Asianet Suvarna News Asianet Suvarna News

Vastu for Health: ಆರೋಗ್ಯಕ್ಕಾಗಿ ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿ

ಆರೋಗ್ಯ ಭಾಗ್ಯ ಹೆಚ್ಚಿಸಿಕೊಳ್ಳಲು ವಾಸ್ತುವಿನಲ್ಲಿ ಕೆಲ ಸರಳ ಸಲಹೆಗಳಿವೆ. ಮನೆಯ ಸದಸ್ಯರ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸದಾ ಚೈತನ್ಯದಿಂದ ಕೂಡಿರಲು ವಾಸ್ತು ಹೇಗಿರಬೇಕು ಗೊತ್ತಾ?

Vastu Tips to Promote Health skr
Author
Bangalore, First Published Nov 30, 2021, 11:43 AM IST

ಈ ಕೊರೋನಾ(corona) ಎಂಬ ಕಾಯಿಲೆ ಜಗತ್ತನ್ನೇ ನಡುಗಿಸಿದ ಮೇಲಂತೂ  'ಆರೋಗ್ಯವೇ ಭಾಗ್ಯ'(health is wealth) ಎಂಬ ಮಾತು ಎಷ್ಟು ಸತ್ಯ ಎಂಬುದು ಪ್ರತಿಯೊಬ್ಬರಿಗೂ ಅರ್ಥವಾಗಿದೆ. ಇಡೀ ದಿನ ಕಷ್ಟ ಪಟ್ಟು ಕೆಲಸ ಮಾಡಿದ ಮೇಲೆ ಮನೆಯಲ್ಲಿ ತಲೆ ಇಟ್ಟು ಮಲಗುವಾಗ ನೆಮ್ಮದಿಯೇ ಬೇಕಾಗಿರುವುದು. ಆ ನೆಮ್ಮದಿಗೆ ಆರೋಗ್ಯ(health) ಬಹು ಮುಖ್ಯ. ಸಾಮಾನ್ಯವಾಗಿ ಮನೆ ಕಟ್ಟುವಾಗ ವಾಸ್ತು ಶಾಸ್ತ್ರದ ಸಲಹೆ ಪಡೆದಿದ್ದರೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ತುಂಬಿ ಆರೋಗ್ಯ, ನೆಮ್ಮದಿ ತುಂಬಿರಲು ಬೇಕಾದಂತೆ ಗೈಡ್ ಮಾಡಿರುತ್ತಾರೆ. ವಾಸ್ತು(Vastu)ವಿನ ಈ ಸಲಹೆಗಳು ಮನೆಯ ಸದಸ್ಯರನ್ನು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯದಿಂದಿರಲು ಸಹಕರಿಸುತ್ತವೆ. 

  • ಈಶಾನ್ಯ(Northeast) ದಿಕ್ಕಿನಲ್ಲಿ ಪ್ರತಿದಿನ ದೀಪ ಹಚ್ಚುವುದರಿಂದ ಆರೋಗ್ಯ ಹೆಚ್ಚುತ್ತದೆ. 
  • ನಲ್ಲಿಗಳು ಸೋರುತ್ತಿದ್ದರೆ ಅದು ನಕಾರಾತ್ಮಕತೆ ತರುತ್ತದೆ. ಆರೋಗ್ಯದಲ್ಲಿ ಇಳಿಕೆಯಾಗುತ್ತಿರುವ ಸೂಚನೆ ಅದು. ಹಾಗಾಗಿ, ಮನೆಯ ಯಾವುದೇ ನಲ್ಲಿಗಳು ಸೋರದಂತೆ ನೋಡಿಕೊಳ್ಳಿ. 
  • ಮೆಟ್ಟಿಲಿನ ಕೆಳಗಿರುವ ಸ್ಥಳಾವಕಾಶದಲ್ಲಿ ಶೌಚಾಲಯ ನಿರ್ಮಿಸುವುದು ಅಥವಾ ಸ್ಟೋರೇಜ್ ಆಗಿಯೋ, ಕಿಚನ್ ಆಗಿಯೋ ಬಳಸುವುದನ್ನು ಮಾಡಬಾರದು. ಇದರಿಂದ ನರಸಂಬಂಧಿ ಕಾಯಿಲೆಗಳು ಹಾಗೂ ಹೃದಯ ಸಮಸ್ಯೆಗಳು ಎದುರಾಗಬಹುದು. 
  • ಓದುವಾಗ ಅಥವಾ ಕೆಲಸ ಮಾಡುವಾಗ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ. ಇದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.
  • ಮನೆಯ ಎದುರು ತುಳಸಿ ಗಿಡ ನೆಡುವುದರಿಂದ ಮನೆಯೊಳಗೆ ಬರುವ ಗಾಳಿ ಸ್ವಚ್ಛವಾಗುತ್ತದೆ. ರಬ್ಬರ್ ಪ್ಲ್ಯಾಂಟ್, ಕ್ಯಾಕ್ಟಸ್, ಬೋನ್ಸಾಯ್ ತರದ ಗಿಡಗಳು ಮನೆಗೆ ಒತ್ತಡ ಹಾಗೂ ಅನಾರೋಗ್ಯವನ್ನು ತರುತ್ತವೆ. ಹಾಗಾಗಿ, ಅವುಗಳನ್ನು ಮನೆಯಲ್ಲಿಡಬೇಡಿ.
  • ಮನೆಯ ಈಶಾನ್ಯ ಭಾಗದಲ್ಲಿ ಟಾಯ್ಲೆಟ್ ಅಥವಾ ಮೆಟ್ಟಿಲುಗಳಿರಬಾರದು. ಅವುಗಳು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ತರುವ ಜೊತೆಗೆ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುತ್ತವೆ.

Nature and December Born: ಸ್ವಭಾವ ಹೇಗಿರುತ್ತೆ?

  • ಮಲಗುವ ಕೋಣೆ(bed room) ಹೀಗಿರಲಿ
  • ನೈಋತ್ಯ ದಿಕ್ಕಿನಲ್ಲಿ ಮಾಸ್ಟರ್ ಬೆಡ್‌ರೂಂ ಇರುವುದರಿಂದ ದೈಹಿಕ ಹಾಗೂ ಮಾನಸಿಕ ಸ್ಥಿರತೆ ತಂದುಕೊಡುತ್ತದೆ. ಈಶಾನ್ಯ ದಿಕ್ಕಿನಲ್ಲಿ ಮಾಸ್ಟರ್ ಬೆಡ್ರೂಂ ಇರಕೂಡದು. ಅದರಿಂದ ಆರೋಗ್ಯ ಸಮಸ್ಯೆಗಳು - ಜಾಸ್ತಿಯಾಗುತ್ತವೆ.  ಮಲಗುವಾಗ ಯಾವಾಗಲೂ ತಲೆಯನ್ನು ದಕ್ಷಿಣ ದಿಕ್ಕಿನಲ್ಲಿಯೇ ಇರಿಸಬೇಕು. ಇದರಿಂದ ಶಾಂತಿ ಹಾಗೂ ಆರೋಗ್ಯಕರ ಜೀವನ ಸಿಗುತ್ತದೆ. ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ನೋವು, ಒತ್ತಡ ಹೆಚ್ಚುತ್ತದೆ. 
  • ಗರ್ಭಿಣಿ ಮಹಿಳೆಯರು ಈಶಾನ್ಯ ದಿಕ್ಕಿಗೆ ತಲೆ ಇಟ್ಟು ಮಲಗಲೇಬಾರದು. ಅದರಿಂದ ಅಬಾರ್ಶನ್ ಆಗುವ ಸಾಧ್ಯತೆ ಹೆಚ್ಚು.
  • ಸ್ಟೋರೇಜ್ ಇರುವ ಮಂಚವು ಮೆದುಳು ಹಾಗೂ ಹೃದಯ ಸಂಬಂಧಿ ಸಮಸ್ಯೆಗಳನ್ನು ತರುತ್ತದೆ. ಕಬ್ಬಿಣದ  ಮಂಚ ಕೂಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. ಸರಳವಾದ ಮರದ ಮಂಚಗಳನ್ನೇ ಬಳಸಿ. 
  • ಕಣ್ಣಿಗೆ ರಾಚುವ ಲೈಟಿನ ಕೆಳಗೆ ಮಲಗುವುದನ್ನು ತಪ್ಪಿಸಿ. ಇದರಿಂದ ತಲೆನೋವು, ಮರೆವು, ಖಿನ್ನತೆ ಕಾಣಿಸಿಕೊಳ್ಳುತ್ತದೆ. 
  • ಹಾಸಿಗೆ ಯಾವತ್ತೂ ಶೌಚಾಲಯ ಗೋಡೆಗೆ ತಾಗುವಂತೆ ಇಡಬಾರದು. ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. 
  • ಫೋನ್ ಸೇರಿದಂತೆ ಎಲ್ಲ ಗ್ಯಾಡ್ಜೆಟ್‌ಗಳನ್ನು ಸಾಧ್ಯವಾದಷ್ಟು ಹಾಸಿಗೆಯಿಂದ ದೂರವಿರಿಸಿ. 

    Luck is on the way: ಸಧ್ಯದಲ್ಲೇ ಶ್ರೀಮಂತರಾಗೋ ಅದೃಷ್ಟ ಈ ರಾಶಿಗಳವರದು

    ಅಡುಗೆ ಕೋಣೆ(kitchen)
  • ನೈಋತ್ಯ ದಿಕ್ಕು ಅಡುಗೆ ಕೋಣೆಗೆ ಸರಿಯಾದುದು. 
  • ಪೂರ್ವ ದಿಕ್ಕಿನಲ್ಲಿ ಅಡುಗೆ ಮಾಡುವುದು ಹಾಗೂ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆರೋಗ್ಯ ಚೆನ್ನಾಗಿರುತ್ತದೆ. 
  • ಈಶಾನ್ಯ ದಿಕ್ಕಿನಲ್ಲಿ ಅಡುಗೆ ಮನೆ ಕಟ್ಟಿಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಅಪಘಾತ(accident)ದ ಸಂಭವ ಹೆಚ್ಚುತ್ತದೆ.
  • ಅಡುಗೆ ಕೋಣೆ ಹಾಗೂ ಶೌಚಾಲಯ(toilet) ಯಾವತ್ತೂ ಒಂದೇ ಗೋಡೆ ಹಂಚಿಕೊಳ್ಳಬಾರದು. 
Follow Us:
Download App:
  • android
  • ios