Animals Bring Bad Luck : ಈ ಪ್ರಾಣಿಗಳು ಮನೆಯೊಳಗೆ ಬಂದ್ರೆ ಸರ್ವನಾಶ ಅನ್ನೋದು ನಿಜಾನಾ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾಣಿಗಳ ಬಗ್ಗೆ ಸಾಕಷ್ಟು ಸಂಗತಿಗಳನ್ನು ಹೇಳಲಾಗಿದೆ. ಪ್ರಾಣಿ ಮನೆ ಪ್ರವೇಶದ ಬಗ್ಗೆ ಬೇರೆ ಬೇರೆ ಪ್ರದೇಶಗಳಲ್ಲಿ ಭಿನ್ನ ನಂಬಿಕೆಗಳಿವೆ. ಬೀದಿ ನಾಯಿ,ಬೆಕ್ಕು ಸೇರಿದಂತೆ ಪಾರಿವಾಳ ಮನೆಯೊಳಗೆ ಬಂದ್ರೆ ಶುಭವಾ? ಅಶುಭವಾ?
ಮನುಷ್ಯ ಹಾಗೂ ಪ್ರಾಣಿ(Animal)ಗಳಿಗೆ ಅವಿನಾಭಾವ ಸಂಬಂಧವಿದೆ. ಅನೇಕರು ಪ್ರಾಣಿಗಳನ್ನು ಮನುಷ್ಯರಿಗಿಂತ ಹೆಚ್ಚು ಪ್ರೀತಿ ಮಾಡುತ್ತಾರೆ. ಮನೆಯ ಒಬ್ಬ ಸದಸ್ಯನಂತೆ ಪ್ರಾಣಿಗಳನ್ನು ನೋಡಿಕೊಳ್ತಾರೆ. ಕೆಲವೊಮ್ಮೆ ಅಚಾನಕ್ ಆಗಿ ಮನೆಯೊಳಗೆ ಪ್ರಾಣಿಗಳ ಪ್ರವೇಶವಾಗುತ್ತದೆ. ಜ್ಯೋತಿಷ್ಯ (Astrology )ಶಾಸ್ತ್ರದಲ್ಲಿ ಪ್ರಾಣಿಗಳು ಮನೆಯೊಳಗೆ ಬರುವುದಕ್ಕೂ ಭವಿಷ್ಯಕ್ಕೂ ಸಂಬಂಧ ಹೇಳಲಾಗಿದೆ. ಅನೇಕ ಪ್ರಾಣಿಗಳು ಮನೆಯೊಳಗೆ ಬಂದ್ರೆ ಅದರಿಂದ ಆರ್ಥಿಕ ನಷ್ಟ ಮಾತ್ರ ಆಗುವುದಿಲ್ಲ. ಧನ (Money) ಹಾನಿ ಜೊತೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಕೆಲ ಪ್ರಾಣಿಗಳು ಮನೆಯೊಳಗೆ ಪ್ರವೇಶ ಮಾಡುವ ಮೂಲಕ ಭವಿಷ್ಯದಲ್ಲಾಗುವ ಕೆಟ್ಟ ಘಟನೆಗಳ ಬಗ್ಗೆ ಮುನ್ಸೂಚನೆಯನ್ನೂ ನೀಡುತ್ತವೆ.ಯಾವ ಪ್ರಾಣಿ ಮನೆಯೊಳಗೆ ಬಂದಲ್ಲಿ ಅಪಶಕುನ ಎಂಬುದನ್ನು ಇಂದು ನಾವು ನೋಡೋಣ.
ಪಾರಿವಾಳ(Pigeon)ದ ಪ್ರವೇಶ : ಪಾರಿವಾಳ ಶಾಂತವಾದ ಪಕ್ಷಿ. ಧಾರ್ಮಿಕ ಶಾಸ್ತ್ರಗಳಲ್ಲಿ ಮನೆಯೊಳಗೆ ಪಾರಿವಾಳ ಬರುವುದು ಅಪಶಕುನ. ಇದು ಶುಭ ಸಂಕೇತವಲ್ಲ. ಪಾರಿವಾಳವನ್ನು ರಾಹುವಿಗೆ ಹೋಲಿಸಲಾಗುತ್ತದೆ. ಪಾರಿವಾಳ ಮನೆಯೊಳಗೆ ಬಂದ್ರೆ ರಾಹುವಿನ ಪ್ರವೇಶವಾದಂತೆ ಎಂದು ನಂಬಲಾಗಿದೆ. ಇದರಿಂದ ಮನೆಗೆ ನಷ್ಟವಾಗುತ್ತದೆ. ನಕಾರಾತ್ಮಕ ಶಕ್ತಿಯ ಪ್ರವೇಶ ಮನೆಯೊಳಗಾಗುತ್ತದೆ. ಕುಟುಂಬಸ್ಥರಿಗೆ ಅಸಫಲತೆ ಕಾಡುತ್ತದೆ.
ಮನೆಯೊಳಗೆ ಬಂದ ಕಳ್ಳ ಬೆಕ್ಕು (Cat) : ಕಿಟಕಿ, ಬಾಗಿಲು ತೆಗೆದಿಟ್ಟರೆ ಕಳ್ಳ ಬೆಕ್ಕುಗಳು ಮನೆಯೊಳಗೆ ಪ್ರವೇಶ ಮಾಡುತ್ತವೆ. ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಹಾಲು ಕುಡಿದು ಹೋಗುವ ಬೆಕ್ಕುಗಳಿವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬೆಕ್ಕುಗಳನ್ನು ರಾಹುವಿಗೆ ಹೋಲಿಕೆ ಮಾಡಲಾಗಿದೆ. ಬೆಕ್ಕು ಮನೆಗೆ ಬರುವುದು ಮಾತ್ರವಲ್ಲ ಅದು ಕೂಗುವುದನ್ನೂ ಅಶುಭ ಎನ್ನಲಾಗುತ್ತದೆ. ಬೆಕ್ಕು ನಕಾರಾತ್ಮಕ ಶಕ್ತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಕಪ್ಪು ಬೆಕ್ಕು ಮನೆಗೆ ಬಂದಲ್ಲಿ ಕೆಟ್ಟ ಘಟನೆ ನಡೆಯುತ್ತದೆ ಎನ್ನುವವರಿದ್ದಾರೆ. ಆದ್ರೆ ಇದಕ್ಕೆ ವೈಜ್ಞಾನಿಕ ಕಾರಣವಿಲ್ಲ. ಮನೆಯಲ್ಲಿ ಬೆಕ್ಕು ಸಾಕುವುದನ್ನು ಶಾಸ್ತ್ರ ಒಪ್ಪಿಲ್ಲ. ಆದ್ರೆ ಕೆಲ ದೇಶಗಳಲ್ಲಿ ಬೆಕ್ಕು ಮನೆಯೊಳಗೆ ಬಂದ್ರೆ ಶುಭವೆಂದು ನಂಬಲಾಗುತ್ತದೆ.
ರಣಹದ್ದು (Vulture) : ಮನೆಯೊಳಗೆ ರಣಹದ್ದುವಿನ ಪ್ರವೇಶವಾದ್ರೆ ಅದು ಮಂಗಳಕರವಲ್ಲ. ರಣಹದ್ದುಗಳು ಸತ್ತ ಪ್ರಾಣಿಯನ್ನು ತಿನ್ನುತ್ತವೆ. ಹಾಗಾಗಿ ಅದು ಅಶುಭ ಪಕ್ಷಿ. ನಕಾರಾತ್ಮಕತೆಯನ್ನು ಅದು ತರುತ್ತದೆ. ಅದು ಮನೆಗೆ ಬಂದ ಮನೆಯಲ್ಲಿ ಸಕಾರಾತ್ಮಕ ಚಿಂತನೆ ನಾಶವಾಗುತ್ತದೆ. ಆರ್ಥಿಕ ನಷ್ಟ ಸಂಭವಿಸುತ್ತದೆ. ಕುಟುಂಬಸ್ಥರ ಮಧ್ಯೆ ಗಲಾಟೆ ಶುರುವಾಗಿ,ಶಾಂತಿ ಭಂಗವಾಗುತ್ತದೆ. ಮನೆಯಲ್ಲಿ ನೆಮ್ಮದಿ ನಾಶವಾಗುತ್ತದೆ. ಹಾಗಾಗಿ ರಣಹದ್ದು ಪ್ರವೇಶ ಮಾಡಿದರೆ ಅದನ್ನು ಮನೆಯಿಂದ ಹೊರಗೆ ಹಾಕಿ ಶಾಂತಿ ಜಪ ಮಾಡಿಸಬೇಕಾಗುತ್ತದೆ.
iVaastu for Workstation: ಮನೆಯ ವರ್ಕ್ ಟೇಬಲ್ ವಾಸ್ತು ಹೀಗಿರಲಿ
ಮನೆಯೊಳಗೆ ನಾಯಿ (Dog) ಆಗಮನ : ಪ್ರಾಚೀನ ಕಾಲದಿಂದಲೂ ನಾಯಿಯ ಮೇಲೆ ಮನುಷ್ಯನಿಗೆ ವಿಶೇಷ ಪ್ರೀತಿಯಿದೆ. ನಾಯಿಯನ್ನು ನಾರಾಯಣ ಎಂದು ಪೂಜಿಸುವವರಿದ್ದಾರೆ. ನಾಯಿಯನ್ನು ರಾಹು,ಕೇತು ಮತ್ತು ಶನಿಗೆ ಹೋಲಿಕೆ ಮಾಡಲಾಗುತ್ತದೆ. ಅಪರಿಚಿತ ನಾಯಿ ಮನೆಯೊಳಗೆ ಪ್ರವೇಶ ಮಾಡುವುದು ಒಳ್ಳೆಯದಲ್ಲ. ನಾಯಿ ಮನೆಯೊಳಗೆ ಪ್ರವೇಶ ಮಾಡಿದರೆ ಕೇತು ಮನೆಯೊಳಗೆ ಬಂದಂತೆ. ಇದ್ರಿಂದ ಹಣದ ಸಮಸ್ಯೆ ಕಾಡುತ್ತದೆ. ಅನಾರೋಗ್ಯ ಎದುರಾಗುತ್ತದೆ. ಆದ್ರೆ ಮನೆಯಲ್ಲಿ ನಾಯಿ ಸಾಕುವುದು ಶುಭಕರ. ಯಾರ ಮನೆಯಲ್ಲಿ ನಾಯಿ ಸಾಕಲಾಗಿದೆಯೋ ಆ ಮನೆಯಲ್ಲಿ ಕೇತು ವಾಸಿಸುವುದಿಲ್ಲ ಎನ್ನಲಾಗುತ್ತದೆ.
Feeding black Dog : ಸಮಸ್ಯೆಗಳಿಂದ ದೂರವಾಗಲು ನಾಯಿಗೆ ಆಹಾರ ನೀಡಿ
ಗೂಬೆ (Owl): ಗೂಬೆ ತಾಯಿ ಲಕ್ಷ್ಮಿಯ ವಾಹನ. ಹಾಗಂತ ಇದು ಮನೆ ಪ್ರವೇಶ ಮಾಡಿದರೆ ಒಳ್ಳೆಯದಲ್ಲ. ದೀಪಾವಳಿ ದಿನ ಗೂಬೆ ಬರುವುದು ಒಳ್ಳೆಯದು. ಉಳಿದ ದಿನ ಗೂಬೆ ಮನೆಯೊಳಗೆ ಬಂದಲ್ಲಿ ನಕಾರಾತ್ಮಕ ಪ್ರಭಾವವುಂಟಾಗುತ್ತದೆ. ಗೂಬೆ ಆಗಮನದಿಂದ ಉನ್ನತಿಗೆ ಅಡ್ಡಿಯಾಗುತ್ತದೆ. ಮನೆ ಸರ್ವನಾಶವಾಗುತ್ತದೆ ಎಂದು ನಂಬಲಾಗಿದೆ.
ಬಾವಲಿ (Bats) : ಮನೆಯೊಳಗೆ ಬಾವಲಿಗಳು ಬರುವುದು ಅಶುಭ. ಜೀವನದಲ್ಲಿ ಕಷ್ಟ ಶುರುವಾಗುತ್ತದೆ. ಏಳ್ಗೆಗೆ ಅಡ್ಡಿಯಾಗುತ್ತದೆ.