Asianet Suvarna News Asianet Suvarna News

Nature and December Born: ಸ್ವಭಾವ ಹೇಗಿರುತ್ತೆ?

ಡಿಸೆಂಬರ್ ತಿಂಗಳಿನಲ್ಲಿ ಜನಿಸಿವರಲ್ಲಿ ಆತ್ಮವಿಶ್ವಾಸ ಸದಾ ತುಂಬಿದ್ದು, ಯಾವುದೇ ಕೆಲಸಕ್ಕೆ ಕೈಹಾಕಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ. ಇವರು ಅಧ್ಯಯನದ ವಿಷಯದಲ್ಲೂ ಸದಾ ಮುಂದು. ಪ್ರತಿಯೊಂದು ಕ್ಷೇತ್ರಕ್ಕೆ ಪ್ರವೇಶ ಪಡೆಯುವಾಗಲೂ ಅದರ ಬಗ್ಗೆ ಮೊದಲು ಅಧ್ಯಯನ ಮಾಡಿಯೇ ಮುಂದಿನ ಹೆಜ್ಜೆ ಇಡುತ್ತಾರೆ. ಈ ವಿಷಯದಲ್ಲಿ ಇವರು ಬಹಳ ಜಾಗರೂಕರಾಗಿರುತ್ತಾರೆ. ಹೀಗಾಗಿ ಇವರ ಬಗ್ಗೆ ತಿಳಿಯೋಣ ಬನ್ನಿ...

Do you know the nature of those born in December
Author
Bangalore, First Published Nov 30, 2021, 7:43 AM IST
  • Facebook
  • Twitter
  • Whatsapp

ಡಿಸೆಂಬರ್ (December) ಅಂದರೆ ವರ್ಷದ (Year) ಕೊನೇ (End) ತಿಂಗಳು (Month). ಚಳಿಗಾಲ (winter) ಬೇರೆ, ವರ್ಷ ಮುಗಿಯುತ್ತಿದೆ, ಹೊಸ ವರ್ಷ ಬರುತ್ತಿದೆ ಎಂಬ ಸಂಭ್ರಮ ಸಹಜ. ಆದರೆ, ಈ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು ಹೇಗೆ..? ಅವರ ಗುಣ – ಸ್ವಭಾವಗಳು (Nature) ಏನು ಹೇಳುತ್ತವೆ ಎಂಬ ಕುತೂಹಲ ಇರುವುದು ಸಹಜ. ಸಹಜವಾಗಿ ಕುಟುಂಬದವರೋ (Family), ಹತ್ತಿರದ ಸಂಬಂಧಿಕರೋ, ಸ್ನೇಹಿತ (Friend), ಸ್ನೇಹಿತೆಯರೋ ಈ ತಿಂಗಳಿನಲ್ಲಿ ಜನಿಸಿರುತ್ತಾರೆ. ಅವರು ಹೇಗೆ ಎಂದು ಜ್ಯೋತಿಷ್ಯ ಶಾಸ್ತ್ರ (Astrology). ಇದರ ಅನುಸಾರ ವ್ಯಕ್ತಿಯ ಹುಟ್ಟಿದ ದಿನಾಂಕ (Birth Date), ಸಮಯ (Time), ವಾರ (Week) ಇತ್ಯಾದಿಗಳನ್ನು ಪರಿಗಣಿಸಿ ಭವಿಷ್ಯ (Future) ಹಾಗೂ ಗುಣ, ಸ್ವಭಾವಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಇದರಂತೆಯೇ ಆಯಾ ತಿಂಗಳು ಮತ್ತು ವಾರದಲ್ಲಿ ಹುಟ್ಟಿದವರ ಗುಣಗಳ ಬಗ್ಗೆಯೂ ತಿಳಿಯಬಹುದಾಗಿದೆ. ಒಂದೇ ತಿಂಗಳಿನಲ್ಲಿ ಜನಿಸಿದರೂ ಒಬ್ಬರಿಗಿಂತ ಒಬ್ಬರ ಗುಣ, ಸ್ವಭಾವಗಳಲ್ಲಿ ವ್ಯತ್ಯಾಸಗಳಿರುತ್ತವೆ (Difference). ಆದರೆ, ಕೆಲವು ಅಂಶಗಳು ಮಾತ್ರ ಒಂದೇ ಆಗಿರುತ್ತವೆ. ಕಾರಣ, ಆ ತಿಂಗಳಿನ ವಿಶೇಷತೆ. ಡಿಸೆಂಬರ್‌ನಲ್ಲಿ ಜನಿಸಿದವರು ಅದೃಷ್ಟಶಾಲಿಗಳು, ಹಣ (Money) ಗಳಿಸುವಲ್ಲಿ ನಿಸ್ಸೀಮರು ಎಂದು ಹೇಳಲಾಗುತ್ತದೆ. ಅಲ್ಲದೆ, ಇವರು ತಮ್ಮ ಜೀವನವನ್ನು (Life) ಪ್ರೀತಿಸುತ್ತಾರೆ. ಸಂಗೀತ (Music), ಸಾಹಿತ್ಯದಲ್ಲೂ (Lyrics) ಇವರಿಗೆ ವಿಶೇಷ ಆಸಕ್ತಿ ಇರುತ್ತದೆ. ಇವರಿಗೆ ಎಂದೂ ಸಂಪತ್ತಿನ ಕೊರತೆ ಕಾಡುವುದಿಲ್ಲ. ಕಠಿಣ ಪರಿಶ್ರಮ (Hard Work), ಸಾಮರ್ಥ್ಯದ (Capacity) ಆಧಾರದ ಮೇಲೆ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಹಾಗಾಗಿ ಡಿಸೆಂಬರ್ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೇಗಿರುತ್ತದೆ ಎಂಬುದರ ಬಗ್ಗೆ ತಿಳಿಯೋಣ...

ಡಿಸೆಂಬರ್‌ನಲ್ಲಿ ಜನಿಸಿದವರಲ್ಲಿ ಹೆಚ್ಚಿನವರದ್ದು ಧನು ರಾಶಿ (Sagittarius) ಆಗಿರುತ್ತದೆ. ಈ ರಾಶಿಚಕ್ರದ ಅಧಿಪತಿ ಗ್ರಹ ಗುರು (Jupiter). ಆದರೆ, ಈ ಮಾಸದಲ್ಲಿ ಜನಿಸಿದವರರು ಜಾತಕದ ಅನುಸಾರ ಸೋಮಾರಿಗಳಾಗಿದ್ದರೂ (Lazy) ಸ್ಮಾರ್ಟ್ ವರ್ಕ್ ಬಲ್ಲವರಾಗಿದ್ದಾರೆ. ಡಿಸೆಂಬರ್ ಮೊದಲ ಹದಿನೈದು ದಿನದ ಅವಧಿಯಲ್ಲಿ ಜನಿಸಿದವರು ಕಾಲ್ಪನಿಕ ಜಗತ್ತಿನಲ್ಲಿ ವಿಹರಿಸುವವರಾಗಿರುತ್ತಾರೆ. ಅಷ್ಟೇ ಭಾವನಾಜೀವಿಗಳು ಇವರಾಗಿರುತ್ತಾರೆ. ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಕುಂಟುಂಬದಿಂದ ದೂರವಿರುವುದು ಇವರಿಗೆ ಹೆಚ್ಚಿನ ನೋವನ್ನು ತರುವ ವಿಚಾರವಾಗಿರುತ್ತದೆ.

ಡಿಸೆಂಬರ್ 15ರಿಂದ 31ರ ಅವಧಿಯಲ್ಲಿ ಜನಿಸಿದವರು ಕಲಾಕಾರರು (Artists) ಮತ್ತು ದಾರ್ಶನಿಕರಾಗಿರುತ್ತಾರೆ. ಇವರಲ್ಲಿ ಆತ್ಮವಿಶ್ವಾಸ (Confidence ) ಹೆಚ್ಚಾಗಿರುತ್ತದೆ. ಸ್ವಪ್ರಯತ್ನದಿಂದಲೇ ಜೀವನದಲ್ಲಿ ಅತ್ಯುತ್ತಮ ಸ್ಥಿತಿಗೆ ತಲುಪುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಹಣವಂತರಾಗಿರುವುದಲ್ಲದೆ, ಲಕ್ಷ್ಮೀ ಕೃಪೆ ಇವರಿಗಿರುತ್ತದೆ. ಇವರು ಖರ್ಚು ಮಾಡಲು ಯೋಚಿಸುವವರೂ ಅಲ್ಲ.

ಖಡಕ್ ಮಾತು (Talk)
ಇವರು ಯಾರದ್ದೋ, ಯಾವುದೋ ಮುಲಾಜಿಗೆ ಒಳಗಾಗುವವರಲ್ಲ. ಕಂಡದ್ದನ್ನು ಕಂಡ ಹಾಗೆ ಹೇಳಿಬಿಡುತ್ತಾರೆ. ಇದರಿಂದ ಕೆಲವರ ಕೆಂಗಣ್ಣಿಗೂ ಗುರಿಯಾಗುತ್ತಾರೆ. ಇನ್ನೊಬ್ಬರು ವೃಥಾ ಹೊಗಳುವ (Praise) ಕೆಲಸ ಮಾಡದ ಇವರು, ತಮಗನ್ನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಸತ್ಯವನ್ನೂ (Truth) ಸಹ ಮರೆಮಾಚುವ ಸ್ವಭಾವ ಇವರದ್ದಲ್ಲ. ಇದರ ಜೊತೆಗೆ ಹೊಸ ವಿಚಾರಗಳನ್ನು ತಿಳಿಯುವುದು ಎಂದರೆ ಇವರಿಗೆ ತುಂಬಾ ಇಷ್ಟ (Like). ಹೆಚ್ಚು ಮಾತನಾಡುವ ಇವರು, ಬೇರೆಯವರ ಮಾತನ್ನು ಕೇಳಿಸಿಕೊಳ್ಳುವವರಲ್ಲ. 

ಇದನ್ನು ಓದಿ: Zodiac Sign and Character: ಈ 4 ರಾಶಿಚಕ್ರದವರು ಹಣ ಉಳಿಸುವಲ್ಲಿ ನಿಸ್ಸೀಮರು..!

ಆಕರ್ಷಕ ವ್ಯಕ್ತಿತ್ವ (Attractive personality)
ಈ ತಿಂಗಳಿನಲ್ಲಿ ಜನಿಸಿದವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಜೊತೆಗೆ ನೋಡಲೂ ಆಕರ್ಷಕವಾಗಿರುತ್ತಾರೆ. ಇತರರನ್ನು ತಮ್ಮತ್ತ ಸೆಳೆಯುವ ಆಕರ್ಷಣೆ ಇವರಲ್ಲಿದೆ. ಜೊತೆಗೆ ಇವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ (Clever) ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. 

ಅಪ್ರಿಯ ಸತ್ಯ ಹೇಳದಿರುವುದೇ ಲೇಸು
ಇವರ ‌ನೇರ ನುಡಿ (Straight Word ) ಕೆಲವೊಮ್ಮೆ ಒಳ್ಳೆಯದು ಮಾಡಿದರೆ, ಮತ್ತೆ ಹಲವು ಬಾರಿ ಸಂಕಷ್ಟವನ್ನು ತಂದೊಡ್ಡುತ್ತದೆ. ಇವರ ನಿಷ್ಠುರ (Rigid) ಗುಣದಿಂದ ಇತರರಿಗೆ ನೋವುಂಟಾಗುವ ಸಾಧ್ಯತೆ ಇರುತ್ತದೆ. ಅಪ್ರಿಯವಾದ ಸತ್ಯವನ್ನು ಹೇಳದಿರುವುದೇ ಒಳ್ಳೆಯದು ಎಂದು ಶಾಸ್ತ್ರ ಸಹ ಹೇಳುತ್ತದೆ. 

ಕೆಲಸದಲ್ಲಿ ಶ್ರದ್ಧೆ (Diligence at work)
ಯಾವುದೇ ಕೆಲಸವಾಗಲಿ ಆಸಕ್ತಿಯಿಂದ ಮಾಡುವ ಇವರು, ತಮ್ಮ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು (Importance) ನೀಡುತ್ತಾರೆ. ಕೆಲಸದ ವಿಷಯದಲ್ಲಿ ಸೋಮಾರಿತನ ತೋರದ ಇವರು, ಕೆಲಸ ಮುಗಿಯುವವರೆಗೆ ಸಮಾಧಾನ ಇರದು. ಹಾಗಾಗಿ ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಮನ್ನಣೆ ಪಡೆಯುತ್ತಾರೆ. 

ಇದನ್ನು ಓದಿ: Name and Personality: S ಅಕ್ಷರದಿಂದ ಸ್ಟಾರ್ಟ್ ಆಗೋ ಹುಡ್ಗೀರು ಹೇಗೆ ಗೊತ್ತಾ..?

ಹೆಚ್ಚಿನ ಆತ್ಮವಿಶ್ವಾಸ (Confidence)
ಇವರು ಆತ್ಮವಿಶ್ವಾಸಿಗಳಾಗಿದ್ದು, ಎಲ್ಲರೂ ಇವರನ್ನು ಇಷ್ಟಪಡುತ್ತಾರೆ. ಹೀಗಾಗಿ ಇವರು ಬಹುಬೇಗ ಇತರರ ಮನಗೆಲ್ಲುತ್ತಾರೆ. ಅಲ್ಲದೆ, ಇವರಿದ್ದ ಕಡೆ ಖುಷಿ ಇರುತ್ತದೆ ಎಂದು ಸಹ ಹೇಳಲಾಗುತ್ತದೆ. ಶಿಕ್ಷಣ (Education) ಕ್ಷೇತ್ರದಲ್ಲಿ ಉತ್ತಮವಾಗಿ ಸಾಧನೆ ಮಾಡುವ ಇವರು, ಸಮಸ್ಯೆಗಳು ಎದುರಾದರೆ ಯೋಚಿಸಿ ಪರಿಹಾರ (Solution) ಕಂಡುಕೊಳ್ಳುತ್ತಾರೆ.

Follow Us:
Download App:
  • android
  • ios