ಸಕಾರಾತ್ಮಕ ಶಕ್ತಿ ಹೆಚ್ಚಲು ಮನೆಯ ಶೃಂಗಾರ ಹೀಗಿರಲಿ..!
ಮನೆಯ ಒಳಾಂಗಣದ ಅಲಂಕಾರವು ವಾಸ್ತು ಪ್ರಕಾರ ಇದ್ದಾಗ ಮಾತ್ರ ಮನೆಯ ಅಭಿವೃದ್ಧಿ ಸಾಧ್ಯವೆಂಬುದು ವಾಸ್ತು ತಜ್ಞರ ಅಭಿಪ್ರಾಯ. ಅಷ್ಟೇ ಅಲ್ಲದೆ ಮನೆಯ ಸರಿಯಾದ ಅಲಂಕಾರ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಕುಗ್ಗಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆಯ ಅಲಂಕಾರಗಳು ಹೇಗಿರಬೇಕೆಂಬುದನ್ನು ತಿಳಿಯೋಣ..
ಮನೆಯು ನೋಡಲು ಚಂದವಾಗಿರಬೇಕು. ಮನಸ್ಸಿಗೆ ಖುಷಿ ಕೊಡುವಂತೆ ಮನೆಯನ್ನು ಸಿಂಗರಿಸಿರಬೇಕು. ಮನೆಯು ಸ್ವಚ್ಛವಾಗಿ, ಅಂದವಾಗಿದ್ದರೆ ಮನಸ್ಸಿಗೆ ಶಾಂತಿ ಇರುತ್ತದೆ. ಸಕಾರಾತ್ಮಕ ಶಕ್ತಿಯ ಹರಿವು ಮನೆಯಲ್ಲಿ ಚೆನ್ನಾಗಿರಬೇಕೆಂದರೆ, ವಾಸ್ತು ಶಾಸ್ತ್ರದ ಪ್ರಕಾರ ಮನೆಯನ್ನು ಅಲಂಕರಿಸಿರಬೇಕು.
ಕೆಲವೊಮ್ಮೆ ಚಂದವಾಗಿರಬೇಕೆಂದು ಹೆಚ್ಚಿನ ದೀಪಗಳು, ಹಲವು ರೀತಿಯ ಶೋ ವಸ್ತುಗಳನ್ನು ಮನೆಯಲ್ಲಿ ತಂದಿಡುತ್ತೇವೆ. ಚಂದಕಾಣುವ ಎಲ್ಲ ವಸ್ತುಗಳು ಮನೆಗೆ ಒಳಿತಿಗೆ ಕಾರಣವಾಗುವುದಿಲ್ಲ. ಬದಲಾಗಿ ಕೆಲವು ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಮನೆಯ ಒಳಾಂಗಣದ ಅಲಂಕಾರವು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿರುತ್ತದೆ. ಹಾಗಾದರೆ ವಾಸ್ತು ಪ್ರಕಾರ ಮನೆಯ ಅಲಂಕಾರಗಳು ಹೇಗಿರಬೇಕೆಂಬುದನ್ನು ತಿಳಿಯೋಣ..
ಇದನ್ನು ಓದಿ: ವಿವಿಧ ಪ್ರಕಾರದ ಜಪಮಾಲೆಯಿಂದ ಧನ-ಧಾನ್ಯ ವೃದ್ಧಿ...!
ಪ್ರವೇಶ ದ್ವಾರ ಹೀಗಿರಲಿ
ಮನೆಯ ಪ್ರವೇಶ ದ್ವಾರವು ಕನ್ನಡಿ ಇದ್ದಂತೆ. ಮುಖ್ಯ ದ್ವಾರವನ್ನು ಸದಾ ಸ್ವಚ್ಛವಾಗಿಟ್ಟು ಕೊಳ್ಳುವುದು ಅವಶ್ಯಕ. ಅನಾವಶ್ಯಕ ಚಿತ್ರಗಳನ್ನು, ಚಂದಗಾಣಿಸುವ ಸಿಂಗಾರದ ವಸ್ತುಗಳನ್ನು ಮುಖ್ಯದ್ವಾರಕ್ಕೆ ಹಾಕದಿರುವುದು ಉತ್ತಮ. ಶುಭವನ್ನು ನೀಡುವಂಥಹ ಚಿಹ್ನೆಗಳಾದ ಸ್ವಸ್ತಿಕ್, ಓಂ, ಕಲಶ, ಶಂಖ, ಆಶೀರ್ವಾದ ಮುದ್ರೆ, ಕುಳಿತಿರುವ ಗಣೇಶನ ಚಿತ್ರಗಳು ಮನೆಗೆ ಒಳಿತನ್ನು ಮಾಡುತ್ತವೆ. ಮುಖ್ಯದ್ವಾರವನ್ನು ತೋರಣದಿಂದ ಸಿಂಗರಿಸಿದರೆ ಒಳಿತು.
ಚಿತ್ರಗಳ ಆಯ್ಕೆಯಲ್ಲಿ ಇರಲಿ ಎಚ್ಚರ
ಚಂದಕಾಣಿಸುವ ಅಥವಾ ಇಷ್ಟವಾಗುವ ಎಲ್ಲ ಚಿತ್ರಗಳನ್ನು ಮನೆಯಲ್ಲಿ ಹಾಕಿಕೊಳ್ಳುವುದು ಉಚಿತವಲ್ಲ. ಕೆಲವು ಚಿತ್ರಗಳು ನಕಾರಾತ್ಮಕ ಪ್ರಭಾವವನ್ನು ಬೀರುವಂತಹ ಚಿತ್ರಗಳಾಗಿರುತ್ತವೆ. ಯುದ್ಧ ಮತ್ತು ಅದಕ್ಕೆ ಸಂಬಂಧಿಸಿದ ರಕ್ತಸಿಕ್ತವಾಗಿರುವಂಥ ದೃಶ್ಯದ ಫೋಟೊಗಳು, ಬಂಜರು ಭೂಮಿ, ಒಣಗಿದ ಮರ, ಖಿನ್ನತೆಯನ್ನು ಬಿಂಬಿಸುವ ದೃಶ್ಯವುಳ್ಳ ಫೋಟೊಗಳನ್ನು ಮನೆಯಲ್ಲಿ ಹಾಕಿಕೊಂಡರೆ ಅವು ನಕಾರಾತ್ಮಕ ಪ್ರಭಾವವನ್ನು ಬೀರುವುದು ಖಚಿತ.
ಕೆಲವು ಪ್ರಾಣಿಗಳ ಚಿತ್ರಗಳು ಮನೆಗೆ ಶುಭವನ್ನು ತರುತ್ತವೆ. ಮುಖ್ಯವಾಗಿ ಕುದುರೆಯ ಫೋಟೊವು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಕುದುರೆಯು ಶಕ್ತಿ, ವೇಗ, ವಿಸ್ತಾರ ಮತ್ತು ಪೌರುಷದ ಬಲವನ್ನು ಪ್ರತಿನಿಧಿಸುತ್ತದೆ. ಕುದುರೆಯ ಶೋಪೀಸ್ ಅಥವಾ ಫೋಟೊವನ್ನು ಮನೆಯ ಪೂರ್ವ ಇಲ್ಲವೆ ವಾಯವ್ಯ ದಿಕ್ಕಿನಲ್ಲಿಟ್ಟರೆ ಉತ್ತಮ. ಧೈರ್ಯದ ಪ್ರತೀಕವಾದ ಆನೆಯ ಫೋಟೊವನ್ನು ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿಟ್ಟರೆ ಯಶಸ್ಸು ಮತ್ತು ಕೀರ್ತಿ ಹೆಚ್ಚುತ್ತದೆ. ಶಾಂತಿಯ ಪ್ರತೀಕವಾದ ಗೋಮಾತೆಯ ಫೋಟೊವನ್ನು ಮನೆಯ ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿಟ್ಟರೆ ದುಃಖ ಮತ್ತು ಚಿಂತೆ ದೂರವಾಗುತ್ತದೆ. ಅಷ್ಟೇ ಅಲ್ಲದೆ ಮನೋಕಾಮನೆಗಳು ಪೂರ್ತಿಗೊಳ್ಳುತ್ತವೆ ಎಂದು ಹೇಳಲಾಗುತ್ತದೆ.
ಇದನ್ನು ಓದಿ: ಬುಧ ಗ್ರಹದ ರಾಶಿ ಪರಿವರ್ತನೆಯಿಂದ ಈ 6 ರಾಶಿಯವರಿಗೆ ದೊಡ್ಡ ಬದಲಾವಣೆ..!
ಸಮೃದ್ಧಿ ನೀಡುವ ಗಿಡಗಳು
ಹಸಿರು ಮನಸ್ಸಿಗೆ ತಂಪನ್ನು ಮತ್ತು ಮುದವನ್ನು ನೀಡುತ್ತವೆ. ಹಸಿರು ಗಿಡ –ಮರಗಳನ್ನು ನೋಡುತ್ತಿದ್ದರೆ ಬೇಸರ ದೂರವಾಗಿ, ಮನಸ್ಸಿಗೆ ಖುಷಿ ಸಿಗುತ್ತದೆ. ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮನಿಪ್ಲಾಂಟ್, ಬಿದಿರನ್ನು ಹೋಲುವ ಚಿಕ್ಕ ಗಿಡಗಳನ್ನು ಇಟ್ಟರೆ ಸುಂದರವಾಗಿರುವುದಲ್ಲದೆ, ಮನೆಗೆ ಸಮೃದ್ಧಿಯನ್ನು ನೀಡುತ್ತವೆ. ಒಣಗಿದ, ಮುಳ್ಳುಗಳುಳ್ಳ ಮತ್ತು ಬೋನ್‌ಸಾಯ್ ಗಿಡಗಳು ನಿರಾಶೆಯ ಸೂಚಕಗಳಾಗಿವೆ. ಹಾಗಾಗಿ ಇವುಗಳನ್ನು ಹಾಕದಿರುವುದು ಉತ್ತಮ. ಮನೆಯ ಉತ್ತರ ದಿಕ್ಕಿನಲ್ಲಿ ಹಸಿರು ವನ ಅಥವಾ ಕೈತೋಟ ಇದ್ದರೆ ಉತ್ತಮ. ಇಲ್ಲದಿದ್ದಕೆ ಹಸಿರಾಗಿ ಕಂಗೊಳಿಸುತ್ತಿರುವ ಫಸಲಿನ ಚಿತ್ರವನ್ನು ಹಾಕಿಕೊಳ್ಳಬಹುದಾಗಿದೆ. ಇದರಿಂದ ಒಮ್ಮೆಲೆ ಅನೇಕ ಲಾಭಗಳನ್ನು ಪಡೆಯಬಹುದಾಗಿದೆ. ಅಷ್ಟೇ ಅಲ್ಲದೆ ಪೂರೈಸಿದ ಕಾರ್ಯಗಳಿಗೆ ಪ್ರಶಂಸೆ ಮತ್ತು ಕೀರ್ತಿ ಹೆಚ್ಚುತ್ತದೆ ಮತ್ತು ಧನಲಾಭವಾಗುತ್ತದೆ.
ಇದನ್ನು ಓದಿ: ಈ ರಾಶಿಯವ್ರು ತುಂಬಾ ಮೃದು, ನಿಮ್ಮದು-ನಿಮ್ಮವರ ರಾಶಿಯೂ ಇದೆಯಾ ನೋಡಿ…!
ಅತಿಯಾಗದಿರಲಿ ಶೋ ದೀಪಗಳು
ವಾಸ್ತುವಿನ ಅನುಸಾರ ಮನೆಯಲ್ಲಿ ಸರಿಯಾದ ಬೆಳಕಿರುವುದು ಅವಶ್ಯಕ. ಕಡಿಮೆ ಬೆಳಕಿದ್ದರೆ ಅದು ಯಶಸ್ಸಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ, ಕಾರ್ಯದಲ್ಲಿ ವಿಘ್ನ ಉಂಟಾಗುತ್ತದೆ. ಅತಿಯಾದ ಲೈಟ್ ಬೆಳಕು ಮನೆಗೆ ಉತ್ತಮವಲ್ಲವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅತಿಯಾದ ಶೋ ದೀಪಗಳನ್ನು ಇಟ್ಟುಕೊಳ್ಳುವುದು ಸಹ ವಾಸ್ತುದೋಷಕ್ಕೆ ಕಾರಣವಾಗುತ್ತದೆ.