ಮಹಿಳೆ ಮನೆಯ ಪ್ರತಿಯೊಬ್ಬರ ಆರೋಗ್ಯಗ ಕಾಳಜಿ ಮಾಡುತ್ತಾಳೆ. ಆದರೆ, ಆಕೆಗೇ ಆರೋಗ್ಯ ಸಮಸ್ಯೆ ಕಾಡಿದರೆ? ಅಂಥ ಸಂದರ್ಭದಲ್ಲಿ ಈ ವಾಸ್ತು ಸಲಹೆಗಳು ನಿಮ್ಮ ಮನೆಯಲ್ಲಿ ಪಾಲನೆಯಾಗುತ್ತಿವೆಯೇ ನೋಡಿ.
ಮಹಿಳೆಯರು(Women) ಪ್ರತಿ ಕುಟುಂಬದ ಪ್ರಮುಖ ಭಾಗ. ಮನೆಯಲ್ಲಿ ಪ್ರತಿಯೊಬ್ಬರ ಯೋಗಕ್ಷೇಮ ವಿಚಾರಿಸಿಕೊಂಡು, ಎಲ್ಲರ ಆರೋಗ್ಯ(health) ಕಾಳಜಿ ಮಾಡುತ್ತಾ ಕಳೆಕಳೆಯಾಗಿ ಮನೆ ಮಹಿಳೆ ಓಡಾಡುತ್ತಿದ್ದರೆ ಆ ಮನೆಯಲ್ಲಿ ಧನಾತ್ಮಕ ಎನರ್ಜಿ ಎದ್ದು ಕಾಣುತ್ತದೆ. ತಾಯಿ, ಪತ್ನಿ, ಮಗಳು ಯಾರೇ ಇರಬಹುದು- ಅವರು ಮನೆಯ ಎಲ್ಲರ ಆರೋಗ್ಯದ ಕಾಳಜಿ ಮಾಡುತ್ತಾರೆ. ಸಣ್ಣದಾಗಿ ಕೆಮ್ಮಿದರೂ ಕಷಾಯ ಮಾಡಿಕೊಡುತ್ತಾರೆ. ಜ್ವರ ಬಂದರೆ ಪಕ್ಕದಲ್ಲಿ ಕುಳಿತು ಸೇವೆ ಮಾಡುತ್ತಾರೆ. ಆದರೆ, ಇವರಲ್ಲೇ ಯಾರಿಗಾದರೂ ಆರೋಗ್ಯ ಸಮಸ್ಯೆ ಕಾಡಿದರೆ?
ಮನೆಯ ಎಲ್ಲರ ಯೋಗಕ್ಷೇಮ ಕಾಯುವ ಮಹಿಳೆ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ. ಒಂದು ವೇಳೆ ಆಕೆಯ ಆರೋಗ್ಯದಲ್ಲಿ ಏರುಪೇರಾದರೆ ಇಡೀ ಮನೆಯ ಸಮತೋಲನ ತಪ್ಪುತ್ತದೆ. ಮನೆಯಲ್ಲಿ ಕಳೆಯೇ ಇರುವುದಿಲ್ಲ. ನಕಾರಾತ್ಮಕ ಶಕ್ತಿ(negative energy) ಹೆಚ್ಚುತ್ತದೆ. ಇಡೀ ಕುಟುಂಬದ ಯೋಗಕ್ಷೇಮಕ್ಕಾಗಿ ದುಡಿಯುವ ಮಹಿಳೆಯ ಆರೋಗ್ಯ ಹದಗೆಟ್ಟಾಗ ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
ಹಾಗಾದರೆ ಕುಟುಂಬದ ಮಹಿಳೆಯರಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಕೆಲವು ವಾಸ್ತು ಸಲಹೆ(Vastu Tips)ಗಳನ್ನು ಪರಿಶೀಲಿಸೋಣ.
1. ಮುಖ್ಯ ಬಾಗಿಲು ಅಥವಾ ಪ್ರವೇಶ ದ್ವಾರದ ವಿನ್ಯಾಸ
ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರವೇಶ ದ್ವಾರ(main door)ವು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಮನೆಯೊಳಗಿನ ಧನಾತ್ಮಕ ಶಕ್ತಿಯನ್ನು ಸ್ವಾಗತಿಸಲು ಮುಖ್ಯ ಬಾಗಿಲು ಸೇರಿದಂತೆ ಎಲ್ಲ ಬಾಗಿಲುಗಳು ಒಳಭಾಗಕ್ಕೆ ತೆರೆದುಕೊಳ್ಳಬೇಕು. ಆಗ್ನೇಯ(southeast) ಸ್ಥಾನದಲ್ಲಿರುವ ಮುಖ್ಯ ಬಾಗಿಲು ಮನೆಯಲ್ಲಿ ವಾಸಿಸುವ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ದಿಕ್ಕಿನಲ್ಲಿ ಮುಖ್ಯ ಬಾಗಿಲನ್ನು ನಿರ್ಮಿಸಬೇಡಿ.
ವರ್ಷದ ಮೊದಲ ಸೂರ್ಯಗ್ರಹಣ ತರಲಿದೆ 5 ರಾಶಿಗಳಿಗೆ ಹರ್ಷ
2. ಪೂಜಾ ಕೊಠಡಿ(puja room)ಯ ನಿರ್ಮಾಣ
ಯಾವುದೇ ಮನೆಯಲ್ಲಿ, ಪೂಜಾ ಕೋಣೆ ಕಡ್ಡಾಯ ಭಾಗವಾಗಿದೆ. ಆದ್ದರಿಂದ, ಮನೆಯನ್ನು ಖರೀದಿಸುವಾಗ ಅಥವಾ ನಿರ್ಮಿಸುವಾಗ ಅದು ಸರಿಯಾದ ದಿಕ್ಕಿನಲ್ಲಿರಬೇಕು. ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಕೊಠಡಿಯು ಈಶಾನ್ಯ ದಿಕ್ಕಿನಲ್ಲಿರಬೇಕು. ನಿಮ್ಮ ದೇವರನ್ನು ಪೂಜಿಸುವಾಗ ನಿಮ್ಮ ಮುಖವನ್ನು ಈಶಾನ್ಯ ದಿಕ್ಕಿಗೆ ತಿರುಗಿರುವಂತೆ ನೋಡಿಕೊಳ್ಳಿ.
3. ಗರ್ಭಿಣಿಯರು(Pregnant) ಈ ದಿಕ್ಕಿನಲ್ಲಿ ಮಲಗಬಾರದು
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿ ಮಹಿಳೆ ಅವರು ಮಲಗುವ ಸ್ಥಾನವನ್ನು ನೋಡಿಕೊಳ್ಳಬೇಕು. ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು, ಗರ್ಭಿಣಿಯರು ಎಂದಿಗೂ ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಬಾರದು. ತಪ್ಪು ದಿಕ್ಕಿನಲ್ಲಿ ಮಲಗುವುದು ತಾಯಿ ಮತ್ತು ಅವಳ ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಕಾಲ್ ಮೇಲೆ ಕಾಲು ಹಾಕಿ ಕುಳಿತ್ರೆ ಉದ್ಯೋಗ ನಷ್ಟವಾಗತ್ತೆ, ಎಚ್ಚರ!
4. ಕುಡಿಯುವ ನೀರು(Drinking water)
ತಪ್ಪಾದ ದಿಕ್ಕಿನಲ್ಲಿ ನೀರು ಕುಡಿಯುವುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ನೀರು ಕುಡಿಯುವಾಗ ಈಶಾನ್ಯ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡುವುದನ್ನು ಮರೆಯದಿರಿ.
