Asianet Suvarna News Asianet Suvarna News

ಈ ರಾಶಿಯವ್ರು ತುಂಬಾ ಮೃದು, ನಿಮ್ಮದು-ನಿಮ್ಮವರ ರಾಶಿಯೂ ಇದೆಯಾ ನೋಡಿ…!

ಜ್ಯೋತಿಷ್ಯ ಶಾಸ್ತ್ರದ ಅನುಸಾರ ಪ್ರತಿಯೊಬ್ಬರಿಗೂ ಒಂದು ರಾಶಿ ಇರುತ್ತದೆ. ಆದರೆ, ಅವರ ಸ್ವಭಾವವು ಬೇರೆ ಬೇರೆಯಾಗಿರುತ್ತದೆ. ಇಲ್ಲಿ ಜಗಳ ಹಾಗೂ ಗಲಾಟೆಗಳಿಂದ ದೂರವಿದ್ದು, ಶಾಂತ ಮನೋಸ್ಥಿತಿಯಿಂದಲೇ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳುವಂತಹ ರಾಶಿಯವರು ಇದ್ದಾರೆ. ಹಾಗಾದರೆ, ಹೆಚ್ಚು ಶಾಂತಿಪ್ರಿಯ ರಾಶಿಯವರು ಯಾರು ಎಂಬುದನ್ನು ನೋಡೋಣ ಬನ್ನಿ…

These Zodiac signs people are very peaceful in nature or by birth
Author
Bangalore, First Published Feb 2, 2021, 3:26 PM IST

ಸ್ವಭಾವ ಹುಟ್ಟಿನಿಂದಲೇ ಇರುತ್ತದೆ ಎಂಬುದು ಸತ್ಯವಾದ ಮಾತು. ಕೆಲವೊಂದು ಬೆಳೆಯುವ ವಾತಾವರಣದಿಂದ ಬಂದರೆ, ಮತ್ತೆ ಕೆಲವು ಜಾತಕದ ಫಲದಿಂದಲೂ ಬಂದಿರುತ್ತದೆ. ಹುಟ್ಟಿರುವ ರಾಶಿ, ನಕ್ಷತ್ರ ಸೇರಿದಂತೆ ಕೆಲವು ಅಂಶಗಳು ಸ್ವಭಾವದ ಮೇಲೆ ಪ್ರಭಾವವನ್ನು ಬೀರುತ್ತವೆ.

ಕೆಲವು ಜನರನ್ನು ನಾವು ನೋಡಿರಬಹುದು, ಅವರು ಜಗಳ ಮಾಡಲೆಂದೇ ಕಾಯುತ್ತಿರುತ್ತಾರೆ. ಹಾಗೆಯೇ ಮತ್ತೆ ಕೆಲವರು ಯಾರು ಎಂತಹ ರೀತಿಯಲ್ಲಿ ಪ್ರಚೋದಿಸಿದರೂ ತಾವಾಯಿತು ತಮ್ಮ ಪಾಡಾಯಿತು ಎಂದು ಇದ್ದು, ಎದ್ದುಹೋಗುತ್ತಾರೆ. 

ಇಂಥ ಮೃದು ಸ್ವಭಾವದವರು ಜಗಳಗಳಿಂದ ತುಸು ದೂರವೇ ಇರುತ್ತಾರೆ. ಇದೆಲ್ಲದರ ಹಿಂದೆ ಅವರ ರಾಶಿಯ ಪ್ರಭಾವವೂ ಒಂದು ಕಾರಣವಾಗಿರುತ್ತದೆ. ಹೀಗಾಗಿ ಕೆಲವರನ್ನು ಶಾಂತಿಪ್ರಿಯರು ಎಂದು ಕರೆಯಲಾಗುತ್ತದೆ.

ದೊಡ್ಡದಾಗಿ ಮಾತನ್ನೂ ಆಡುವುದಿಲ್ಲ, ಜೊತೆಗೆ ಹೀಗೆ ಜಗಳದ ಪ್ರವೃತ್ತಿ ಹಾಗೂ ಸ್ವಭಾವವನ್ನು ಹೊಂದಿರುವವರನ್ನು ಇಷ್ಟಪಡುವುದೂ ಇಲ್ಲ. ಹೀಗಾಗಿ ಯಾವ ಯಾವ ರಾಶಿವರು ಮೃದು ಸ್ವಭಾವದವರು, ಶಾಂತಿಪ್ರಿಯರು ಎಂಬ ಬಗ್ಗೆ ತಿಳಿದುಕೊಳ್ಳೋಣ…

ಇದನ್ನು ಓದಿ: ಕುಂಭ ರಾಶಿ ಪ್ರವೇಶಿಸಿದ ಬುಧಗ್ರಹ –ಹನ್ನೆರಡು ರಾಶಿಗಳ ಫಲಾಫಲಗಳು...! 

ಕುಂಭ ರಾಶಿ

ಕುಂಭ ರಾಶಿಯವರು ಬಹಳ ಶಾಂತ ಹಾಗೂ ಮೃದು ಸ್ವಭಾವದವರಾಗಿದ್ದಾರೆ. ಹೀಗಾಗಿ ಇವರು ಬಹುಬೇಗ ಹೊಂದಿಕೊಂಡು ಹೋಗುವವರಾಗಿದ್ದಾರೆ. ಈ ರಾಶಿಯವರಲ್ಲಿ ಬಹಳ ಒಳ್ಳೆ ಗುಣವೇ ಹೊಂದಿಕೊಳ್ಳುವ ಸ್ವಭಾವವಾಗಿದೆ. ಯಾವುದೇ ದಿಕ್ಕಿನಲ್ಲಾದರೂ ಸಹ ತಮ್ಮನ್ನು ತಾವು ನಿಯಂತ್ರಣ ಕಳೆದುಕೊಳ್ಳುವುದಕ್ಕೆ ಬಿಡದೆ, ಆ ಪರಿಸ್ಥಿತಿ ಇಲ್ಲವೇ ವಿಷಯದ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ ಪರಿಹರಿಸಿಕೊಳ್ಳುವ ಉತ್ತಮ ಗುಣವನ್ನು ಹೊಂದಿರುತ್ತಾರೆ.

ಹೀಗಾಗಿ ಎಂಥದ್ದೇ ಕಷ್ಟಕರ ಕೆಲಸವನ್ನೂ ಸಹ ಅಷ್ಟೇ ಸುಲಭವಾಗಿ ಮಾಡಿ ಮುಗಿಸಿಬಿಡುತ್ತಾರೆ. ಈ ರಾಶಿಯವರು ಬೇರೆಯವರ ಭಾವನೆಗಳಿಗೆ ಹೆಚ್ಚಿನ ಬೆಲೆ ಕೊಡುವವರಾಗಿದ್ದು, ಇದರಿಂದ ಯಾರೂ ಸಹ ಇವರಿಗೆ ತೊಂದರೆ ಕೊಡುವ ದುಸ್ಸಾಹಸವನ್ನು ಮಾಡುವುದಿಲ್ಲ. ಇವರಿಗೆ ಬಹಳ ಬೇಗ ಬೇಜಾರಾಗುತ್ತದೆ. ಆದರೆ, ಅದನ್ನು ಹೆಚ್ಚಾಗಿ ತೋರಗೊಡದೆ, ಶಾಂತಿಯಿಂದಲೇ ಅದನ್ನು ಬಗೆಹರಿಸುವತ್ತ ಹೆಜ್ಜೆ ಇಡುತ್ತಾರೆ. 

ಕನ್ಯಾ ರಾಶಿ

ಈ ರಾಶಿಯವರು ತುಂಬಾ ದಯಾ ಗುಣ ಮತ್ತು ಸೂಕ್ಷ್ಮತೆಯನ್ನು ಹೊಂದಿರುತ್ತಾರೆ. ಸಣ್ಣ ಸಣ್ಣ ವಿಷಯಗಳಿಗೂ ತುಂಬಾ ಜಾಗರೂಕರಾಗಿರುತ್ತಾರೆ. ಬಹಳ ಸಿಟ್ಟು ಬರುವ ಇವರು, ಯಾರ ಮುಂದೆ ಅದನ್ನು ಯಾವ ರೀತಿ ಪ್ರದರ್ಶಿಸಬೇಕು ಹಾಗೂ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಿರ್ಧರಿಸುವಷ್ಟರ ಮಟ್ಟಿಗೆ ಹಿಡಿತವಿರುತ್ತದೆ. ಜಗಳ-ಗಲಾಟೆಗಳಿಂದ ಇವರು ದೂರವೇ ಇರುತ್ತಾರೆ. ಮಾತಿನ ಯುದ್ಧವನ್ನೂ ಮಾಡಲು ಇವರು ಇಚ್ಛೆ ಪಡುವುದಿಲ್ಲ. ಯಾವುದೇ ವಿಷಯವು ತಮಗೆ ತಪ್ಪು ಎಂದೆನಿಸಿದರೆ ತಕ್ಷಣ ಹೇಳುವ ಇವರು, ಅದನ್ನು ಹೇಳಬೇಕಾದ ದಾಟಿಯಲ್ಲಿ, ಯಾರಿಗೂ ನೋವಾಗದಂತೆ ಹೇಳಿ ಮುಗಿಸಿಬಿಡುತ್ತಾರೆ. 

ಇದನ್ನು ಓದಿ:  ಲಕ್ಷ್ಮೀ ದೇವಿಯ ಈ ಕೆಲವು ಫೋಟೊ ಮನೆಗೆ ಶುಭವಲ್ಲ..! 

ಮೀನ ರಾಶಿ

ಈ ರಾಶಿಯ ಜನರು ಬಹಳ ಸೋಷಿಯಲ್ ಆಗಿರುತ್ತಾರೆ. ತಮಗಿಂತ ಜಾಸ್ತಿ ಇತರರ ಕಾಳಜಿ ವಹಿಸುವುದೇ ಹೆಚ್ಚು, ಇವರು ಬಹಳ ಹಸನ್ಮುಖಿಗಳಾಗಿದ್ದು, ಅದರಿಂದಲೇ ಬೇರೆಯವರ ಮನಸ್ಸನ್ನು ಗೆಲ್ಲುತ್ತಾರೆ. ಇತರರ ವೈಯುಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಕೆಟ್ಟ ಕುತೂಹಲ ಇವರಿಗೆ ಇರುವುದೇ ಇಲ್ಲ. ಯಾವುದೇ ಕಾರಣಕ್ಕೂ ಆ ವಿಷಯದಲ್ಲಿ ಮೂಗು ತೂರಿಸಿಕೊಂಡು ಹೋಗುವ ಜಾಯಮಾನದವರೂ ಇವರಲ್ಲ. ತುಂಬಾ ಪ್ರಾಕ್ಟಿಕಲ್ ಹಾಗೂ ಲಾಜಿಕಲ್ ಆಗಿ ವಿಚಾರ ಮಾಡುವ ಇವರು, ಜಗಳ-ಗಲಾಟೆಗಳಿಂದ ಯಾವ ಸಮಸ್ಯೆಯೂ ಇಲ್ಲವೆಂಬುದನ್ನು ಬಹಳ ಚೆನ್ನಾಗಿ ಅರಿತವರಾಗಿದ್ದಾರೆ. ಹೀಗಾಗಿ ಅವರು ಶಾಂತಿಯುತ ನಡೆಯನ್ನು ಇಷ್ಟಪಡುವವರಾಗಿದ್ದಾರೆ.

ಇದನ್ನು ಓದಿ: ಈ ಶಂಖಗಳ ಮನೆಯಲ್ಲಿಡಿ, ಸಖತ್ ಲಾಭ, ಸಮೃದ್ಧಿ ಪಡೆಯಿರಿ! 

ತುಲಾ ರಾಶಿ

ಈ ರಾಶಿಯವರಿಗೆ ತಾವು ಯಾರಿಂದಲೂ ದಬ್ಬಾಳಿಕೆಗೆ ಒಳಪಡುವುದೂ ಇಷ್ಟವಿಲ್ಲ, ತಾವೂ ಸಹ ಯಾರ ಮೇಲೂ ದಬ್ಬಾಳಿಕೆಯನ್ನು ಮಾಡುವವರಲ್ಲ. ಇವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು ಇರುತ್ತಾರೆ. ಈ ಎಲ್ಲರನ್ನೂ ಒಳ್ಳೇ ರೀತಿಯಲ್ಲಿ ನಡೆಸಿಕೊಂಡು ಹೋಗುವ ಪ್ರವೃತ್ತಿ ಇವರದ್ದಾಗಿರುತ್ತದೆ. ವಾದ-ವಿವಾದ, ಜಗಳಗಳಂತ ಸನ್ನಿವೇಶವನ್ನು ಇವರು ನಿರ್ಲಕ್ಷ್ಯ ಮಾಡುತ್ತಾರೆ. ಸಿಟ್ಟು ಯಾವಾಗಲೂ ತಪ್ಪು ಕೆಲಸಕ್ಕೆ ಪ್ರೇರಿಪಿಸುತ್ತದೆ ಎಂಬುದು ಇವರ ಆಲೋಚನೆಯಾಗಿದ್ದು, ಸಾಧ್ಯವಾದಷ್ಟು ಸಿಟ್ಟನ್ನು ನಿಯಂತ್ರಿಸುತ್ತಾರೆ. ಹೀಗಾಗಿ ಇವರು ಶಾಂತಿ ಪ್ರಿಯರಾಗಿದ್ದಾರೆ. 

Follow Us:
Download App:
  • android
  • ios