Garuda Purana: ಈ ಕೆಲಸಗಳನ್ನು ಸಂಜೆಯ ನಂತರ ಮಾಡಿದರೆ ನಷ್ಟ ಗ್ಯಾರಂಟಿ!
ಮಹಾಪುರಾಣವೆಂದು ಪರಿಗಣಿಸಲ್ಪಟ್ಟಿರುವ ಗರುಡ ಪುರಾಣವು ಮಾನವ ಜೀವನವನ್ನು ಸಂತೋಷ ಮತ್ತು ಉತ್ತಮಗೊಳಿಸಲು ಹಲವು ನಿಯಮಗಳನ್ನು ಹೇಳುತ್ತದೆ. ಅದರಲ್ಲಿ ಆಯ್ದ ನಾಲ್ಕನ್ನು ಇಲ್ಲಿ ನೀಡಲಾಗಿದೆ.
ಜೀವನ ಸುಖಮಯವಾಗಿರಲು ನಮ್ಮ ಧರ್ಮಗ್ರಂಥಗಳಲ್ಲಿ ಅನೇಕ ನೀತಿಗಳು ಮತ್ತು ನಿಯಮಗಳನ್ನು ಹೇಳಲಾಗಿದೆ. ಆ ನಿಯಮಗಳು ನಮಗೆ ಕೇಳಲು ಅಸಮಂಜಸ ಮತ್ತು ಕಠಿಣವೆಂದು ತೋರಿದರೂ ವಾಸ್ತವದಲ್ಲಿ ಅವು ಕೆಲವು ವೈಜ್ಞಾನಿಕ ಸಂಗತಿಗಳಿಗೆ ಸಂಬಂಧಿಸಿವೆ. ಅವುಗಳಲ್ಲಿ ಮಾನವನ ಒಳ್ಳೆಯತನ ಅಡಗಿದೆ. ನಾವು ಈ ನಿಯಮಗಳನ್ನು ಅರ್ಥ ಮಾಡಿಕೊಂಡರೆ ಮತ್ತು ಜೀವನದಲ್ಲಿ ಅವುಗಳನ್ನು ಅನ್ವಯಿಸಲು ಪ್ರಯತ್ನಿಸಿದರೆ, ನಮ್ಮ ಬಹಳಷ್ಟು ತೊಂದರೆಗಳನ್ನು ನಿವಾರಿಸಬಹುದು.
ಗರುಡ ಪುರಾಣ(Garuda Purana)ದ ನೀತಿಶಾಸ್ತ್ರದಲ್ಲಿ ದಿನನಿತ್ಯದ ಕೆಲವು ಕೆಲಸಗಳ ನಿಯಮಗಳ ಉಲ್ಲೇಖವಿದೆ. ಇದರಲ್ಲಿ ಈ ಕೆಲಸಗಳನ್ನು ಮಾಡಲು ಸಮಯ ನಿಗದಿ ಮಾಡಲಾಗಿದೆ. ಅದರ ಬಗ್ಗೆ ತಿಳಿದು ಜೀವನಕ್ಕೆ ಅಳವಡಿಸಿಕೊಂಡರೆ ತಿಳಿದೋ, ತಿಳಿಯದೆಯೋ ಸಾಕಷ್ಟು ಲಾಭಗಳನ್ನು ಪಡೆಯಬಹುದು.
ರಾತ್ರಿಯಲ್ಲಿ ಉಗುರು ಕಚ್ಚುವುದು(nail biting at night)
ಗರುಡ ಪುರಾಣದಲ್ಲಿ ರಾತ್ರಿ ಉಗುರು ಕತ್ತರಿಸುವುದನ್ನು ನಿಷೇಧಿಸಲಾಗಿದೆ. ಇದನ್ನು ಕೆಟ್ಟ ಶಕುನ ಎಂದು ಬಣ್ಣಿಸುತ್ತಾ, ಹೀಗೆ ಮಾಡುವುದರಿಂದ ಲಕ್ಷ್ಮಿ ಮಾತೆಗೆ ಕೋಪ ಬರುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅಷ್ಟೇ ಅಲ್ಲ, ಸಂಜೆಯ ನಂತರ ಉಗುರು ಕಚ್ಚುವುದು ಕೂಡಾ ಕೆಟ್ಟದ್ದು ಎನ್ನಲಾಗಿದೆ.
ಈ ದಿನಗಳಲ್ಲಿ ಕ್ಷೌರ(Shaving)
ಜ್ಯೋತಿಷ್ಯವು ಒಂದು ವಿಜ್ಞಾನವಾಗಿದೆ. ಈ ಶಾಸ್ತ್ರದ ಪ್ರಕಾರ ಗುರುವಾರ ಕೂದಲು ತೊಳೆಯುವುದು, ಕತ್ತರಿಸುವುದು ಮತ್ತು ಶೇವಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ. ಜ್ಯೋತಿಷ್ಯದಲ್ಲಿ, ಗುರುವನ್ನು ಅದೃಷ್ಟ ಕಾರಕ ಗ್ರಹವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಗುರುವಾರದ ದಿನ ಕ್ಷೌರ ಮಾಡುವುದರಿಂದ ಅದೃಷ್ಟವು ಕೈ ಕೊಡುತ್ತದೆ. ಭಾನುವಾರ, ಸೋಮವಾರ, ಬುಧವಾರ ಕ್ಷೌರಕ್ಕೆ ನಿಗದಿಪಡಿಸಲಾಗಿದೆ. ಗುರುವಾರ ಹೊರತುಪಡಿಸಿ, ಮಂಗಳವಾರ ಮತ್ತು ಶನಿವಾರವೂ ಕ್ಷೌರ ಮಾಡದಂತೆ ಸೂಚಿಸಲಾಗಿದೆ. ಅದೂ ಅಲ್ಲದೆ ಮುಸ್ಸಂಜೆ ವೇಳೆಯಲ್ಲಿ ಹಾಗೂ ನಂತರದ ಸಮಯದಲ್ಲಿ ಕ್ಷೌರವಾಗಲೀ, ಕೂದಲು ಕತ್ತರಿಸುವುದಾಗಲೀ ಮಾಡಕೂಡದು.
Shani Jayantiಯ ದಿನ ರಾಶಿ ಪ್ರಕಾರ ದಾನ ಮಾಡಿ, ಸಮಸ್ಯೆಗಳಿಂದ ಮುಕ್ತಿ ಹೊಂದಿ
ಸಂಜೆ ತುಳಸಿ(Tulsi)ಗೆ ನೀರನ್ನು ಅರ್ಪಿಸುವುದು
ತುಳಸಿಯನ್ನು ಧರ್ಮಗ್ರಂಥಗಳಲ್ಲಿ ಬಹಳ ಪವಿತ್ರವೆಂದು ಹೇಳಲಾಗಿದೆ ಮತ್ತು ಅದನ್ನು ಪ್ರತಿ ದಿನ ಪೂಜಿಸಲು ಮತ್ತು ಅದಕ್ಕೆ ಸಂಜೆ ದೀಪವನ್ನು ಬೆಳಗಿಸಲು ಸಹ ಹೇಳಲಾಗಿದೆ. ಆದರೆ ಸಾಯಂಕಾಲ ತುಳಸಿಯನ್ನು ಮುಟ್ಟಬಾರದು ಅಥವಾ ತುಳಸಿಗೆ ನೀರನ್ನು ಅರ್ಪಿಸಬಾರದು. ಇದರಿಂದ ಮನೆಯಲ್ಲಿ ವಾಸ್ತು ದೋಷವುಂಟಾಗಿ, ಹಲವು ಸಮಸ್ಯೆಗಳು ಎದುರಾಗುತ್ತವೆ. ಸಂಜೆ ತುಳಸಿಯನ್ನು ಮುಟ್ಟದೆ ಗಿಡದ ಕೆಳಗೆ ದೀಪ ಹಚ್ಚಬೇಕು. ಭಕ್ತಿಯಿಂದ ನಮಸ್ಕರಿಸಬೇಕು. ಮುಂಜಾನೆಯ ಹೊತ್ತಿನಲ್ಲಿ ಮಾತ್ರ ತುಳಸಿಗೆ ನೀರು ಅರ್ಪಿಸಿ.
ಸಂಜೆ ಗುಡಿಸಬಾರದು
ಸಂಜೆ ಮನೆಯನ್ನು ಗುಡಿಸುವುದರಿಂದ ಧನಾತ್ಮಕ ಶಕ್ತಿ ಹೊರ ಹೋಗುತ್ತದೆ ಮತ್ತು ಮನೆಯಲ್ಲಿ ಬಡತನ(Poverty) ಬರುತ್ತದೆ ಎಂದು ಗರುಡ ಪುರಾಣದಲ್ಲಿ ಬರೆಯಲಾಗಿದೆ. ಆದ್ದರಿಂದ, ನೀವು ಮನೆಯನ್ನು ಸ್ವಚ್ಛಗೊಳಿಸಲು ಬಯಸಿದಾಗ, ಸಂಜೆಯ ಮೊದಲು ಅದನ್ನು ಮಾಡಿ. ಸಂಜೆಯ ಹೊತ್ತು ಗುಡಿಸುವುದರಿಂದ ಲಕ್ಷ್ಮಿಗೆ ಕೋಪ ಬರುತ್ತದೆ.
Vat Savitri Vrat 2022: ಆಚರಣೆ ಹೇಗೆ? ಪೂಜಾ ಮುಹೂರ್ತ ಮತ್ತು ವಿಧಾನವೇನು?
ಸಂಜೆಯ ಬಳಿಕ ಸಾಲ ನೀಡಬೇಡಿ
ಸಂಜೆಯ ಹೊತ್ತಿನಲ್ಲಿ ಮನೆಗೆ ಹಣ ಬರಬೇಕೇ ಹೊರತು ಮನೆಯಿಂದ ಹೊರ ಹೋಗಬಾರದು. ಸಂಜೆ ದೀಪ ಹಚ್ಚಿದ ಬಳಿಕ, ಸಾಲ ನೀಡಿದಿರಾದರೆ, ಲಕ್ಷ್ಮೀಯನ್ನು ಮನೆಯಿಂದ ಹೊರಗೆ ಕಳುಹಿಸಿದಂತಾಗುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೂ ಸಂಜೆಯ ಬಳಿಕ ಸಾಲ ನೀಡಬೇಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.