ಕಾಲ್ ಮೇಲೆ ಕಾಲು ಹಾಕಿ ಕುಳಿತ್ರೆ ಉದ್ಯೋಗ ನಷ್ಟವಾಗತ್ತೆ, ಎಚ್ಚರ!
ಕಚೇರಿ ಇರಲಿ ಮನೆ ಇರಲಿ, ನಮಗೆ ಬೇಕಾದಾಂಗೆ ಕುಳಿತು ನಾವು ಕೆಲಸ ಮಾಡ್ತೇವೆ. ಆದ್ರೆ ಎಷ್ಟೇ ಕೆಲಸ ಮಾಡಿದ್ರೂ ಯಶಸ್ಸು ಸಿಗುವುದಿಲ್ಲ. ಇದಕ್ಕೆ ಕಾರಣವೇನು ಎಂಬುದು ಗೊತ್ತಾಗ್ದೆ ಒದ್ದಾಡ್ತೇವೆ. ಇದಕ್ಕೆ ವಾಸ್ತು ದೋಷವೂ ಕಾರಣವಾಗಿರಬಹುದು.
ಕೇವಲ ಮನೆ (Home) ವಿಷ್ಯದಲ್ಲಿ ಮಾತ್ರವಲ್ಲ ಕಚೇರಿ (Office) ಯಲ್ಲೂ ವಾಸ್ತು ಬಗ್ಗೆ ಗಮನ ನೀಡಬೇಕಾಗುತ್ತದೆ. ನಿಮ್ಮ ವೃತ್ತಿ (Career) ಹಾಗೂ ವ್ಯಾಪಾರ (Business) ದಲ್ಲಿ ವಾಸ್ತುವಿನ ಬಗ್ಗೆ ಗಮನ ಹರಿಸದೆ ಹೋದ್ರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿಯಲ್ಲಿ ಯಶಸ್ಸು ಮತ್ತು ಉದ್ಯೋಗದಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆಯಲು ವಾಸ್ತು ಶಾಸ್ತ್ರದಲ್ಲಿ ಅನೇಕ ಉಪಾಯಗಳನ್ನು ಹೇಳಲಾಗಿದೆ. ನಮ್ಮ ಸಮಾಜದಲ್ಲಿ ವಾಸ್ತು ಶಾಸ್ತ್ರಕ್ಕೆ ಮಹತ್ವದ ಸ್ಥಾನವಿದೆ. ಹಗಲಿರುಳು ದುಡಿದ್ರೂ ಅನೇಕರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವುದಿಲ್ಲ. ಆರ್ಥಿಕ ವೃದ್ಧಿಯಾಗುವುದಿಲ್ಲ. ಒಂದಾದ ಮೇಲೆ ಒಂದು ಸಮಸ್ಯೆ ಎದುರಿಸಬೇಕಾಗುತ್ತದೆ. ಉದ್ಯೋಗವಿದ್ದರೂ ನೆಮ್ಮದಿ ಇರುವುದಿಲ್ಲ. ಪರ್ಸ್ ನಲ್ಲಿ ಹಣ ನಿಲ್ಲುವುದಿಲ್ಲ. ಬಂದ ಹಣ ನೀರಿನಂತೆ ಖರ್ಚಾಗುತ್ತದೆ. ಉದ್ಯೋಗದಲ್ಲಿ ಯಶಸ್ವಿಯಾಗ್ಬೇಕು, ಕೋಟ್ಯಾಂತರ ರೂಪಾಯಿ ಗಳಿಸಬೇಕೆಂದು ಎಲ್ಲರೂ ಕನಸು ಕಾಣ್ತಾರೆ. ನೀವೂ ಅಂಥವರಲ್ಲಿ ಒಬ್ಬರಾಗಿದ್ದರೆ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸಿ. ಕೆಲಸದಲ್ಲಿ ಯಶಸ್ಸು, ಬಡ್ತಿ ಪಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಲ್ಯಾಪ್ ಟಾಪ್ – ಗೆಜೆಟ್ ಬಳಕೆ : ಲ್ಯಾಪ್ ಟಾಪ್ ನಲ್ಲಿ ಕೆಲಸ ಈಗ ಮಾಮೂಲಿ. ಅನೇಕರು ಮೊಬೈಲ್ ನಲ್ಲಿಯೇ ಕೆಲಸ ಮುಗಿಸ್ತಾರೆ. ಲ್ಯಾಪ್ ಟಾಪ್ ಅಥವಾ ಗೆಜೆಟ್ ಬಳಸುವಾಗ್ಲೂ ದಿಕ್ಕಿನ ಬಗ್ಗೆ ಗಮನ ಹರಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಗ್ಯಾಜೆಟನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ಇದ್ರಿಂದ ವೃತ್ತಿಯಲ್ಲಿ ಏಳ್ಗೆಯನ್ನು ಕಾಣಬಹುದು. ಹಾಗೆಯೇ ವೈರ್ ಮತ್ತು ಕೇಬಲ್ ಗಳ ಬಗ್ಗೆಯೂ ಗಮನ ಹರಿಸಬೇಕು. ವೈರ್ ಹಾಗೂ ಕೇಬಲ್ ಗಳು ಒಂದಕ್ಕೊಂದು ಸಿಕ್ಕಿ ಬೀಳದಂತೆ ನೋಡಿಕೊಳ್ಳಬೇಕು. ಹಾಗೆ ಮೇಜಿನ ಮೇಲೆ ಅಡ್ಡಾದಿಡ್ಡಿಯಾಗಿ ಬೀಳದಂತೆ ಸರಿಯಾಗಿಟ್ಟುಕೊಳ್ಳಬೇಕು.
Hanuman Jayanti: ಇಂದು ಅಂಜನಾದ್ರಿ ಬೆಟ್ಟದಲ್ಲಿ ವೈಭವದ ಹನುಮ ಜಯಂತಿ
ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು : ಖುರ್ಚಿ ಮೇಲೆ ಕುಳಿತಾಗ ಇರಲಿ, ನೆಲಕ್ಕೆ ಕುಳಿತಾಗಿರಲಿ ಇಲ್ಲ ಮಲಗಿದಾಗ ಇರಲಿ, ಅನೇಕರು ಕಾಲಿನ ಮೇಲೆ ಕಾಲು ಹಾಕಿರ್ತಾರೆ. ಎರಡೂ ಪಾದಗಳನ್ನು ನೆಲಕ್ಕಿಟ್ಟು ಕುಳಿತುಕೊಳ್ಳಲು ಅನೇಕರಿಗೆ ಬರುವುದಿಲ್ಲ. ನೀವೂ ಖುರ್ಚಿ ಮೇಲೆ ಕುಳಿತಾಗ ಕಾಲ್ ಮೇಲೆ ಕಾಲ್ ಹಾಕುವ ಅಭ್ಯಾಸವಿದ್ದರೆ ಇಂದೇ ಅದನ್ನು ಬಿಡಿ. ಇದು ನಿಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕಚೇರಿಯಲ್ಲಿ ಕುರ್ಚಿ ಮೇಲೆ ಆರಾಮವಾಗಿ ಕುಳಿತುಕೊಳ್ಳುವುದು ವೃತ್ತಿ ಜೀವನಕ್ಕೆ ಒಳ್ಳೆಯದು. ಮನೆಯಿಂದಲೇ ಕೆಲಸ ಮಾಡುವ ಜನರು ಕೂಡ ಈ ನಿಯಮವನ್ನು ಪಾಲಿಸಬೇಕು.
ವರ್ಕ್ ಫ್ರಂ ಹೋಮ್ ಸಿಬ್ಬಂದಿ ಇದನ್ನು ನೆನಪಿಡಿ : ಕೊರೊನಾ ಲಾಕ್ ಡೌನ್ ನಂತ್ರ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಅವರು ಕೂಡ ವಾಸ್ತುವನ್ನು ನಿರ್ಲಕ್ಷ್ಯಿಸಬಾರದು. ಬೆಡ್ ರೂಮಿನ ಪಕ್ಕದಲ್ಲಿಯೇ ಅಥವಾ ಬೆಡ್ ರೂಮಿನಲ್ಲಿಯೇ ಎಂದಿಗೂ ಕಚೇರಿ ಕೆಲಸವನ್ನು ಮಾಡಬಾರದು. ಕೆಲಸ ಮಾಡಲು ಆಯತಾಕಾರದ ಅಥವಾ ಸ್ಕ್ವೇರ್ ಡೆಸ್ಕ್ ಅನ್ನು ಮಾತ್ರ ಬಳಸಿ. ಗೋಲಾಕಾರದ ಡೆಸ್ಕನ್ನು ಎಂದಿಗೂ ಬಳಸಬೇಡಿ.
ಕ್ರಿಸ್ಟಲ್ ಬಳಕೆ : ಶಕ್ತಿಯುತ ಕ್ರಿಸ್ಟಲ್ ಬಳಕೆಯಿಂದ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ. ಕೆಲಸದ ಕೌಶಲ್ಯ ಸುಧಾರಿಸುತ್ತದೆ. ಕಚೇರಿಯ ಡೆಸ್ಕ್ ಮೇಲೆ ಶಕ್ತಿಯುತ ಕ್ರಿಸ್ಟಲ್ ಇಡುವುದ್ರಿಂದ ಕೆಲಸದಲ್ಲಿ ಒಳ್ಳೆ ಅವಕಾಶ ಸಿಗುವು ಸಾಧ್ಯತೆ ಹೆಚ್ಚಿರುತ್ತದೆ. ಡೆಸ್ಕ್ ಮೇಲೆ ಬಿದುರಿನ ಗಿಡ ಇಡುವುದು ಕೂಡ ಒಳ್ಳೆಯದು.
Rahu Transit : ಈ ಮೂರು ರಾಶಿಯವರಿಗೆ ಬಂಪರ್ ಲಾಭ!
ಮಲಗುವ ದಿಕ್ಕಿನಲ್ಲಿದೆ ವೃತ್ತಿ ಯಶಸ್ಸು : ಮಲಗುವ ವೇಳೆ ತಲೆಯನ್ನು ಪೂರ್ವ ದಿಕ್ಕಿಗೆ ಇಟ್ಟರೆ ಅದು ಕೂಡ ವೃತ್ತಿಯ ಯಶಸ್ಸಿಗೆ ಕಾರಣವಾಗುತ್ತದೆ. ಇದ್ರಿಂದ ಏಕಾಗ್ರತೆ ಹೆಚ್ಚುತ್ತದೆ. ಮಾನಸಿಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಹಾಗೆ ಜನರು ಉತ್ತರ ದಿಕ್ಕಿನಲ್ಲಿ ಕುಳಿತು ಕೆಲಸ ಮಾಡಬೇಕು. ಹಾಗೆ ನೀವು ಕುಳಿತುಕೊಳ್ಳುವ ಹಿಂದಿನ ಗೋಡೆಗೆ ಕಿಟಕಿ ಇರದಂತೆ ನೋಡಿಕೊಳ್ಳಿ.