Asianet Suvarna News Asianet Suvarna News

Vaastu for Couple Bedroom: ದಾಂಪತ್ಯ ಸುಖ ಸದಾ ಇರಬೇಕೆಂದ್ರೆ ನವವಿವಾಹಿತರ ಕೋಣೆ ಹೀಗಿರಲಿ

ಮದುವೆ ಸಂಭ್ರಮದಲ್ಲಿರುವ ಜೋಡಿ, ಹೊಸ ಮನೆ, ಹೊಸ ಜನರಿಗೆ ಹೊಂದಿಕೊಳ್ಳಬೇಕಾಗುತ್ತದೆ. ಮದುವೆ ಎರಡು ಮನಸ್ಸುಗಳಲ್ಲ ಎರಡು ಕುಟುಂಬಗಳನ್ನು ಜೋಡಿಸುವಂತಹದ್ದು. ಮದುವೆ, ಹನಿಮೂನ್, ಅಲಂಕಾರದ ಬಗ್ಗೆ ಪ್ಲಾನ್ ಮಾಡುವ ನವವಿವಾಹಿತರು ಮಲಗುವ ಕೋಣೆ ಮರೆಯಬಾರದು.

Vaastu Tips For Bedroom of Newly Wed Couple
Author
Bangalore, First Published Dec 17, 2021, 5:21 PM IST
  • Facebook
  • Twitter
  • Whatsapp

ಮದುವೆಯ ಋತು ಶುರುವಾಗಿದೆ. ವಿವಾಹಕ್ಕೆ ತಯಾರಿ ನಡೆಯುತ್ತಿದೆ. ಮನೆ ಮನಗಳಲ್ಲಿ ಸಂಭ್ರಮ ನೆಲೆಸಿದೆ. ವಧು-ವರರು ಹೊಸ ಜೀವನಕ್ಕೆ ಕಾಲಿಡಲು ತಯಾರಿ ನಡೆಸುತ್ತಿದ್ದಾರೆ. ಹಾಗೆ ಖರೀದಿ ಕೂಡ ಜೋರಾಗಿಯೇ ನಡೆಯುತ್ತಿದೆ. ಬಂಗಾರ,ಬೆಳ್ಳಿ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ. ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದರೆ ಸಾಲದು. ವಿವಾಹಿತರು  ಜೀವನ ಪರ್ಯಂತ ಸುಖವಾಗಿ ಬಾಳಿ ಬದುಕಬೇಕು. ಮದುವೆಯಾಗುವ ಜೋಡಿಗೆ ಹಿರಿಯಲು ಇದನ್ನೇ ಹರಸುತ್ತಾರೆ. ಕೆಲವು ಬಾರಿ ನಾವುಂದುಕೊಂಡಿದ್ದು ನಡೆಯುವುದಿಲ್ಲ. ಕೆಲವೇ ದಿನಗಳಲ್ಲಿ ಮದುವೆ ಮುರಿದುಬಿದ್ದ ಉದಾಹರಣೆಗಳಿವೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಅದ್ರಲ್ಲಿ ವಾಸ್ತುದೋಷ ಕೂಡ ಒಂದು.
ಅನೇಕರು ವಾಸ್ತುವನ್ನು ನಂಬುವುದಿಲ್ಲ. ಆದ್ರೆ ವಾಸ್ತು ಕೂಡ ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ವಾಸ್ತುಶಾಸ್ತ್ರ ಹೇಳಿದೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ಹಾಗೂ ನಾವು ಮಲಗುವ ಜಾಗ,ಭಂಗಿ ಕೂಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಸಾಮಾನ್ಯವಾಗಿ ನವಜೋಡಿಯ ಕೋಣೆಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಸಾಕಷ್ಟು ಬಣ್ಣಬಣ್ಣಗಳಿಂದ ಕೋಣೆ ಅಲಂಕಾರಗೊಂಡಿರುತ್ತದೆ. ನವಜೋಡಿಗೆ ಸರ್ಪ್ರೈಸ್ ಗಳನ್ನು ರೂಮಿನಲ್ಲಿ ಕಾಣಬಹುದು. ಹೊಸ ಜೋಡಿಯ ಕೋಣೆಯನ್ನು ಅಲಂಕರಿಸುವ ಮೊದಲು ವಾಸ್ತುವಿನ ಬಗ್ಗೆ ಗಮನ ನೀಡಬೇಕಾಗುತ್ತದೆ.

ನವಜೋಡಿಯ ಕೋಣೆ ತಯಾರಿ ಹೀಗಿರಲಿ 

ದಿಕ್ಕಿಗೆ ಮಹತ್ವ ನೀಡಿ : ಪ್ರತಿಯೊಬ್ಬರ ಜೀವನದಲ್ಲಿ ಮದುವೆಯಾದ ಮೊದಲ ರಾತ್ರಿ ವಿಶೇಷವಾಗಿರುತ್ತದೆ. ಈ ರಾತ್ರಿಯನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಲು ಎಲ್ಲರೂ ಬಯಸ್ತಾರೆ. ಮೊದಲ ರಾತ್ರಿಯಂತೆ ಪ್ರತಿ ರಾತ್ರಿ ಪ್ರಣಯ,ಸಂತೋಷದಿಂದ ಕೂಡಿರಬೇಕೆಂದರೆ ಕೋಣೆಯ ದಿಕ್ಕು ಮಹತ್ವ ಪಡೆಯುತ್ತದೆ. ನವವಿವಾಹಿತರ ಕೋಣೆ ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ. ಈ ದಿಕ್ಕನ್ನು ಪ್ರೀತಿ ಹಾಗೂ ರೋಮ್ಯಾನ್ಸ್ ಹೆಚ್ಚಿಸುವ ದಿಕ್ಕೆಂದು ನಂಬಲಾಗಿದೆ. ಇದು ದಂಪತಿ ಮಧ್ಯೆ ಪ್ರೀತಿ,ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

Rudraksha guide: ರುದ್ರಾಕ್ಷಿ ಧರಿಸುವ ಮುನ್ನ ಈ ವಿಷಯಗಳು ಗೊತ್ತಿರಲಿ..

ಕೋಣೆಯ ದೀಪ : ಕೋಣೆಗೆ ಹಾಕುವ ಲೈಟ್ ಬಗ್ಗೆಯೂ ಇಲ್ಲಿ ಗಮನ ನೀಡಬೇಕಾಗುತ್ತದೆ. ನವಜೋಡಿಯ ಕೋಣೆಯಲ್ಲಿ ಬಣ್ಣದ ಲೈಟ್ ಗಳಿರುತ್ತವೆ. ಈ ಲೈಟ್ ಬೆಳಕು ನೇರವಾಗಿ ಹಾಸಿಗೆ ಮೇಲೆ ಬೀಳದಂತೆ ನೋಡಿಕೊಳ್ಳಬೇಕಾಗುತ್ತದೆ. ಹಾಸಿಗೆ ಮೇಲೆ ಬೆಳಕು ಬಿದ್ದಾಗ ನಿದ್ರೆಗೆ ತೊಂದರೆಯಾಗುತ್ತದೆ. ಇದು ಒತ್ತಡವನ್ನು ಹೆಚ್ಚಿಸುತ್ತದೆ. ಹಾಗೆಯೇ ಕಿಟಕಿ ಬಗ್ಗೆಯೂ ಗಮನ ನೀಡಬೇಕು. ಕಿಟಕಿಯಿಂದ ಹೊರಗಿನ ಲೈಟ್ ಕೋಣೆಯಲ್ಲಿರುವ ಹಾಸಿಗೆಗೆ ಬರದಂತೆ ನೋಡಿಕೊಳ್ಳಬೇಕಾಗುತ್ತದೆ. ಕೋಣೆ ಬದಲಿಸಲು ಸಾಧ್ಯವಿಲ್ಲ ಎನ್ನುವವರು ಕಿಟಕಿ ಬಾಗಿಲನ್ನು ಹಾಕಿರುವುದು ಒಳ್ಳೆಯದು. ಇಲ್ಲವೆ ಕಿಟಕಿಗೆ ಪರದೆ ಬಳಸಬೇಕು.

ಬೆಡ್ ರೂಮ್ ಆಫೀಸ್ ಆಗದಿರಲಿ : ಕಚೇರಿ ಕೆಲಸವನ್ನು ಮನೆಯಲ್ಲಿ ಮಾಡುವುದು ಈಗ ಅನಿವಾರ್ಯವಾಗಿದೆ. ಆದರೆ ಕಚೇರಿ ಕೆಲಸ ಬೆಡ್ ರೂಮಿಗೆ ಬರದಂತೆ ನೋಡಿಕೊಳ್ಳಬೇಕು. ಇಗಷ್ಟೆ ಮದುವೆಯಾಗಿರುವ ದಂಪತಿ,ಕಚೇರಿ ಕೆಲಸವನ್ನು ಮಲಗುವ ಕೋಣೆಯಲ್ಲಿ ಮಾಡಬಾರದು. ಇದು ದಾಂಪತ್ಯ ಸುಖವನ್ನು ಹಾಳು ಮಾಡುತ್ತದೆ ಎಂದು ನಂಬಲಾಗಿದೆ. ಗೆಜೆಟ್ ಗಳು ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ. ಇದ್ರಿಂದ ಸುಖ,ಸಂತೋಷ ಮಾಯವಾಗುತ್ತದೆ.

Vaastu for Workstation: ಮನೆಯ ವರ್ಕ್ ಟೇಬಲ್ ವಾಸ್ತು ಹೀಗಿರಲಿ

ಮಲಗುವ ದಿಕ್ಕು : ಕೇವಲ ಮಲಗುವ ಕೋಣೆಯ ದಿಕ್ಕು ಮಾತ್ರವಲ್ಲ ಮಲಗುವ ದಿಕ್ಕು ಕೂಡ ಇಲ್ಲಿ ಬಹಳ ಮುಖ್ಯ. ನವ ಜೋಡಿ ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗಬೇಕು. ಕಾಲು ಉತ್ತರ ದಿಕ್ಕಿಗೆ ಇರುವಂತೆ ನೋಡಿಕೊಳ್ಳಬೇಕು. ಈ ದಿಕ್ಕಿನಲ್ಲಿ ಮಲಗಿದರೆ ಸುಖ ನಿದ್ರೆ ಬರುತ್ತದೆ. ಬೆಳಗ್ಗೆ ಫ್ರೆಶ್ ಆಗಿ ಏಳಬಹುದು.ವೈವಾಹಿಕ ಜೀವನದಲ್ಲೂ ಶಾಂತಿ,ನೆಮ್ಮದಿ ಇರುತ್ತದೆ.

ಕೋಣೆಯ ಬಣ್ಣ : ನವವಿವಾಹಿತರು ಮಲಗುವ ಕೋಣೆಗೆ ಮಂಕಾದ ಬಣ್ಣ ಹಚ್ಚಬಾರದು. ಗೋಡೆಗೆ ಅಪ್ಪಿತಪ್ಪಿಯೂ ಬೂದು,ಕಂದು,ಕಪ್ಪು ಬಣ್ಣವನ್ನು ಬಳಿಯಬಾರದು. ಗೋಡೆಗೆ ಗುಲಾಬಿ, ಹಳದಿ, ನೀಲಿ ಅಥವಾ ಕಿತ್ತಳೆ ಬಣ್ಣ ಬಳಿದರೆ ಒಳ್ಳೆಯದು.
 

Follow Us:
Download App:
  • android
  • ios