ಜ್ಯೋತಿಷ್ಯದ ಪ್ರಕಾರ ಬುಧಗ್ರಹದ ಚಲನೆ ಬೇರೆಲ್ಲ ಗ್ರಹಗಳಿಗಿಂತ ವೇಗವನ್ನು ಹೊಂದಿರುತ್ತದೆ. ಬೇರೆ ಗ್ರಹಗಳು ವರ್ಷದಲ್ಲಿ ಒಂದು ಬಾರಿ ವಕ್ರವಾಗಿದ್ದರೆ, ಇದು ಮಾತ್ರ ತನ್ನ ವೇಗದ ಕಾರಣದಿಂದಾಗಿ ವಕ್ರದ ಅವಸ್ಥೆಯಲ್ಲಿರುತ್ತದೆ. ಬುಧ ಗ್ರಹವು ವಕ್ರವಾದರೆ ಎಲ್ಲರ ಜೀವನದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮಹತ್ವವಾದ ಘಟನೆಗಳಿಗೆ ಕಾರಣವಾಗುತ್ತದೆ. 

ಇದೇ ಫೆಬ್ರವರಿ 4ರಂದು ಬುಧ ಗ್ರಹವು ವಕ್ರಿಯಾಗಿ ಮಕರ ರಾಶಿಗೆ ಪ್ರವೇಶ ಮಾಡಲಿದೆ. ಮಾರ್ಚ್ 11ರಂದು ಮಾರ್ಗಿಯಾಗಿ ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ವಕ್ರಿಯಾಗಿರುವ ಬುಧ ಗ್ರಹವು ಮಕರ ರಾಶಿಗೆ ಪ್ರವೇಶ ಮಾಡಿದ್ದರಿಂದ ಎಲ್ಲ ರಾಶಿಗಳ ಮೇಲೆ ಏನು ಪ್ರಭಾವ ಬೀರಲಿದೆ. ಅದರಲ್ಲೂ ವಿಶೇಷವಾಗಿ 6 ರಾಶಿಯವರಿಗೆ ಏನೆಲ್ಲ ಮಹತ್ವದ ಬದಲಾವಣೆಗಳು ಆಗಲಿವೆ ಎಂಬುದನ್ನು ನೋಡೋಣ…

ಮೇಷ ರಾಶಿ
ಬುಧ ಗ್ರಹದ ಈ ಗೋಚಾರವು ಮೇಷ ರಾಶಿಯವರ ಕಾರ್ಯಕ್ಷೇತ್ರದಲ್ಲಿ ಸಫಲತೆಯನ್ನು ತಂದುಕೊಡುವುದಲ್ಲದೆ, ಈ ರಾಶಿಯವರ ತಂದೆಗೂ ಕಾರ್ಯಗಳಲ್ಲಿ ಯಶಸ್ಸನ್ನು ನೀಡಲಿದೆ. ಈ ಅವಧಿಯಲ್ಲಿ ಹೊಸತನ್ನು ಕಲಿಯುವ ಮನಸ್ಸಾಗುತ್ತದೆ. ಶಸ್ತ್ರಗಳಂತಹ ಕೆಲಸಕ್ಕೆ ಸಂಬಂಧಪಟ್ಟವರಿಗೆ ವಿಶೇಷ ಲಾಭವಿದೆ. ಆದಷ್ಟು ಹೊರಗಿನ ಆಹಾರವನ್ನು ಈ ರಾಶಿಯವರು ಸೇವಿಸದಿರುವುದು ಉತ್ತಮ.

ಇದನ್ನು ಓದಿ: ಈ ರಾಶಿಯವ್ರು ತುಂಬಾ ಮೃದು, ನಿಮ್ಮದು-ನಿಮ್ಮವರ ರಾಶಿಯೂ ಇದೆಯಾ ನೋಡಿ…! 

ವೃಷಭ ರಾಶಿ
ಈ ಗೋಚಾರವು ನಿಮ್ಮ ಅದೃಷ್ಟ ಒಲಿಯಲಿದೆ. ಆರ್ಥಿಕ ಲಾಭದ ಜೊತೆಗೆ ಆರೋಗ್ಯವೂ ಸುಧಾರಿಸುತ್ತದೆ. ಜೊತೆಗೆ ಆಯಸ್ಸು ಸಹ ವೃದ್ಧಿಸುತ್ತದೆ. 

ಮಿಥುನ ರಾಶಿ
ಈ ಗೋಚಾರದ ಸಮಯದಲ್ಲಿ ಶುಭ ಫಲವನ್ನು ಪಡೆಯಬೇಕೆಂದರೆ ಈ ರಾಶಿಯವರು ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ಅಲ್ಲದೆ, ಈ ಅವಧಿಯಲ್ಲಿ ಮನೆಯನ್ನು ಬದಲಿಸಬೇಕಾದ ಸಂದರ್ಭ ಸಹ ಬರುವ ಸಂಭವ ಇದೆ. 

ಕರ್ಕಾಟಕ ರಾಶಿ
ಈ ಗೋಚಾರದಿಂದ ನಿಮಗೆ ಧನಲಾಭವಾಗಲಿದೆ. ಕರಕುಶಲ ನೈಪುಣ್ಯ ಇರುವ ವ್ಯಕ್ತಿಗಳಿಗೆ ವಿಶೇಷ ಲಾಭವಾಗುತ್ತದೆ. ಕೋರ್ಟ್-ಕಚೇರಿಗಳ ವ್ಯವಹಾರಗಳು ಮಾರ್ಚ್ 11ರ ವರೆಗೆ ಈ ರಾಶಿಯವರಿಗೆ ಅನುಕೂಲಕರವಾಗಿ ಪರಿಣಮಿಸಲಿದೆ. 

ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸಿದ ಬುಧಗ್ರಹ –ಹನ್ನೆರಡು ರಾಶಿಗಳ ಫಲಾಫಲಗಳು...! 

ಸಿಂಹ ರಾಶಿ
ಈ ಅವಧಿಯಲ್ಲಿ ನೀವು ಇತರರಿಗೆ ಹೆಚ್ಚಿನ ಸಹಾಯವನ್ನು ಮಾಡುವಿರಿ. ಯಾವುದೇ ಕೆಲಸವನ್ನಾದರೂ ಧೈರ್ಯದಿಂದ ಮಾಡಿದಲ್ಲಿ ಸಫಲತೆ ದೊರೆಯಲಿದೆ. ಜೊತೆಗೆ ಧನಲಾಭವೂ ಸಿಗಲಿದೆ. 

ಕನ್ಯಾ ರಾಶಿ
ಬುಧ ಗ್ರಹದ ಈ ಗೋಚಾರದಿಂದ ಕೆಲಸದಲ್ಲಿ ಕೆಲಸದಲ್ಲಿ ಆಸಕ್ತಿ ಹೆಚ್ಚಲಿದೆ. ಜೊತೆಗೆ ಬೌದ್ಧಿಕ ಕ್ಷಮತೆಯ ವಿಕಾಸವಾಗಲಿದೆ. ಮಕ್ಕಳಿಗೆ ಯಶಸ್ಸು ದೊರೆಯುವುದರ ಜೊತೆಗೆ ಜೀವನದಲ್ಲಿ ಖುಷಿ ಹೆಚ್ಚುವುದಲ್ಲದೆ, ಸಂಗಾತಿ ಜೊತೆ ಪ್ರಣಯದ ಜೀವನವೂ ನಿಮ್ಮದಾಗಲಿದೆ.ತುಲಾ ರಾಶಿ
ಬುಧ ಗ್ರಹದ ಈ ಗೋಚಾರವು ಭೂಮಿ, ಮನೆ ಮತ್ತು ವಾಹನದ ಭಾಗ್ಯವನ್ನು ತಂದು ಕೊಡಲಿದೆ. ಕೇವಲ ನಿಮ್ಮ ರಾಶಿಗಷ್ಟೇ ಅಲ್ಲದೆ, ನಿಮ್ಮವರಿಗೂ ಇದರ ಶುಭದ ಫಲ ಸಿಗಲಿದೆ. ಆದರೆ, ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.

ವೃಶ್ಚಿಕ ರಾಶಿ
ಬುಧ ಗ್ರಹದ ಈ ಗೋಚಾರವು ಇತರರೊಂದಿಗೆ ನಿಮ್ಮ ಸಂಬಂಧವನ್ನು ಉತ್ತಮವಾಗಿಡಲು ಮಾರ್ಚ್ 11ರ ವರೆಗೆ ನಿಮ್ಮ ವಿಚಾರಗಳನ್ನು ಅಭಿವ್ಯಕ್ತ ಗೊಳಿಸಲು ಪೂರ್ಣ ಪ್ರಯತ್ನ ಮಾಡಿ. ಹೀಗೆ ಮಾಡಿದಲ್ಲಿ ನಿಮಗೆ ಇದರಿಂದ ಲಾಭವಾಗಲಿದೆ. ಈ ಅವಧಿಯಲ್ಲಿ ಆಯಸ್ಸು ಸಹ ವೃದ್ಧಿಸಲಿದೆ. ಅಷ್ಟೇ ಅಲ್ಲದೆ, ನಿಮ್ಮ ಮತ್ತು ಸಹೋದರ-ಸಹೋದರಿಯರಿಗೆ ಪರಿಶ್ರಮದ ಅನುಸಾರ ಲಾಭ ದೊರೆಯಲಿದೆ. 

ಧನು ರಾಶಿ
ಬುಧಗ್ರಹದ  ಈ ರಾಶಿ ಪರಿವರ್ತನೆಯು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಲಾಭವನ್ನು ತಂದುಕೊಡಲಿದೆ. ಅಲ್ಲದೆ, ಶತ್ರುಗಳಿಂದ ಸಹ ನಿಮಗೆ ಯಾವುದೇ ತೊಂದರೆಯಾಗದೆ, ಅವರ ವಿರುದ್ಧವೂ ಜಯ ಸಾಧಿಸಬಹುದಾಗಿದೆ. ಜೊತೆಗೆ ಆರ್ಥಿಕವಾಗಿ ಸಬಲತೆಹೊಂದುವುದಕ್ಕೂ ಕಾರಣವಾಗುವಯದಲ್ಲದೆ, ಹಣವೂ ವೃದ್ಧಿಯಾಗಲಿದೆ.

ಮಕರ ರಾಶಿ
ಈ ಗೋಚಾರದಿಂದ ಧನ ಲಾಭವಾಗಲಿದೆ. ಮಕ್ಕಳಿಂದ ನ್ಯಾಯಾಲಯದಲ್ಲಿ ಗೆಲುವು ಸಿಗಲಿದೆ. ಪ್ರೇಮ ಸಂಬಂಧಗಳು ಗಟ್ಟಿಯಾಗಲಿವೆ.

ಕುಂಭ ರಾಶಿ
ಸಮಾಜದಲ್ಲಿ ಈ ರಾಶಿಯವರ ಮತ್ತು ಕುಟುಂಬದವರ ಗೌರವ ಹಾಗೂ ಪ್ರತಿಷ್ಠೆಗಳು ಹೆಚ್ಚಲಿವೆ. ಅಲ್ಲದೆ, ನಿಮಗೆ ಸಂಪತ್ತಿನ ಲಾಭವೂ ಆಗಲಿದೆ. ಆದರೆ, ಮಾರ್ಚ್ 11ರ ವರೆಗೆ ನಿಮ್ಮ ಹಣವನ್ನು ಭದ್ರವಾಗಿ ಕಾಪಾಡಿಕೊಳ್ಳಬೇಕು. ಹೀಗಾಗಿ ನೀವು ಗಣೇಶನನ್ನು ಸ್ತುತಿಸಬೇಕು.

ಇದನ್ನು ಓದಿ: ಲಕ್ಷ್ಮೀ ದೇವಿಯ ಈ ಕೆಲವು ಫೋಟೊ ಮನೆಗೆ ಶುಭವಲ್ಲ..! 

ಮೀನ ರಾಶಿ
ಬುಧ ಗ್ರಹದ ಈ ಗೋಚಾರವು ಈ ರಾಶಿಯವರ ಮಕ್ಕಳಿಗೆ ಸಫಲತೆಯನ್ನು ತಂದು ಕೊಡಲಿದೆ. ಈ ಅವಧಿಯಲ್ಲಿ ನಿಮ್ಮ ಆದಾಯವೂ ಸಹ ಹೆಚ್ಚಲಿದೆ. ಸಮಯವನ್ನು ವ್ಯರ್ಥ ಮಾಡದೆ, ಮುಂದುವರಿದಲ್ಲಿ ಹೊಸತನ್ನು ಕಲಿಯಲು ಸಿಗುವುದಲ್ಲದೆ, ಹೊಸ ಹೊಸ ಅವಕಾಶಗಳು ಸಹ ಲಭಿಸಲಿದೆ.