Palmistry Lines: ಸಂತಾನ ಭವಿಷ್ಯ ತಿಳಿಸುವ ರೇಖೆ ಯಾವುದು ನಿಮ್ಮ ಕೈಯಲ್ಲಿ!

ವೈವಾಹಿಕ ಜೀವನದಲ್ಲಿ ಸಂತಾನ ಪ್ರಮುಖ ಘಟ್ಟ. ಮಕ್ಕಳು ಆಗಲಿಲ್ಲವೆಂದು ಕೊರಗುವವರು ಹಲವರು ನಮ್ಮ ಮುಂದೆ ಕಾಣ ಸಿಗುತ್ತಾರೆ. ವಿವಾಹದ ನಂತರ ಸಂತಾನ ಪ್ರಾಪ್ತಿ ಬಗ್ಗೆ ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಇದಕ್ಕೆ ಹಸ್ತಸಾಮುದ್ರಿಕಾ ಶಾಸ್ತ್ರ ಉತ್ತರವನ್ನು ನೀಡುತ್ತದೆ. ಹೇಗೆ ಇವುಗಳನ್ನು ತಿಳಿಯಬಹುದು ಎಂಬುದನ್ನು ನೋಡೋಣ ಬನ್ನಿ... 

Palmistry lines and know about progeny know future

ಮನುಷ್ಯ ಎಂದ ಮೇಲೆ ವೈವಾಹಿಕ ಜೀವನ (Married Life), ಮಗು (Child), ಮಕ್ಕಳು (Children), ಮೊಮ್ಮಕ್ಕಳು ಹೀಗೆ.. ಸಂತೋಷದ ಕ್ಷಣಗಳು ಸಾಮಾನ್ಯ. ಯಾರೇ ಆಗಲಿ ಮದುವೆಯಾಗಿ ಒಂದು ವರ್ಷ (Year) ಮುಗಿಯುತ್ತಾ ಬರುತ್ತಿದ್ದಂತೆ ಮತ್ತೆ.. ಏನ್ ವಿಶೇಷ..? (Special) ಎಂದು ಕೇಳಲು ಶುರು ಮಾಡುತ್ತಾರೆ. ಇದು ಕೆಲವರಿಗೆ ನಾಚಿಕೆ (Shy) ತಂದರೆ, ಮತ್ತೆ ಕೆಲವರಿಗೆ ಸಿಟ್ಟು (Angry) ತರಿಸುವ ವಿಚಾರವೂ ಹೌದು. ಕಾರಣ, ಫ್ಯಾಮಿಲಿ (Family) ಪ್ಲಾನಿಂಗ್..! (Planning). ಆದರೆ, ಕೆಲವರು ಇದ್ಯಾವ ಪ್ಲಾನ್ ಮಾಡಿದಿದ್ದರೂ ಮಕ್ಕಳು ಆಗುವುದಿಲ್ಲ. ಅದಕ್ಕಾಗಿ ಅವರು ತೋರಿಸದ ವೈದ್ಯರಿಲ್ಲ, ಕಟ್ಟಿಕೊಳ್ಳದ ಹರಕೆಗಳೂ ಇಲ್ಲದಿರುವುದಿಲ್ಲ. ಆದರೆ, ಸಂತಾನ ಯೋಗ ಹೇಗಿದೆ..? ಇದೆಯೋ..? ಎಂಬ ಬಗ್ಗೆ ಹಸ್ತಸಾಮುದ್ರಿಕ ಶಾಸ್ತ್ರದ ಅನುಸಾರ ಕಂಡುಕೊಳ್ಳಬಹುದು. ಹಸ್ತ ಸಾಮುದ್ರಿಕಾ (Palmistry) ಶಾಸ್ತ್ರದ ಅನುಸಾರ ರೇಖೆಗಳ (Lines) ಆಧಾರದ ಮೇಲೆ ಭವಿಷ್ಯದ (Future) ವಿಷಯಗಳನ್ನು ತಿಳಿಯಬಹುದಾಗಿದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಹಸ್ತಗಳು, ಪಾದಗಳು (Foot) ಮತ್ತು ಹಣೆಯ (Forehead) ಮೇಲಿರುವ ರೇಖೆಗಳನ್ನು ಗಮನಿಸಿ, ಅವುಗಳ ಆಧಾರದ ಮೇಲೆ ಆರ್ಥಿಕ ಸ್ಥಿತಿ (Economic), ವೃತ್ತಿ ಕ್ಷೇತ್ರ (Career), ವಿವಾಹ (Marriage) ವಿಷಯಗಳು ಅಷ್ಟೇ ಅಲ್ಲದೆ ಸಂತಾನ (Progeny) ಸಂಬಂಧಿ ವಿಷಯಗಳನ್ನು ಸಹ ತಿಳಿಯಬಹುದಾಗಿದೆ.

ಜೀವನದಲ್ಲಿ ಅನೇಕ ಪ್ರಮುಖ ಘಟ್ಟಗಳಿವೆ ಅವುಗಳಲ್ಲಿ ವಿದ್ಯಾಭ್ಯಾಸ (Education), ವಿವಾಹಗಳು ಮುಖ್ಯವಾದರೆ, ಸಂತಾನವು ಸಹ ಅತ್ಯಂತ ಮುಖ್ಯ ವಿಷಯವಾಗಿದೆ. ವಿವಾಹದ ನಂತರ ಸಂತಾನದ ಬಗೆಗೆ ತಿಳಿಯಲು ಎಲ್ಲರಿಗೂ ಕುತೂಹಲವಿರುತ್ತದೆ (Curiosity). ಹಸ್ತಸಾಮುದ್ರಿಕಾ ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಭಾಗವಾಗಿದೆ. ಇಲ್ಲಿ ಹಸ್ತದಲ್ಲಿರುವ ರೇಖೆಗಳನ್ನು ಗಮನಿಸಿ ವ್ಯಕ್ತಿಯ ಭವಿಷ್ಯ ಮತ್ತು ವರ್ತಮಾನದ (Present) ವಿಚಾರಗಳ ಬಗ್ಗೆ ತಿಳಿಸಲಾಗುತ್ತದೆ. ವಿದ್ಯಾಭ್ಯಾಸ, ಆರ್ಥಿಕ ವಿಚಾರಗಳ ಬಗ್ಗೆ ತಿಳಿಯುವುದರ ಜೊತೆಗೆ ಸಂತಾನದ ಬಗ್ಗೆ ಸಹ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ತಿಳಿಯಬಹುದಾಗಿದೆ.

ಸಂತಾನ ರೇಖೆ (Progeny Line)
ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಕಿರುಬೆರಳಿನ ಕೆಳಗೆ ಬುಧ ಪರ್ವತವಿರುತ್ತದೆ. ಬುಧ ಪರ್ವತದ ಬಳಿ ಲಂಬವಾಗಿರುವ ರೇಖೆಗಳು  ಮತ್ತು ಶುಕ್ರ ಪರ್ವತದ ಬಳಿ  ಇರುವ ಚಿಕ್ಕ ಚಿಕ್ಕ (Small) ರೇಖೆಗಳನ್ನು ಸಂತಾನ ರೇಖೆ ಎಂದು ಕರೆಯುತ್ತಾರೆ. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಈ ರೇಖೆಗಳಲ್ಲಿ ಸ್ಪಷ್ಟವಾಗಿರುವ ರೇಖೆಗಳು ಗಂಡು (Boy) ಮಗುವಿನ (Baby) ಸಂತಾನವನ್ನು ಸೂಚಿಸುತ್ತದೆ. ಅದೇ ರೀತಿ ಯಾವ ರೇಖೆಗಳು ಸ್ಪಷ್ಟವಾಗಿಲ್ಲದಿದ್ದರೆ ಅವು ಹೆಣ್ಣು (Girl) ಮಗುವಿನ ಸಂತಾನವನ್ನು ಸೂಚಿಸುತ್ತದೆ.

ಸಂಸ್ಕಾರವಂತ ಮಕ್ಕಳು 
ಹಸ್ತದಲ್ಲಿ ಬುಧ ಪರ್ವತ ಉಬ್ಬಾಗಿದ್ದು, ರೇಖೆಗಳು ಸ್ಪಷ್ಟವಾಗಿದ್ದರೆ  ಅಂತಹ ವ್ಯಕ್ತಿಗಳ ಸಂತಾನ ಗುಣವಂತರಾಗಿದ್ದು (Virtuous), ಉತ್ತಮ ಸಂಸ್ಕಾರಿಗಳಾಗಿರುತ್ತಾರೆಂದು ಹೇಳಲಾಗುತ್ತದೆ.
ಹಸ್ತ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ವ್ಯಕ್ತಿಯ ಹಸ್ತವು ಹೆಚ್ಚು ಉಬ್ಬಾಗಿದ್ದು, ಸ್ಪಷ್ಟವಾದ ರೇಖೆಗಳನ್ನು ಹೊಂದಿದ್ದರೆ  ಅಂತಹವರು ಸಂತಾನದಿಂದ ಹೆಚ್ಚು ಸುಖ (Happiness) ಮತ್ತು ಸ್ನೇಹವನ್ನು (Friendship) ಪಡೆಯುತ್ತಾರೆ.

ಇದನ್ನು ಓದಿ: Zodiac Sign and Character: ಈ 4 ರಾಶಿಚಕ್ರದವರು ಹಣ ಉಳಿಸುವಲ್ಲಿ ನಿಸ್ಸೀಮರು..!

ಕೆಲವು ಪುರುಷರ (Male) ಹಸ್ತದಲ್ಲಿ (Palm) ಸಂತಾನ ರೇಖೆ ಇರುವುದಿಲ್ಲ ಅಥವಾ ಅಸ್ಪಷ್ಟವಾಗಿರುತ್ತದೆ. ಇಂಥ ಸಂದರ್ಭದಲ್ಲಿ ಆ ವ್ಯಕ್ತಿಗಳಿಗೆ ಸಂತಾನ ಪ್ರಾಪ್ತಿ ಯೋಗವಿಲ್ಲವೆಂದು ತಿಳಿಯುತ್ತಾರೆ. ಆದರೆ ಅಂತಹ ವ್ಯಕ್ತಿಗಳ ಪತ್ನಿಯ (Wife) ಹಸ್ತದಲ್ಲಿರುವ ಸಂತಾನ ರೇಖೆಯು ಸಂತಾನದ ವಿಚಾರವನ್ನು ತಿಳಿಸುತ್ತದೆ. ಇಂಥ ಸಂದರ್ಭದಲ್ಲಿ ಸಂತಾನವು ತಾಯಿಯನ್ನು (Mother) ಹೆಚ್ಚು ಇಷ್ಟಪಡುವ ಸಂಭವವಿರುತ್ತದೆ.

ಏಕ ಸಂತಾನ ಯೋಗ : (One Progeny)
ಹೆಬ್ಬೆರಳಿನ (Thumb) ಕೆಳಗಿರುವ ಶುಕ್ರ ಪರ್ವತವು ಹೆಚ್ಚು ಉಬ್ಬಾಗಿದ್ದರೆ ಅಂತಹ ವ್ಯಕ್ತಿಗಳಿಗೆ ಒಂದೇ ಸಂತಾನದ ಯೋಗವಿರುತ್ತದೆ ಎಂದು ಹೇಳಲಾಗುತ್ತದೆ. 

Latest Videos
Follow Us:
Download App:
  • android
  • ios