Asianet Suvarna News Asianet Suvarna News

ಮಗು ಹುಟ್ಟಿದ ವಾರದ ಪ್ರಕಾರ ಭವಿಷ್ಯ ಹೇಗಿದೆ ನೋಡಿ..

 ಮಗುವು ಹುಟ್ಟಿದ ದಿನದ ಆಧಾರದ ಮೇಲೆ ಆ ಮಗುವಿಗೆ ಯಾವ ಗ್ರಹದ ಕೃಪೆ ಇದೆ ಎಂಬುದನ್ನು ತಿಳಿಯಬಹುದಾಗಿದೆ. ಅಷ್ಟೇ ಅಲ್ಲದೆ ಮಗುವಿನ ಗುಣ ಸ್ವಭಾವಗಳನ್ನು ಸಹ ತಿಳಿಯಬಹುದಾಗಿರುತ್ತದೆ. ಹಾಗಾಗಿ ವಾರದ ಯಾವ ದಿನ ಮಗು ಜನಿಸಿದೆ ಎಂಬುದರ ಆಧಾರದ ಮೇಲೆ ಭವಿಷ್ಯ ತಿಳಿಯೋಣ....

baby birth week reveal future
Author
Bangalore, First Published May 25, 2022, 6:00 PM IST

ಮಗು ಹುಟ್ಟಿದ (Birth) ಸರಿಯಾದ ಸಮಯ, ದಿನಾಂಕ, ತಿಥಿ, ಘಳಿಗೆ, ವಾರ, ರಾಶಿ ಮತ್ತು ನಕ್ಷತ್ರ ಹೀಗೆ ಇವುಗಳೆಲ್ಲವನ್ನೂ ನೋಡಿ ಜಾತಕವನ್ನು ರಚಿಸಲಾಗುತ್ತದೆ. ಜಾತಕದ (Horoscope) ಆಧಾರದ ಮೇಲೆ ಮಗುವಿನ ಭವಿಷ್ಯದ ವಿಚಾರವನ್ನು ಸಹ ತಿಳಿಯಲಾಗುತ್ತದೆ. ಮಗುವಿನ (Baby) ಜನನ ರಾಶಿ ಮತ್ತು ನಕ್ಷತ್ರಗಳಿಂದ ಸಹ ಮಗುವಿನ ಭವಿಷ್ಯದ ವಿಚಾರಗಳನ್ನು ತಿಳಿಯಬಹುದು. ಅಷ್ಟೇ ಅಲ್ಲದೇ ಮಗುವು ವಾರದ ಯಾವ ದಿನ ಹುಟ್ಟಿದೆ ಎಂಬುದನ್ನು ನೋಡಿ ಸಹ ಮಗುವಿನ ಭವಿಷ್ಯ ಹೇಳಬಹುದೆಂದು ಜ್ಯೋತಿಷ್ಯ ಶಾಸ್ತ್ರ (Astrology) ಹೇಳುತ್ತದೆ. ಜನನ ಸಮಯದಲ್ಲಿ ಗ್ರಹ, ನಕ್ಷತ್ರಗಳ ಸ್ಥಿತಿಗತಿ ಮುಖ್ಯ ಆಗಿರುತ್ತದೆ.

ಜಾತಕ ಮಾಡುವಾಗ ಮಗುವಿನ ಹುಟ್ಟಿದ ವಾರ ಸಹ ಮುಖ್ಯವಾಗುತ್ತದೆ. ಹುಟ್ಟಿದ ವಾರದ ಆಧಾರದ ಮೇಲೆ ಮಗುವಿನ ಸ್ವಭಾವವನ್ನು ಮತ್ತು ಗುಣ ಲಕ್ಷಣಗಳನ್ನು ಹೇಳಲಾಗುತ್ತದೆ. ಮಗುವು ಯಾವ ವಾರ ಜನಿಸಿದೆ ಎಂಬುದರ ಮೇಲೆ ಆ ದಿನ ಹುಟ್ಟಿರುವವರ ವ್ಯಕ್ತಿತ್ವ ಗುಣಗಳ ಮೇಲೆ ಪರಿಣಾಮವನ್ನು (Effect) ಬೀರುತ್ತದೆ.

ಜನಿಸಿದ ವಾರದಿಂದ ಮಗುವಿನ  ಸ್ವಭಾವ ತಿಳಿಯಿರಿ..
ಸೋಮವಾರ – ಚಂದ್ರ (Monday - Moon)

ಚಂದ್ರಮಾ ಮನಸೋ ಜಾತಃ ಎಂಬಂತೆ ಚಂದ್ರನು ಮನಸ್ಸಿಗೆ ಕಾರಕ ಗ್ರಹವಾಗಿದೆ. ಸೋಮವಾರ ಜನಿಸಿದವರ ಮೇಲೆ ಚಂದ್ರ ಪ್ರಭಾವ ಹೆಚ್ಚಿರುತ್ತದೆ. ಚಂದ್ರನಿಗೆ ಸೋಮ ಎಂದು ಕರೆಯುತ್ತಾರೆ. ಸೋಮವಾರವು ಚಂದ್ರನ ವಾರವಾದ ಸೋಮವಾರ ಜನಿಸಿದವರು ಶಾಂತಿಪ್ರಿಯರು ಮತ್ತು ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿರುವವರು ಆಗಿರುತ್ತಾರೆ. ಚಂದ್ರ ದೇವನು ತಂಪನ್ನು (Cool) ನೀಡುವವನಾಗಿದ್ದಾನೆ. ಈ ದಿನ ಜನಿಸಿದವರು ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ. ಸೋಮವಾರ ಜನಿಸಿದ ಮಗುವು ಶಾಂತ ಸ್ವಭಾವವನ್ನು ಹೊಂದಿರುತ್ತದೆ. ಆ ದಿನ ಜನಿಸಿದವರ ಮಾತಿನಲ್ಲಿ ಮಧುರತೆ ಇರುತ್ತದೆ. 
 

ಇದನ್ನು ಓದಿ : ಈ ತಾರೀಖಿನಲ್ಲಿ ಹುಟ್ಟಿದೋರು ತುಂಬಾ ದುಡ್ಡು ಮಾಡ್ತಾರೆ!

ಮಂಗಳವಾರ – ಮಂಗಳ (Tuesday - Mars)
ಮಂಗಳವಾರ ಜನಿಸಿದವರಿಗೆ ಮಂಗಳ ಗ್ರಹದ ಕೃಪೆ ಇರುತ್ತದೆ. ಮಂಗಳನ ಪ್ರಭಾವದಿಂದ ಈ ದಿನ ಹುಟ್ಟಿದವರಲ್ಲಿ ಧೈರ್ಯ, ಸಾಹಸ ಮತ್ತು ಆತ್ಮಸ್ಥೈರ್ಯ ಹೆಚ್ಚಿರುತ್ತದೆ. ಮಂಗಳವಾರ ಜನಿಸಿದವರು ಅನ್ಯಾಯವನ್ನು ವಿರೋಧಿಸಿ, ನ್ಯಾಯದಿಂದ ನಡೆಯುವವರಾಗಿರುತ್ತಾರೆ. ಮಗುವಿನ ಜಾತಕದಲ್ಲಿ ಮಂಗಳ ಗ್ರಹದ ಸ್ಥಿತಿ ನೀಚವಾಗಿದ್ದಾಗ ಮಾತ್ರ ಸ್ವಭಾವದಲ್ಲಿ ಸಿಟ್ಟು ಮತ್ತು ಹಟ ಕಾಣ ಸಿಗುತ್ತದೆ. 

ಬುಧವಾರ – ಬುಧ ಗ್ರಹ (Wednesday - Mercury)
ಮಗುವು ಬುಧವಾರ ಜನಿಸಿದರೆ ಅದು ಬುಧಗ್ರಹದ ಅಧಿಪತ್ಯದಲ್ಲಿರುತ್ತದೆ. ಬುಧ ಗ್ರಹವು ವಾಕ್ಚಾತುರ್ಯ ಮತ್ತು ಬುದ್ಧಿಯಕಾರಕ ಗ್ರಹವಾಗಿದೆ. ಈ ದಿನ ಹುಟ್ಟಿದ ಮಗು ಮಾತಿನಲ್ಲಿ ತುಂಬಾ ಪ್ರಾವಿಣ್ಯವನ್ನು ಹೊಂದಿರುತ್ತದೆ. ಹಾಗಾಗಿ ಈ ದಿನ ಜನಿಸಿದವರು ಉತ್ತಮ ವಾಗ್ಮಿಗಳಾಗಿರುತ್ತಾರೆ ಮತ್ತು ಬುದ್ಧಿವಂತರಾಗಿರುತ್ತಾರೆ. ಬುಧವಾರ ಜನಿಸಿದವರು ಮೃದುಭಾಷಿಗಳಾಗಿರುತ್ತಾರೆ. ಈ ವ್ಯಕ್ತಿಗಳ ಮುಖದಲ್ಲಿ ಆಕರ್ಷಣೆಯಿರುತ್ತದೆ. ಈ ದಿನ ಹುಟ್ಟಿದ ಮಗುವು ಕಲೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಿಪುಣತೆಯನ್ನು ಪಡೆಯುತ್ತದೆ. ಈ ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ಮಾತ್ರ ಕೆಲಸದ ವಿಷಯದಲ್ಲಿ ಗೊಂದಲಗಳು ಉಂಟಾಗುತ್ತವೆ.

ಗುರುವಾರ – ಗುರು ಗ್ರಹ (Thursday - Jupiter)
ಗುರುವಾರ ಜನಿಸಿದ ಮಗುವಿನ ಮೇಲೆ ಗುರು ಬೃಹಸ್ಪತಿಯ ಅಧಿಪತ್ಯ ಇರುತ್ತದೆ. ಹಾಗಾಗಿ ಗುರುವಾರ ಜನಿಸಿದ ಮಗುವಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುತ್ತದೆ. ಗಂಭೀರ ಸ್ವಭಾವ ಹೊಂದಿರುವ ಈ ವ್ಯಕ್ತಿಗಳು ಇತರರಿಗೆ ಸದಾ ಒಳ್ಳೆಯದನ್ನೇ ಬಯಸುತ್ತಾರೆ. ಗುರು ಗ್ರಹದ ಸ್ಥಿತಿ ನೀಚವಾಗಿದ್ದರೆ ಮಾತ್ರ ಜೀವನದಲ್ಲಿ ತಪ್ಪುದಾರಿ ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಗುರುವಿನ ಪ್ರಭಾವದಿಂದ ಈ ದಿನ ಹುಟ್ಟಿದ ಮಗುವು ಸಾತ್ವಿಕ ಗುಣವನ್ನು ಹೊಂದಿರುತ್ತದೆ.

ಶುಕ್ರವಾರ – ಶುಕ್ರ ಗ್ರಹ (Friday - Venus)
ಶುಕ್ರವಾರ ಜನಿಸಿದ ಮಗುವಿನ ಮೇಲೆ ಶುಕ್ರಗ್ರಹದ ಪ್ರಭಾವ ಇರುತ್ತದೆ. ಹಾಗಾಗಿ ಇವರು ಭೌತಿಕ ಸುಖದ ಬಗ್ಗೆ ಆಸಕ್ತಿ ಹೆಚ್ಚಾಗಿರುತ್ತದೆ.ಈ ವಾರ ಜನಿಸಿದ ಮಗುವು ಕಲೆ-ಕರಕುಶಲತೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತದೆ. ಸ್ವಭಾವದಲ್ಲಿ ವಿನಮ್ರತೆಯನ್ನು ಹೊಂದಿರುವ ಇವರು ಆಧುನಿಕ ವಿಚಾರಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ.

ಇದನ್ನು ಓದಿ : ಈ ಸೂಚನೆಗಳು ಕಂಡರೆ, ದೇವರು ನಿಮ್ಮ ಮೇಲೆ ಕೃಪೆ ತೋರುತ್ತಿದ್ದಾನೆಂದರ್ಥ!

ಶನಿವಾರ – ಶನಿ ಗ್ರಹ (Saturday - Saturn)
ಈ ವಾರ ಜನಿಸಿದ ಮಗುವಿನ ಮೇಲೆ ಶನಿಗ್ರಹದ ಪ್ರಭಾವ ಇರುತ್ತದೆ. ಶನಿ ಗ್ರಹವು ನ್ಯಾಯ ದೇವರಾಗಿರುವ ಕಾರಣ ಶನಿದೇವರ ಶುಭ ದೃಷ್ಠಿಯಿರುವಾಗ ವ್ಯಕ್ತಿಯು ನ್ಯಾಯ ಪ್ರಿಯ ಮತ್ತು ಕರ್ತವ್ಯ ಪಾಲನೆಯಲ್ಲಿ ದಕ್ಷತೆಯನ್ನು ಹೊಂದಿರುತ್ತಾನೆ. ಶನಿವಾರ ಜನಿಸಿದವರು ಮಾತಿಗೆ ಬದ್ಧರಾಗಿರುತ್ತಾರೆ, ಅಷ್ಟೇ ಅಲ್ಲದೆ ಸಿದ್ಧಾಂತಗಳನ್ನು ಪಾಲಿಸುವುದರಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ.

ಭಾನುವಾರ – ಸೂರ್ಯ ಗ್ರಹ (Sunday - Sun)
ಭಾನುವಾರ ಜನಿಸಿದ ಮಗುವಿನ ಮೇಲೆ ಸೂರ್ಯ ಗ್ರಹದ ಕೃಪೆ ಇರುತ್ತದೆ. ಈ ದಿನ ಜನಿಸಿರುವ ವ್ಯಕ್ತಿಗಳ ಮೇಲೆ ಸೂರ್ಯದೇವನ ಅಧಿಪತ್ಯ ಇರುತ್ತದೆ. ರವಿವಾರ ಜನಿಸಿದವರಲ್ಲಿ ಆತ್ಮಸ್ಥೈರ್ಯ ಹೆಚ್ಚಿರುತ್ತದೆ. ಭಾನುವಾರ ಜನಿಸಿದವರು ಉದಾರ ಗುಣವನ್ನು ಹೊಂದಿರುತ್ತಾರೆ. ವ್ಯಕ್ತಿತ್ವದಲ್ಲಿ ಹೆಚ್ಚು ಬಲಶಾಲಿ ಆಗಿರುವುದಲ್ಲದೇ, ಧೈರ್ಯ ಸ್ವಭಾವವನ್ನು ಹೊಂದಿರುತ್ತಾರೆ.

Follow Us:
Download App:
  • android
  • ios