Wardrobe Vastu : ಖಾತೆ ಖಾಲಿಯಾಗೋ ಮೊದಲು ಮನೆಯಲ್ಲಿರುವ ಬೀರು ಚೆಕ್ ಮಾಡಿ
ಮನೆಯಲ್ಲಿರುವ ವಾರ್ಡ್ರೋಬ್ ಕೂಡ ನಿಮ್ಮ ಅದೃಷ್ಟ ಬದಲಾಯಿಸುವ ಶಕ್ತಿ ಹೊಂದಿದೆ. ವಾಸ್ತು ಶಾಸ್ತ್ರದಲ್ಲಿ ವಾರ್ಡ್ರೋಬ್ ಗೆ ಮಹತ್ವದ ಸ್ಥಾನವಿದೆ. ಅದನ್ನು ಕೇವಲ ಹಣ ಇಡುವ ಜಾಗವಲ್ಲ. ಮಹಾಲಕ್ಷ್ಮಿ ಇರುವ ಜಾಗ ಅಂತ ನಂಬಲಾಗಿದೆ. ವಾರ್ಡ್ರೋಬ್ ವಾಸ್ತು ಶಾಸ್ತ್ರದ ಪ್ರಕಾರ ಇಲ್ಲ ಅಂದ್ರೆ ಖಾತೆ ಖಾಲಿಯಾಗುತ್ತೆ.

ವಾರ್ಡ್ರೋಬ್ ಸ್ಥಳ
ಯಾವಾಗಲೂ ನಿಮ್ಮ ವಾರ್ಡ್ರೋಬ್ ಅನ್ನು ಕೋಣೆಯ ನೈಋತ್ಯ ಮೂಲೆಯಲ್ಲಿ ಇರಿಸಿ. ವಾಸ್ತು ಪ್ರಕಾರ, ಈ ಮೂಲೆಯನ್ನು ಅತ್ಯಂತ ಸ್ಥಿರ ಮತ್ತು ಶಕ್ತಿಶಾಲಿ ಎಂದು ನಂಬಲಾಗಿದೆ. ಇದು ನಿಮ್ಮ ಹಣ ಸುರಕ್ಷಿತವಾಗಿರುವುದನ್ನು ಖಚಿತಪಡಿಸುತ್ತದೆ.
ಯಾವ ದಿಕ್ಕಿಗೆ ವಾರ್ಡ್ರೋಬ್ ಬಾಗಿಲು ತೆರೆಯಬೇಕು?
ನೀವಿಟ್ಟ ವಾರ್ಡ್ರೋಬ್ ಬಾಗಿಲು ಉತ್ತರಕ್ಕೆ ಎದುರಾಗಿರುವ ರೀತಿಯಲ್ಲಿ ತೆರೆದಿಡಲು ಪ್ರಯತ್ನಿಸಿ. ಉತ್ತರ ದಿಕ್ಕನ್ನು ಸಂಪತ್ತಿನ ದೇವರು ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಬಾಗಿಲು ತೆರೆಯುವುದರಿಂದ ಮನೆಗೆ ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ.
ಸ್ವಚ್ಛತೆ ಮುಖ್ಯ
ವಾರ್ಡ್ರೋಬ್ ಒಳಗೆ ಅನಗತ್ಯ ವಸ್ತುಗಳನ್ನು ಇಡಬಾರದು. ಹಳೆಯ ಬಿಲ್, ಔಷಧಿ ಚೀಟಿ, ಮಾತ್ರೆಗಳನ್ನು ಇಡಬಾರದು. ಹಾಗೆ ವಾರ್ಡ್ರೋಬ್ ಕೊಳಕಾಗಿರಬಾರದು. ಆಗಾಗ ವಾರ್ಡ್ರೋಬ್ ಕ್ಲೀನ್ ಮಾಡ್ತಿರಿ.
ಕನ್ನಡಿ ಬೇಡ
ವಾರ್ಡ್ರೋಬ್ನ ಮುಂದೆ ಕನ್ನಡಿ ಇಡುವುದನ್ನು ತಪ್ಪಿಸಿ. ವಾರ್ಡ್ರೋಬ್ ಪ್ರತಿಬಿಂಬ ಅದರಲ್ಲಿ ಕಾಣಿಸುತ್ತದೆ. ಇದು ಉತ್ತಮವಲ್ಲ. ಕನ್ನಡಿಯನ್ನು ನೀವು ಹಾಕೋದಿದ್ರೆ ಉತ್ತರ ದಿಕ್ಕಿನ ಗೋಡೆಗೆ ಹಾಕಿ. ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ವಾರ್ಡ್ರೋಬ್ ಬಣ್ಣ
ತಿಳಿ ಬಣ್ಣಗಳ ವಾರ್ಡ್ರೋಬ್ ಖರೀದಿ ಮಾಡಿ. ಕೆನೆ, ತಿಳಿ ಹಳದಿ ಅಥವಾ ಬಿಳಿ ಬಣ್ಣ ವಾರ್ಡ್ರೋಬ್ಗಳಿಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಗಾಢ ಮತ್ತು ಪ್ರಕಾಶಮಾನವಾದ ಬಣ್ಣಗಳ ವಾರ್ಡ್ರೋಬ್ ತರಬೇಡಿ. ಅವು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತವೆ.
ಬೆಲೆ ಬಾಳುವ ವಸ್ತು ಇಲ್ಲಿಡಿ
ನಿಮ್ಮ ಹಣ, ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಪ್ರಮುಖ ದಾಖಲೆಗಳನ್ನು ವಾರ್ಡ್ರೋಬ್ನ ಮಧ್ಯ ಅಥವಾ ಮೇಲಿನ ವಿಭಾಗಗಳಲ್ಲಿ ಇರಿಸಿ. ಈ ವಸ್ತುಗಳನ್ನು ನೈಋತ್ಯ ಮೂಲೆಯಲ್ಲಿ ಸಂಗ್ರಹಿಸುವುದು ಅತ್ಯಂತ ಶುಭ.
ಕುಬೇರ ಯಂತ್ರ ಅಥವಾ ಲಕ್ಷ್ಮಿ ಚಿತ್ರ
ಕಪಾಟಿನೊಳಗೆ ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯ ಸಣ್ಣ ಚಿತ್ರ ಅಥವಾ ಸಂಪತ್ತಿನ ದೇವರು ಕುಬೇರ ಅಥವಾ ಲೋಹದ ಕುಬೇರ ಯಂತ್ರವನ್ನು ಇಡಬಹುದು. ಇದು ಹಣದ ಹರಿವನ್ನು ಹೆಚ್ಚಿಸುತ್ತದೆ.

