ಎಚ್ಚರ, ಗರ್ಭಿಣಿ ಇರೋ ಮನೆಯಲ್ಲಿರಬಾರದು ಮುಳ್ಳಿನ ಗಿಡ!

ತನ್ನ ಒಡಲಿನಲ್ಲೊಂದು ಪುಟ್ಟ ಜೀವವನ್ನಿಟ್ಟುಕೊಳ್ಳುವ ಗರ್ಭಿಣಿಯ ಮನಸ್ಸು ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಗರ್ಭಿಣಿಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಕೆಲವು ವಾಸ್ತು ಟಿಪ್ಸ್.

Vaastu Tips for Pregnant Women skr

ವಾಸ್ತು(Vastu)ವು ನಮ್ಮ ದೈನಂದಿನ ಬದುಕಿನ ಪ್ರತಿಯೊಂದು ವಿಷಯಗಳಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯ ವಾಸ್ತು ನಿಯಮಗಳು ನಿಮಗೆ ತಿಳಿದೇ ಇರಬಹುದು. ಆದರೆ, ಮನೆಯಲ್ಲಿ ಗರ್ಭಿಣಿ(Pregnant) ಇದ್ದಾಗ ಯಾವೆಲ್ಲ ವಾಸ್ತು ನಿಯಮಗಳನ್ನು ಪಾಲಿಸಬೇಕೆಂಬುದು ಗೊತ್ತೇ? 
ಹೌದು, ಜಗತ್ತು ಮುನ್ನಡೆಯಲು ಈ ಸಂತಾನೋತ್ಪತ್ತಿ ನಿರಂತರವಾಗಿ ನಡೆಯುತ್ತಿರಬೇಕು. ಅದು ಸರಿಯಾಗಿ ಆಗಬೇಕೆಂದರೆ ಗರ್ಭಿಣಿಯ ಆರೋಗ್ಯವನ್ನು ಅತ್ಯಂತ ನಾಜೂಕಿನಿಂದ ನೋಡಿಕೊಳ್ಳಬೇಕು. ಏಕೆಂದರೆ ಆಕೆ ಆ ಸಮಯದಲ್ಲಿ ಎರಡು ಜೀವ. ಹೊಟ್ಟೆಯೊಳಗೆ ಮತ್ತೊಂದು ಜೀವವಿಟ್ಟುಕೊಂಡಿರುತ್ತಾಳೆ. ಈ ಸಂದರ್ಭದಲ್ಲಿ ಆಕೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಂಪೂರ್ಣ ಚೆನ್ನಾಗಿಡುವುದು ಮುಖ್ಯ. ಇದಕ್ಕಾಗಿ ವಾಸ್ತುವಿನ ಈ ನಿಯಮಗಳನ್ನು ಅನುಸರಿಸಿ. 

  • ಮನೆಯ ಪೂರ್ವ(East) ಭಾಗವನ್ನು ಇಂದ್ರ ಅಳುತ್ತಾನೆ. ಹೀಗಾಗಿ, ಪೂರ್ವ ದಿಕ್ಕಿನಲ್ಲಿ ಹೆಚ್ಚಿನ ಸಮಯವನ್ನು ಗರ್ಭಿಣಿಯರು ಕಳೆಯಬೇಕು. ಇದರಿಂದ ಅವರ ಎಲುಬು, ಕಣ್ಣು, ಹೃದಯ, ಬೆನ್ನು ಹುರಿ ಸ್ಟ್ರಾಂಗ್ ಆಗುತ್ತದೆ ಹಾಗೂ ರಕ್ತ ಪರಿಚಲನೆ(Blood Circulation) ಚೆನ್ನಾಗಿ ಆಗುತ್ತದೆ. 
  • ಮನೆಯ ಮಧ್ಯ ಭಾಗವನ್ನು ಬ್ರಹ್ಮಸ್ಥಾನವೆಂದು ಪರಿಗಣಿಸಲಾಗುತ್ತದೆ. ಈ ಜಾಗವನ್ನು ಖಾಲಿಯಾಗಿಡಬೇಕು. ಅಲ್ಲಿ ಯಾವುದೇ ಪೀಠೋಪಕರಣಗಳನ್ನು(furnitures) ಇಡಬಾರದು. 
  • ಗರ್ಭಿಣಿಯರು ಈಶಾನ್ಯ ಭಾದಲ್ಲಿ ಕುಳಿತು ಧ್ಯಾನ ಮಾಡುತ್ತಾ, ಪ್ರಾಣಾಯಾಮ ಮಾಡಬೇಕು.
  • ಮುಳ್ಳಿನ ಗಿಡಗಳಾದ ಕ್ಯಾಕ್ಟಸ್, ಗುಲಾಬಿ ಇನ್ನಿತರ ಗಿಡಗಳು ಹಾಗು ಬೋನ್ಸಾಯ್(Bonsai) ಗಿಡಗಳನ್ನು ಗರ್ಭಿಣಿ ಇರುವಾಗ ಮನೆಯ ಒಳಗಿಡಬೇಡಿ. ಅವು ಕುಂಠಿತ ಬೆಳವಣಿಗೆಯನ್ನು ಸಂಕೇತಿಸುತ್ತವೆ.
  • ರಬ್ಬರ್ ಗಿಡ ಇತ್ಯಾದಿ ಬಿಳಿ ರಸವನ್ನು ಹೊರಸೂಸುವ ಕಳ್ಳಿ ಮುಂತಾದ ಮುಳ್ಳಿನ ಗಿಡಗಳನ್ನು ನೆಡಬೇಡಿ.
  • ಗರ್ಭಿಣಿ ಮಹಿಳೆ ಇರುವ ರೂಮ್ ಗೋಡೆಯ ಬಣ್ಣ ಬಿಳಿಯದ್ದಾಗಿರಲಿ. ಇದು ಶಾಂತಿಯ ಸಂಕೇತವಾಗಿದ್ದು, ಆಕೆಯ ಮನಸ್ಸನ್ನು ಶಾಂತವಾಗಿರಿಸುತ್ತದೆ. 
  • ಆಗ್ನೇಯ ದಿಕ್ಕು ಅಗ್ನಿಯ ಸಂಕೇತ ಹಾಗು ದಕ್ಷಿಣ ದಿಕ್ಕು ಯಮ(Yama)ನ ಸಂಕೇತ. ಆದುದರಿಂದ ಮೊದಲ ಮೂರು ತಿಂಗಳು ಈ ದಿಕ್ಕಿನಲ್ಲಿ ಹೆಚ್ಚಾಗಿ ಇರಬೇಡಿ. ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇದೆ. 

    Garuda Purana: ಈ ಕೆಲಸಗಳನ್ನು ಸಂಜೆಯ ನಂತರ ಮಾಡಿದರೆ ನಷ್ಟ ಗ್ಯಾರಂಟಿ!
     
  • ಆಗ್ನೇಯ ದಿಕ್ಕಿನಲ್ಲಿ ದೀಪವನ್ನು ಹಚ್ಚಿಡಿ. ಇದು ತಾಯಿಯ ಆರೋಗ್ಯಕ್ಕೆ ಉತ್ತಮ. 
  • ಗರ್ಭಿಣಿ ಮಹಿಳೆಯರ ಕೋಣೆಯಲ್ಲಿ ನವಿಲು ಗರಿ ಇಡಿ. ಇದು ಪಾಸಿಟಿವ್ ಎನರ್ಜಿ ನೀಡುತ್ತದೆ. 
  • ಗರ್ಭಿಣಿಯರು ಕಂಪ್ಯೂಟರ್, ಫೋನ್‌ನಂಥಹ ಎಲೆಕ್ಟ್ರಿಕಲ್ ಗ್ಯಾಜೆಟ್‌ಗಳಿಂದ ಸಾಧ್ಯವಾದಷ್ಟು ದೂರವಿರಬೇಕು.
  • ಜಗಳ ಮುಕ್ತ ಸಮಯಕ್ಕಾಗಿ, ಮಹಿಳೆಯರು ನೈಋತ್ಯ ದಿಕ್ಕಿನ ಮಲಗುವ ಕೋಣೆಯಲ್ಲಿ ಮಲಗಬೇಕು.
  • ಗರ್ಭಿಣಿಯರು ಎಂದಿಗೂ ವಾಯುವ್ಯ ಕೋಣೆಯಲ್ಲಿ ಮಲಗಬಾರದು
  • ಗರ್ಭಿಣಿಯರು ತಮ್ಮ ತಲೆಯನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟುಕೊಂಡು ಮಲಗುವುದು ಒಳ್ಳೆಯದು. 
  • ಗರ್ಭಿಣಿಯರು ಆಗ್ನೇಯ ದಿಕ್ಕಿನ ಕೋಣೆಯಲ್ಲಿ ವಾಸಿಸಬಾರದು.
  • ಗರ್ಭಿಣಿಯರು ಉತ್ಸಾಹಭರಿತ ಮತ್ತು ತಾಜಾ ವಾತಾವರಣದಲ್ಲಿ ಇರಬೇಕು.

    ಕ್ರೂರ ಗ್ರಹ ರಾಹು 2023ರವರೆಗೆ ಈ 3 ರಾಶಿಗಳ ಮೇಲೆ ಕೃಪೆ ತೋರುತ್ತಾನೆ!
     
  • ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಯರು ಕೆಂಪು, ಕಪ್ಪು ಅಥವಾ ಕಂದು ಮುಂತಾದ ಗಾಢ ಬಣ್ಣಗಳನ್ನು(Dark colours) ಧರಿಸುವುದನ್ನು ತಪ್ಪಿಸಬೇಕು
  • ನಿರೀಕ್ಷಿತ ಮಹಿಳೆಯರು ಹಸಿರು, ನೀಲಿ, ಹಳದಿ ಮತ್ತು ಬಿಳಿಯಂತಹ ಸೂಕ್ಷ್ಮ ಬಣ್ಣಗಳಿಗೆ ಹೋಗಬೇಕು.
  • ಗರ್ಭಿಣಿಯರು ಖಿನ್ನತೆಗೆ ಕಾರಣವಾಗುವ ಕತ್ತಲೆ ಮತ್ತು ಮಸುಕಾದ ಕೋಣೆಗಳಲ್ಲಿ ಕುಳಿತುಕೊಳ್ಳಬಾರದು. ಅವರು ಯಾವಾಗಲೂ ಹೇರಳವಾದ ಬೆಳಕು ಮತ್ತು ಗಾಳಿಯೊಂದಿಗೆ ಕೊಠಡಿಗಳನ್ನು ಬಳಸಬೇಕು..
  • ಗರ್ಭಿಣಿಯರು ತಮ್ಮ ಮಲಗುವ ಕೋಣೆಯಲ್ಲಿ ಸುಂದರ ಮತ್ತು ಆರೋಗ್ಯವಂತ ಮಕ್ಕಳ ಚಿತ್ರಗಳನ್ನು ನೇತು ಹಾಕಬೇಕು.
  • ಗರ್ಭಿಣಿಯು ನಕಾರಾತ್ಮಕ ಕಂಪನಗಳನ್ನು ತಪ್ಪಿಸಲು ಮೆಟ್ಟಿಲುಗಳ ಕೆಳಗಿನ ಕೋಣೆ ಬಳಸಬಾರದು.
  • ಮನೆಯ ನಿಖರವಾದ ಮಧ್ಯಭಾಗದಲ್ಲಿರುವ ಮೆಟ್ಟಿಲು ಗರ್ಭಿಣಿಯರಿಗೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
  • ಪ್ರತಿದಿನ ಆಗ್ನೇಯ ದಿಕ್ಕಿನಲ್ಲಿ ದೀಪವನ್ನು ಬೆಳಗಿಸುವುದು ಉತ್ತಮ ಆರೋಗ್ಯಕ್ಕೆ ಮುಖ್ಯವಾಗಿದೆ.
  • ಹಿಂಸೆ, ಯುದ್ಧ, ಡ್ರ್ಯಾಗನ್‌ಗಳು ಅಥವಾ ಯಾವುದೇ ನಕಾರಾತ್ಮಕತೆಯನ್ನು ಚಿತ್ರಿಸುವ ವರ್ಣಚಿತ್ರಗಳನ್ನು ತಪ್ಪಿಸಬೇಕು.
     
Latest Videos
Follow Us:
Download App:
  • android
  • ios