅನ್ನಬೇಕೆಂಬ ನಿಟ್ಟಿನಲ್ಲಿ ಚೆಂದಗೆ ಕಾಣಬೇಕು ಎಂದು ಮ್ಯಾಚಿಂಗ್ ಆಧಾರದಲ್ಲಿ ಪೇಂಟಿಂಗ್ (Painting) ಸೇರಿದಂತೆ ಇನ್ನಿತರ ವಸ್ತುಗಳೊಂದಿಗೆ ಡೆಕೋರ್ (Decoration) ಕೂಡಾ ಮಾಡಲಾಗಿರುತ್ತದೆ. ಆದರೆ, ಮನೆಯಲ್ಲಿ ಮಾತ್ರ ನೆಮ್ಮದಿ (Comfort) ಇಲ್ಲ. ಜೀವನದಲ್ಲಿ (Life)  ಒಂದಿಲ್ಲೊಂದು ಸಮಸ್ಯೆಗಳು (Problems) ಎದುರಾಗುತ್ತಲೇ ಇರುತ್ತವೆ. ಇದಕ್ಕೆ ನಿಮ್ಮ ಮನೆಯ ಗೋಡೆಗಳೂ ಕಾರಣವಾಗಬಹುದು. ಅಂದರೆ, ಅವುಗಳಿಗೆ ಹಾಕುವ ಬಣ್ಣದಿಂದ ನಿಮಗೆ ಸಮಸ್ಯೆಯಾಗಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. ವಾಸ್ತು ತಜ್ಞರು ಹೇಳುವ ಪ್ರಕಾರ, ಗೋಡೆಗೆ ದಿಕ್ಕಿನ (Direction) ಅನುಸಾರ ಬಣ್ಣವನ್ನು ಬಳಿಯಬೇಕು. ಇಂಥ ಒಂದು ಬದಲಾವಣೆಯಿಂದ ಸಮಸ್ಯೆಗಳಿಂದ ಪಾರಾಗಬಹುದು. ಇನ್ನು ಗೋಡೆಗಳ ಬಣ್ಣಕ್ಕೆ ತಕ್ಕಂತೆ ಪರದೆಗಳು, ಬೆಡ್‌ಶೀಟ್ (Bedsheet) ಮತ್ತು ದಿಂಬಿನ (Pillow) ಹೊದಿಕೆಗಳ ಬಣ್ಣ ಇದ್ದರೆ ಉತ್ತಮ. ಹಾಗಾದರೆ ಯಾವ ದಿಕ್ಕಿನ ಗೋಡೆಗೆ ಯಾವ ಬಣ್ಣ ಬಳಿಯಬೇಕು ಎಂಬ ಬಗ್ಗೆ ನೋಡೋಣ ಬನ್ನಿ... 

ಉತ್ತರ ದಿಕ್ಕಿನ ಗೋಡೆ (North Direction)
ಮನೆಯ ಉತ್ತರ ಭಾಗದಲ್ಲಿ ನೀರಿನ ಅಂಶ ಇರಲಿದೆ. ಇದು ಸಂಪತ್ತು (Wealth) ಮತ್ತು ಲಕ್ಷ್ಮಿ ದೇವಿಯ (Goddess) ವಾಸಸ್ಥಳ ಎಂದು ಪರಿಗಣಿಸಲ್ಪಟ್ಟಿದೆ. ಹೀಗಾಗಿ ಈ ಭಾಗವನ್ನು ಸ್ವಚ್ಛವಾಗಿಡಬೇಕು. ಇನ್ನು ಇದನ್ನು ಸದಾ ಪವಿತ್ರವಾಗಿಟ್ಟುಕೊಳ್ಳಬೇಕಲ್ಲದೆ, ಖಾಲಿಯಾಗಿಟ್ಟುಕೊಂಡರೆ ಉತ್ತಮ ಎನ್ನಲಾಗಿದೆ. ಈ ಭಾಗದ ಗೋಡೆಗೆ ತಿಳಿ ಹಸಿರು ಬಣ್ಣ (Light green) ಅಥವಾ ಪಿಸ್ತಾ ಹಸಿರು (Pistachio green) ಬಣ್ಣವನ್ನು ಬಳಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಆಕಾಶ ನೀಲಿ (Sky Blue) ಅಂದರೆ ಸ್ಕೈ ಬ್ಲೂ ಬಣ್ಣವನ್ನು ಸಹ ಲೇಪಿಸಬಹುದಾಗಿದೆ. ಹೀಗೆ ಮಾಡುವುದರಿಂದ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಆದರೆ, ನೆನಪಿಡಿ ಈ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಗಾಢ ಬಣ್ಣವನ್ನು ಬಳಿಯಬೇಡಿ. ಇದರಿಂದ ಹಣಕಾಸಿನ ತೊಂದರೆಯನ್ನು ಎದುರಿಸಬೇಕಾದೀತು. 

ದಕ್ಷಿಣ ದಿಕ್ಕಿನ ಗೋಡೆ (South-facing wall)
ದಕ್ಷಿಣ ಭಾಗದ ಗೋಡೆಗೆ ಕಿತ್ತಳೆ (Orange) ಬಣ್ಣವನ್ನು ಬಳಸಿದರೆ ಏಳ್ಗೆಯಾಗುತ್ತದೆ. ಈ ಬಣ್ಣವು ಶಕ್ತಿ (Power) ಮತ್ತು ಉತ್ಸಾಹದ (Excitement) ಸಂಕೇತವಾಗಿದೆ. ಇನ್ನು ಈ ದಿಕ್ಕಿನಲ್ಲಿ ಮಲಗುವ ಕೋಣೆ (Bed Room) ಇದ್ದರೆ ಗುಲಾಬಿ (Rose) ಬಣ್ಣವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. 

ಇದನ್ನು ಓದಿ: Nature and December Born: ಸ್ವಭಾವ ಹೇಗಿರುತ್ತೆ?

ಪೂರ್ವ (East) ದಿಕ್ಕಿನ ಗೋಡೆಗೆ ಈ ಬಣ್ಣವಿರಲಿ
ಪೂರ್ವ ದಿಕ್ಕಿನಲ್ಲಿರುವ ಗೋಡೆಗೆ ತಿಳಿ ನೀಲಿ ಇಲ್ಲವೇ ಬಿಳಿ (White) ಬಣ್ಣವನ್ನು ಬಳಿಯಬಹುದು. ಇದರ ಹೊರತಾಗಿ ಬೇರೆ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವುದು ಅಷ್ಟು ಸೂಕ್ತವಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. 

ಪಶ್ಚಿಮ (west) ದಿಕ್ಕಿನ ಗೋಡೆಗೆ ನೀಲಿ ಬಣ್ಣವಿರಲಿ
ಪಶ್ಚಿಮ ದಿಕ್ಕಿನಲ್ಲಿರುವ ಕೋಣೇಗೆ ಅಥವಾ ಗೋಡೆಗೆ ನೀಲಿ ಬಣ್ಣ ಹೆಚ್ಚು ಸೂಕ್ತವಾಗಿದೆ. ಆದರೆ, ನೀಲಿ ಬಣ್ಣದ ಜೊತೆಗೆ ಅಲ್ಪ ಪ್ರಮಾಣದಲ್ಲಿ ಬಿಳಿ ಬಣ್ಣವನ್ನು ಬಳಸಿಕೊಳ್ಳಬಹುದು. ಇದನ್ನು ವರುಣ ದೇವನ ಸ್ಥಳ ಎಂದು ಪರಿಗಣಿಸಲಾಗಿದೆ. 

ಆಗ್ನೇಯ (Southeast) ಭಾಗದ ಗೋಡೆಗೆ ಈ ಮೂರು ಬಣ್ಣ
ಸಾಮಾನ್ಯವಾಗಿ ಆಗ್ನೇಯ ಭಾಗದಲ್ಲಿ ಅಡುಗೆ ಕೋಣೆ ಇರುತ್ತದೆ. ಈ ಭಾಗವನ್ನು ಅಗ್ನಿ ಮೂಲೆ ಎಂದೂ ಪರಿಗಣಿಸಲಾಗುತ್ತದೆ. ಹೀಗಾಗಿ ಮನೆಯ ಆಗ್ನೇಯ ಭಾಗವನ್ನು ಬೆಂಕಿಯ ಅಂಶಕ್ಕಾಗಿ ಪರಿಗಣಿಸಲಾಗುತ್ತದೆ. ಕಿತ್ತಳೆ, ಹಳದಿ (Yellow) ಅಥವಾ ಬಿಳಿ ಬಣ್ಣವನ್ನು ಈ ಭಾಗದ ಗೋಡೆಗೆ ಬಳಸಬಹುದಾಗಿದೆ. 

ಇದನ್ನು ಓದಿ: Palmistry Lines: ಸಂತಾನ ಭವಿಷ್ಯ ತಿಳಿಸುವ ರೇಖೆ ಯಾವುದು ನಿಮ್ಮ ಕೈಯಲ್ಲಿ!

ದೇವತೆಗಳ ದಿಕ್ಕು ಈಶಾನ್ಯ (Northeast) ಭಾಗದ ಗೋಡೆ
ಈಶಾನ್ಯವನ್ನು ದೇವತೆಗಳು ನೆಲೆಸಿರುವ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕನ್ನು ಶಿವನ ದಿಕ್ಕು ಎಂದೂ ಹೇಳಲಾಗುತ್ತದೆ. ಈ ದಿಕ್ಕಿನಲ್ಲಿರುವ ಗೋಡೆಗಳಿಗೆ ನೇರಳೆ (Purple), ಆಕಾಶ ನೀಲಿ ಇಲ್ಲವೇ ಬಿಳಿ ಬಣ್ಣ ಹೆಚ್ಚು ಸೂಕ್ತವಾಗಿದೆ. ಇನ್ನೂ ತೀರಾ ಅಗತ್ಯವಿದ್ದರೆ, ಹಳದಿ ಬಣ್ಣವನ್ನು ಬಳಸಬಹುದು. 

ನೈಋತ್ಯ (South West) ದಿಕ್ಕಿನ ಗೋಡೆಗೆ ಯಾವ ಬಣ್ಣ..? 
ನೈಋತ್ಯ ಭಾಗದಲ್ಲಿರುವ ಗೋಡೆಗೆ ಕಂದು (Brown), ತಿಳಿಯಾದ ಬಿಳಿ, ಹಸಿರು ಬಣ್ಣವನ್ನು ಬಳಸಬಹುದಾಗಿದೆ.

ವಾಯವ್ಯ (Northwest) ಭಾಗದ ಗೋಡೆಗೆ ಕ್ರೀಮ್ ಬೆಸ್ಟ್
ಈ ದಿಕ್ಕಿನಲ್ಲಿರುವ ಕೋಣೆಗೆ ತಿಳಿ ಬೂದು (Gray) ಬಣ್ಣ, ಬಿಳಿ ಇಲ್ಲವೇ ಕ್ರೀಮ್ ಬಣ್ಣವನ್ನು (Cream Color) ಬಳಸಬಹುದು.

Latest Videos
Follow Us:
Download App:
  • android
  • ios