ರತ್ನ ಪ್ರಪಂಚ ಬಹಳ ವಿಸ್ತಾರವಾಗಿದೆ. ಅವು ಎಲ್ಲ ಗ್ರಹಗಳವರೆಗೂ ತಮ್ಮ ಪ್ರಭಾವವನ್ನು ಹರಡುತ್ತವೆ. ಕೆಲವು ರತ್ನಗಳನ್ನು ಆಭರಣದಂತೆ ಯಾವುದೇ ತಜ್ಞರನ್ನು ಸಂಪರ್ಕಿಸದೇ ಧರಿಸಿದರೆ, ಅವು ನಿಮಗಾಗದೆ ಹೋದರೆ ಬಹಳ ಕೆಡುಕನ್ನು ಅನುಭವಿಸಬೇಕಾಗುತ್ತದೆ. ಅಂಥ ಅತ್ಯಂತ ಅಪಾಯಕಾರಿ ರತ್ನಗಳು ಯಾವೆಲ್ಲ ನೋಡೋಣ.
ವಿಶ್ವದಲ್ಲಿ ಸುತ್ತುತ್ತಿರುವ ಎಲ್ಲಾ ಗ್ರಹಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಇದರ ಆಧಾರದ ಮೇಲೆ, ಜ್ಯೋತಿಷ್ಯವು ಯಾವುದೇ ಸಂಭವನೀಯ ಅಪಾಯಗಳ ವಿರುದ್ಧ ನಮ್ಮನ್ನು ಎಚ್ಚರಿಸುತ್ತದೆ ಮತ್ತು ಭವಿಷ್ಯದ ಬಗ್ಗೆ ನಮಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಸಾಮಾನ್ಯವಾಗಿ ವ್ಯಕ್ತಿಯ ಜಾತಕ(horoscope)ದಲ್ಲಿ ಕೆಲ ಗ್ರಹಗಳು ದುರ್ಬಲವಿದ್ದಾಗ ಆ ಗ್ರಹಕ್ಕೆ ಸಂಬಂಧಿಸಿದ ರತ್ನ(gems)ಗಳನ್ನು ಧರಿಸಲು ಹೇಳಲಾಗುತ್ತದೆ. ಆದರೆ, ಕೆಲವೊಮ್ಮೆ ಎಡವಟ್ಟಾದರೆ, ತಜ್ಞರನ್ನು ಸಂಪರ್ಕಿಸದೆ, ನಾವು ನಮ್ಮ ಸ್ವಂತ ಇಚ್ಛೆಯೊಂದಿಗೆ ಕೆಲ ರತ್ನಗಳನ್ನು ಬೇಕಾಬಿಟ್ಟಿ ಧರಿಸಿದರೆ ಅವು ನಮ್ಮ ಸಮಸ್ಯೆಗಳನ್ನು ನೀಗಿಸುವ ಬದಲು, ಭಿಕಾರಿಯಾಗಿಸಿ ಬೀದಿಗೆ ಬಿಡಬಲ್ಲವು. ಆರೋಗ್ಯ ಹದಗೆಡಿಸಿ ಆಟವಾಡಿಸಬಲ್ಲವು.
ರತ್ನ ಪ್ರಪಂಚದಲ್ಲಿ ಹಲವಾರು ರೀತಿಯ ರತ್ನಗಳಿವೆ. ಎಲ್ಲವೂ ಒಂದಿಲ್ಲೊಂದು ಗ್ರಹಕ್ಕೆ ಸಂಬಂಧಿಸಿವೆ. ಇವುಗಳಲ್ಲಿ ಅತ್ಯಂತ ಅಪಾಯಕಾರಿಯಾದ ರತ್ನಗಳು(dangerous gems) ಯಾವುವು ಗೊತ್ತಾ? ಈ ರತ್ನಗಳು ಆಗಿಬಂದರೆ ಶನಿ, ಗುರು ಮುಂತಾದ ಗ್ರಹಗಳ ಹಾನಿಕಾರಕ ಪರಿಣಾಮಗಳನ್ನು ನಿಲ್ಲಿಸುವಷ್ಟು ಶಕ್ತಿಯುತವಾಗಿವೆ. ಅಂತೆಯೇ ಆಗುವುದಿಲ್ಲವೆಂದರೆ ಜೀವನ ಬರ್ಬಾದ್‌ಗೊಳಿಸುತ್ತವೆ.
ಜ್ಯೋತಿಷ್ಯದಲ್ಲಿ ಅತ್ಯಂತ ಹಾನಿಕಾರಕ ರತ್ನಗಳೆಂದು ಪರಿಗಣಿಸಲಾದ ಅಂಥ ಎರಡು ರತ್ನಗಳ ಬಗ್ಗೆ ಹೇಳುತ್ತೇವೆ. ಈ ಎರಡು ರತ್ನಗಳು ಒಂದೇ ಸಮಯದಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಅಪಾಯಕಾರಿ. ಅವೆಂದರೆ ಮೊದಲನೆಯದು ನೀಲಮಣಿ(Sapphire) ಮತ್ತು ಎರಡನೆಯದು ವಜ್ರ(Diamond).
ಕನಸಿನ ಉದ್ಯೋಗ ಆಕರ್ಷಿಸಲು Feng Shui tips
ನೀಲಮಣಿಯ ಗುಣಗಳು
ನೀಲಮಣಿ ಶನಿ(Lord Shani)ಯ ಪ್ರಮುಖ ರತ್ನವಾಗಿದೆ. ಇದು ಮುಖ್ಯವಾಗಿ ಗಾಳಿಯ ಅಂಶವನ್ನು ನಿಯಂತ್ರಿಸುತ್ತದೆ. ಸಾಮಾನ್ಯವಾಗಿ, ನೀಲಮಣಿ ನೀಲಿ ಬಣ್ಣವನ್ನು ಹೊಂದಿರುತ್ತದೆ ಮತ್ತು ಈ ಕಾರಣದಿಂದಾಗಿ ಇದನ್ನು ನೀಲಂ ಎಂದು ಕರೆಯಲಾಗುತ್ತದೆ. ಇದಕ್ಕೆ ಶನಿಪ್ರಿಯ ಎಂಬ ಹೆಸರೂ ಇದೆ. ಶನಿಯಿಂದ ಲಾಭ ಪಡೆಯಲು ಮತ್ತು ಅದನ್ನು ಸಮತೋಲನಗೊಳಿಸಲು ಈ ರತ್ನ ಧರಿಸಲಾಗುತ್ತದೆ. ಅದನ್ನು ಧರಿಸುವ ಮೊದಲು ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ. ಸರಿಯಾದ ತನಿಖೆ ಮತ್ತು ಸಮಾಲೋಚನೆಯಿಲ್ಲದೆ ಅದನ್ನು ಧರಿಸುವುದು ತುಂಬಾ ಹಾನಿಕಾರಕವಾಗಿದೆ. ಅಲ್ಲದೆ, ತಪ್ಪು ಸಲಹೆಯ ಆಧಾರದ ಮೇಲೆ ನೀಲಮಣಿ ಧರಿಸುವುದು ನಿಮ್ಮ ಜೀವನವನ್ನು ಹಾಳು ಮಾಡುತ್ತದೆ. ಇದು ಸುಮಾರು 24 ಗಂಟೆಗಳಲ್ಲಿ ತನ್ನ ಪರಿಣಾಮವನ್ನು ತೋರಿಸಲು ಪ್ರಾರಂಭಿಸುತ್ತದೆ.
ನೀಲಮಣಿ ಧರಿಸುವ ನಿಯಮಗಳು
ಜಾತಕ ಮತ್ತು ಶನಿಯ ಅಂಶಗಳನ್ನು ತಿಳಿಯದೆ ನೀಲಮಣಿಯನ್ನು ಧರಿಸಬೇಡಿ. ನೀಲಮಣಿಯನ್ನು ಧರಿಸುವ ಮೊದಲು, ಅದನ್ನು ಸಂಪೂರ್ಣವಾಗಿ ಪರೀಕ್ಷಿಸಿ. ಕಬ್ಬಿಣ ಅಥವಾ ಬೆಳ್ಳಿಯೊಂದಿಗೆ ಧರಿಸಲು ಪ್ರಯತ್ನಿಸಿ. ಚಿನ್ನದಲ್ಲಿ ನೀಲಮಣಿಯನ್ನು ಧರಿಸುವುದು ಅನುಕೂಲಕರವಾಗಿರುವುದಿಲ್ಲ.
ಶನಿವಾರದಂದು ಮಧ್ಯರಾತ್ರಿಯಲ್ಲಿ ಈ ರತ್ನವನ್ನು ಧರಿಸುವುದು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗಿದೆ. ನಿಮ್ಮ ಎಡಗೈಯಲ್ಲಿ ನೀಲಮಣಿಯನ್ನು ಧರಿಸಿ ಮತ್ತು ನೀವು ಅದರೊಂದಿಗೆ ನೀರಿನ ಅಂಶದ ರತ್ನವನ್ನು ಧರಿಸಬೇಕು. ಚೌಕಾಕಾರದ ನೀಲಮಣಿಯನ್ನು ಧರಿಸುವುದು ಮಂಗಳಕರ. ನೀಲಮಣಿಯನ್ನು ಧರಿಸುವ ಮೊದಲು, ನೀವು ಅದನ್ನು ಶಿವ ಮತ್ತು ಅಧಿಪತಿ ಶನಿಗೆ ಅರ್ಪಿಸಬೇಕು.
ಮಿಥುನ ರಾಶಿಯಲ್ಲಿ ಸೂರ್ಯ ಸಂಕ್ರಮಣ: ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ?
ವಜ್ರ ಏಕೆ ವಿಶೇಷವಾಗಿದೆ?
ವಜ್ರವನ್ನು ಎಲ್ಲ ರತ್ನಗಳಲ್ಲಿ ಅತ್ಯಂತ ಅಮೂಲ್ಯ ಮತ್ತು ಕಠಿಣವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ, ಜನರು ಅದರ ಸೌಂದರ್ಯ ಮತ್ತು ಮೌಲ್ಯಕ್ಕಾಗಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಜ್ಯೋತಿಷ್ಯದಲ್ಲಿ, ಇದನ್ನು ಶುಕ್ರ ಗ್ರಹದ ರತ್ನ ಎಂದು ಪರಿಗಣಿಸಲಾಗುತ್ತದೆ. ಈ ರತ್ನವನ್ನು ಧರಿಸುವುದರಿಂದ ಸೌಂದರ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಆಕರ್ಷಿಸಬಹುದು. ಇದು ರಕ್ತದ ಮೇಲೆ ಪರಿಣಾಮ ಬೀರುತ್ತದೆ ಮತ್ತು ವೈವಾಹಿಕ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಶುಕ್ರ(Venus)ದಿಂದ ಪ್ರಯೋಜನಗಳನ್ನು ಪಡೆಯಲು ಮತ್ತು ಜೀವನದಲ್ಲಿ ಗ್ಲಾಮರ್ ಹೆಚ್ಚಿಸಲು, ಈ ಕಲ್ಲು ಪರಿಪೂರ್ಣವೆಂದು ಪರಿಗಣಿಸಲಾಗಿದೆ.
ವಜ್ರವನ್ನು ಧರಿಸುವಾಗಿನ ಮುನ್ನೆಚ್ಚರಿಕೆಗಳು
ಸಮಾಲೋಚನೆಯಿಲ್ಲದೆ ಮತ್ತು ಕೇವಲ ಫ್ಯಾಷನ್ ಮತ್ತು ಪ್ರದರ್ಶನಕ್ಕಾಗಿ ವಜ್ರವನ್ನು ಎಂದಿಗೂ ಧರಿಸಬೇಡಿ. ಅಲ್ಲದೆ, ನೀವು ಮಧುಮೇಹ ಅಥವಾ ಯಾವುದೇ ರಕ್ತ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರೆ ಇದನ್ನು ಧರಿಸಬೇಡಿ. ವಜ್ರವನ್ನು ಧರಿಸುವುದು 21ರಿಂದ 50 ವರ್ಷ ವಯಸ್ಸಿನವರೆಗೆ ಮಾತ್ರ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ನೀವು ತೊಂದರೆಗೊಳಗಾದ ವೈವಾಹಿಕ ಜೀವನವನ್ನು ಹೊಂದಿದ್ದರೆ, ವಜ್ರವನ್ನು ಧರಿಸುವುದರಿಂದ ಅದು ಇನ್ನಷ್ಟು ಹೆಚ್ಚಬಹುದು. ವಜ್ರವು ಬಿಳಿಯಾಗಿರಬೇಕು. ಕಳಂಕಿತ ವಜ್ರ ಅಥವಾ ಮುರಿದ ವಜ್ರವು ಅವಮಾನ ಅಥವಾ ವೈಫಲ್ಯ ಅಥವಾ ಅಪಘಾತಕ್ಕೆ ಕಾರಣವಾಗಬಹುದು. ವಜ್ರದೊಂದಿಗೆ ಹವಳ (ಮೂಂಗಾ) ಮತ್ತು ಓನಿಕ್ಸ್ (ಗೋಮೆಡ್) ಧರಿಸುವುದು ಅವನತಿಗೆ ಕಾರಣವಾಗಬಹುದು.
