Vastu Tips: ನಿಮ್ಮನ್ನ ಬೀದಿಗೆ ತಳ್ಬಹುದು ಮನಿ ಪ್ಲಾಂಟ್

ಮನೆಯಲ್ಲಿ ಮನಿ ಪ್ಲಾಂಟ್ ಇದ್ರೆ ಶ್ರೀಮಂತರಾಗ್ತೀವಿ ಎಂಬ ಮಾತನ್ನು ಅಲ್ಲಿ ಇಲ್ಲಿ ಕೇಳಿರ್ತೇವೆ. ಹಾಗಾಗಿ ನೀವೂ ಮನೆಗೆ ಮನಿ ಪ್ಲಾಂಟ್ ತರ್ತೀರಿ. ಆದ್ರೆ ಅದನ್ನು ಎಲ್ಲಿಡಬೇಕು? ಹೇಗಿಡಬೇಕು ಎಂಬುದು ಗೊತ್ತಿರೋದಿಲ್ಲ. ಇದ್ರಿಂದ ಸಂಪತ್ತು ಮನೆಗೆ ಬರೋ ಬದಲು ಹೋಗುತ್ತೆ.
 

Vastu Tips For Money Plant that adversely affect if not maintained properly

ಶ್ರೀಮಂತ (Rich) ರಾಗಲು ಪ್ರತಿಯೊಬ್ಬರು ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ. ಐಷಾರಾಮಿ (Luxury) ಬದುಕನ್ನು ಎಲ್ಲರೂ ಬಯಸ್ತಾರೆ. ಇದಕ್ಕಾಗಿ ಏನು ಮಾಡಲೂ ಸಿದ್ಧವಿರ್ತಾರೆ. ಅನೇಕ ಬಾರಿ ಈ ಹಣ (Money) ದ ಹುಚ್ಚಿಗೆ ಬಿದ್ದು ಜನರು ತಪ್ಪು ದಾರಿ ತುಳಿಯುವುದಿದೆ. ಮತ್ತೆ ಕೆಲವರು ಹಣ ಸಿಗುತ್ತೆ ಎನ್ನುವ ಕಾರಣಕ್ಕೆ ಇಲ್ಲಸಲ್ಲದ್ದನ್ನು ನಂಬ್ತಾರೆ. ಜೊತೆಗೆ ಕೆಲ ನಿಯಮಗಳನ್ನು ಪಾಲಿಸುವ ವೇಳೆ ತಪ್ಪುಗಳನ್ನು ಮಾಡಿ ಹಣ ಗಳಿಸುವ ಬದಲು ಕಳೆದುಕೊಳ್ತಾರೆ. ವಾಸ್ತು (Vastu) ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಗೆ ವಿಶೇಷ ಸ್ಥಾನವಿದೆ. ಬಹುತೇಕ ಎಲ್ಲರ ಮನೆಯಲ್ಲೂ ಈ ಮನಿ ಪ್ಲಾಂಟ್ ನಾವು ನೋಡ್ಬಹುದು. ಮನಿ ಪ್ಲಾಂಟ್, ಸಂಪತ್ತು ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಮನಿ ಪ್ಲಾಂಟ್ ಮನೆಯಲ್ಲಿ ಇಟ್ಟರೆ ಹಣದ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್ ಅನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸಂಪತ್ತು ಲಭಿಸುತ್ತೆ ಎನ್ನುವ ಕಾರಣಕ್ಕೆ ಮನೆಗೆ ಮನಿ ಪ್ಲಾಂಟ್ ತಂದು ಹೇಗೆಂದ್ರೆ ಹಾಗೆ ಇಟ್ಟರೆ ಆಗೋದಿಲ್ಲ. ಮನೆ ಪ್ಲಾಂಟ್ ಮನೆಯಲ್ಲಿಡಲು ಕೆಲವು ನಿಯಮಗಳಿವೆ. ಆ ನಿಯಮಗಳ ವಿರುದ್ಧ ನೀವು ನಡೆದ್ರೆ ಶ್ರೀಮಂತರಾಗುವ ಬದಲು ಬಡವರಾಗ್ತೀರಿ. ಇಂದು ನಾವು ಮನಿ ಪ್ಲಾಂಟ್ ನಿಯಮಗಳ ಬಗ್ಗೆ ಹೇಳ್ತೇವೆ. 

ಮನೆಯಲ್ಲಿ ಮನಿ ಪ್ಲಾಂಟ್ ಇಡುವ ಮೊದಲು ಇದನ್ನು ತಿಳಿದಿರಿ :  
ದಕ್ಷಿಣ ದಿಕ್ಕು (South Direction) :
ಮನೆಯೊಳಗೆ ಮನಿ ಪ್ಲಾಂಟ್ ಇಡುವುದು ಉತ್ತಮ ಎಂದು ಪರಿಗಣಿಸಲಾಗಿದೆ. ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಇದ್ರಿಂದ ಅಭಿವೃದ್ಧಿ ಬದಲು ನಷ್ಟ ಹೆಚ್ಚಾಗುತ್ತದೆ.  

ಗಾಜಿನ ಬಳೆ ಧರಿಸಿ ಜಾತಕದಲ್ಲಿ ಬುಧ ಗ್ರಹಕ್ಕೆ ಬಲ ತುಂಬಿ!

ಮನಿ ಪ್ಲಾಂಟ್ ಒಣಗಿಸಬೇಡಿ : ಸೂರ್ಯನ ಬೆಳಕು ಬೇಕೆನ್ನುವ ಕಾರಣಕ್ಕೆ ನಾವು ಮನಿ ಪ್ಲಾಂಟನ್ನು ಹೊರಗೆ ಇಡ್ತೇವೆ. ಅನೇಕ ಬಾರಿ ಸೂರ್ಯನ ಬೆಳಕು ನೇರವಾಗಿ ಮನಿ ಪ್ಲಾಂಟ್ ಮೇಲೆ ಬೀಳುತ್ತದೆ. ಹೀಗೆ ಬೀಳುವುದು ಒಳ್ಳೆಯದಲ್ಲ. ಸೂರ್ಯನ ಬೆಳಕು ನೇರವಾಗಿ ಬಿದ್ರೆ ಮನಿ ಪ್ಲಾಂಟ್ ಹಾಳಾಗುತ್ತದೆ. ಅದು ಒಣಗುತ್ತದೆ. ಇದ್ರಿಂದ ಮನೆಯಲ್ಲಿ ಹಣದ ಕೊರತೆ ಎದುರಾಗುತ್ತದೆ. ಮನಿ ಪ್ಲಾಂಟ್ ಒಣಗದಂತೆ ನೋಡಿಕೊಳ್ಳಿ. ಒಣಗಿನ ಎಲೆಯನ್ನು ಕೂಡ ಬಳ್ಳಿಯಲ್ಲಿ ಇಡಬೇಡಿ.

ಮನಿ ಪ್ಲಾಂಟ್ ಖರೀದಿಸಿ : ಸ್ನೇಹಿತರು ಅಥವಾ ಸಂಬಂಧಿಕರ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಅದನ್ನು ಕತ್ತರಿಸಿ ಮನೆಗೆ ತಂದು ನೆಡ್ತೇವೆ. ಇಲ್ಲವೆ ಅವ ಮನೆಯಲ್ಲಿ ಬೆಳೆದ ಗಿಡವನ್ನು ನಾವು ತರ್ತೇವೆ. ಇವೆರಡೂ ತಪ್ಪು. ಯಾವಾಗ್ಲೂ  ಮನಿ ಪ್ಲಾಂಟನ್ನು ಬೇರೆಯವರ ಮನೆಯಿಂದ ತರಬಾರದು. ಅದನ್ನು ಹಣ ನೀಡಿ ಖರೀದಿ ಮಾಡ್ಬೇಕು.  ಬೇರೆಯವರ ಮನೆಯಿಂದ ತರಬೇಕು ಇಲ್ಲವೆ ಕಳ್ಳತನ ಮಾಡ್ಬೇಕು ಎಂಬ ನಂಬಿಕೆ ಜನರಿಗಿದೆ. ಆದ್ರೆ ಇದು ತಪ್ಪು. 

Vastu Tips: ತಾಯಿ ಲಕ್ಷ್ಮಿ ಬರುವ ಮುನ್ನ ನೀಡೋ ಸೂಚನೆಗಳಿವು!

ಬಾಟಲಿಯಲ್ಲಿ ಮನಿ ಪ್ಲಾಂಟ್ (Money Plant) : ಮನಿ ಪ್ಲಾಂಟನ್ನು ನೀವು ಪ್ಲಾಸ್ಟಿಕ್ ಬಾಟಲಿಯಲ್ಲಿ ಹಾಕ್ಬೇಡಿ. ಇದ್ರಿಂದ ಅಭಿವೃದ್ಧಿ ಕುಂಠಿತವಾಗುವು ಸಾಧ್ಯತೆಯಿರುತ್ತದೆ.  ಮನಿ ಪ್ಲಾಂಟನ್ನು ಹಸಿರು ಗಾಜಿನ ಬಾಟಲಿಯಲ್ಲಿ ಹಾಕಿದರೆ ಉತ್ತಮ. ಇದ್ರಿಂದ ಮಂಗಳಕರ ಫಲವನ್ನು ನೀವು ನೋಡ್ಬಹುದು. ಮನೆಯಲ್ಲಿರುವ ಹಣದ ಸಮಸ್ಯೆ ಇದ್ರಿಂದ ದೂರವಾಗುತ್ತದೆ.  

ಬಳ್ಳಿಗೆ ಮೇಲೆ ಬೆಳೆಯಲು ಬಿಡಿ : ಮನಿ ಪ್ಲಾಂಟ್ ಬಳ್ಳಿ ದೊಡ್ಡದಾಗ್ತಿದ್ದಂತೆ ಅದನ್ನು ಹಬ್ಬಲು ಬಿಡ್ತೇವೆ. ಅನೇಕ ಬಾರಿ ಬಳ್ಳಿ ಮೇಲೆ ಹೋಗಿ ಮತ್ತೆ ಕೆಳ ಮುಖವಾಗಿ ಬರ್ತಿರುತ್ತದೆ. ಅದನ್ನು ಕೆಳಮುಖವಾಗಿ ಇಡಬಾರದು. ಯಾವಾಗ್ಲೂ ಬಳ್ಳಿ ಮೇಲ್ಮುಖವಾಗಿ ಸಾಗುವಂತೆ ನೋಡಿಕೊಳ್ಳಬೇಕು. ಇಲ್ಲವೆಂದ್ರೆ ಹಣದ ನಷ್ಟ ಉಂಟಾಗುತ್ತದೆ ಮತ್ತು ಅಡೆತಡೆ ನಿಮ್ಮನ್ನು ಕಾಡುತ್ತದೆ. 

 

Vastu Tips For Money Plant that adversely affect if not maintained properly

 

Latest Videos
Follow Us:
Download App:
  • android
  • ios