Asianet Suvarna News Asianet Suvarna News

Remedies For Peace At Home: ಮನೆಯಲ್ಲಿ ಸಂತೋಷವಿಲ್ಲವೇ? ಹೀಗ್ ಮಾಡಿ..

ಕುಟುಂಬವೊಂದರ ಸುಖ ಸಂತೋಷದಲ್ಲೇ ಅಲ್ಲಿ ಬದುಕುವವರ ಜೀವನದ ಯಶಸ್ಸಿರುವುದು. ಮನೆಯಲ್ಲಿ ನೆಮ್ಮದಿ, ಸಂತೋಷ ತರಲು ವಾಸ್ತುವಿನಲ್ಲಿ ಕೆಲ ಸರಳ ಸಲಹೆಗಳಿವೆ.

These simple changes will bring Happiness to your Family skr
Author
Bangalore, First Published Dec 13, 2021, 10:46 AM IST

ಮನೆ ಎಂದ ಮೇಲೆ ಅಲ್ಲಿ ಶಾಂತಿ, ಮನಸ್ಸುಗಳ ನಡುವೆ ಪ್ರೀತಿ, ಸಾಮರಸ್ಯ, ನಗು, ನೋವು ದುಃಖವನ್ನು ಹಂಚಿಕೊಂಡು ಬದುಕುವ ರೀತಿ ಎಲ್ಲವೂ ಇರಬೇಕು. ಆಗಲೇ ಅದೊಂದು ಸುಂದರ ಜೀವನವೆನಿಸುವುದು. ಮನೆಯಲ್ಲಿ ನೆಮ್ಮದಿ ಇಲ್ಲ ಎಂದರೆ ಎಂಥ ದೊಡ್ಡ ಮಹಲ್ ಕಟ್ಟಿದರೂ ಪ್ರಯೋಜನವಿಲ್ಲ. ಕುಟುಂಬವೊಂದು ಒಗ್ಗಟ್ಟಾಗಿದ್ದರೆ, ಆ ಮನೆಯ ಪ್ರತಿ ಸದಸ್ಯರಿಗೂ ಅದೇ ಎಲ್ಲಕ್ಕಿಂತ ದೊಡ್ಡ ಸ್ಟ್ರೆಂತ್. 
ಮನೆ- ಮನಸ್ಸುಗಳ ನಡುವೆ ಶಾಂತಿ, ಸಂತೋಷ ತರಲು ವಾಸ್ತುಶಾಸ್ತ್ರಜ್ಞರು ಕೆಲ ಸರಳವಾದ ಪರಿಹಾರಗಳನ್ನು ನೀಡುತ್ತಾರೆ. ಅವೇನೆಂದು ನೋಡಿ, ನಿಮ್ಮ ಮನೆಗೆ ಅಗತ್ಯವಿದ್ದಲ್ಲಿ ಅಳವಡಿಸಿ. ಸ್ವತಃ ಫಲಿತಾಂಶ ಕಂಡುಕೊಳ್ಳಿ.  

ಫೋಟೋ(A family Photo)
ಕುಟುಂಬವೊಂದರ ಸದಸ್ಯರ ನಡುವಿನ ಬಂಧ ಗಟ್ಟಿಯಾಗಿಸಲು ಇರುವ ಒಂದು ಸರಳ ವಿಧಾನವೆಂದರೆ ಎಲ್ಲರೂ ನಗು ಮೊಗದಲ್ಲಿರುವ ಫ್ಯಾಮಿಲಿ ಫೋಟೋವೊಂದನ್ನು ಡೈನಿಂಗ್ ಕೋಣೆಯ ನೈಋತ್ಯ ಭಾಗದ ಗೋಡೆಯಲ್ಲಿ ಹಾಕುವುದು. ಅತ್ತೆ- ಸೊಸೆಯ ನಡುವೆ ಸಂಬಂಧ ಪೂರ್ತಿ ಹದಗೆಟ್ಟಿದ್ದಲ್ಲಿ ಈ ಪರಿಹಾರ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. 

Gemstones for Success: ನಿಮ್ಮ ವೃತ್ತಿಗೆ ಯಶಸ್ಸು ತಂದುಕೊಡುವ ರತ್ನ ಯಾವುದು ತಿಳಿಯಿರಿ

ಒಟ್ಟಾಗಿ ಊಟ
ಮನೆಯ ಎಲ್ಲ ಸದಸ್ಯರು ದಿನಕ್ಕೆ ಒಂದು ಹೊತ್ತಾದರೂ ಒಟ್ಟಿಗೇ ಕುಳಿತು ತಿಂಡಿಯನ್ನೋ, ಊಟ(lunch)ವನ್ನೋ ಮಾಡುವುದನ್ನು ಪದ್ಧತಿಯಾಗಿ ಅಳವಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಟಿವಿ ಆನಿರಬಾರದು, ಫೋನನ್ನು ಹತ್ತಿರ ಇಟ್ಟುಕೊಳ್ಳಬಾರದು ಎಂಬ ನಿಯಮ ಪಾಲಿಸಿ.  ಇದರಿಂದ ಮನೆಯ ನೆಗೆಟಿವ್ ಎನರ್ಜಿ ಕಡಿಮೆಯಾಗಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಫ್ಯಾಮಿಲಿ ಬಾಂಡಿಂಗ್ ತುಂಬಾ ಹೆಚ್ಚುತ್ತದೆ. ದಿನದಿಂದ ದಿನಕ್ಕೆ ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಹೆಚ್ಚುತ್ತದೆ. 

ಕೆಂಪು ಬಣ್ಣ(Red colour)
ಮನೆಯ ದಕ್ಷಿಣ ದಿಕ್ಕು ಹೆಸರು ಹಾಗೂ ಪ್ರಸಿದ್ಧತೆಗೆ ಸಂಬಂಧಿಸಿದೆ. ಈ ದಿಕ್ಕು ಅಗ್ನಿಯನ್ನೂ ಹೊಂದಿದೆ. ಹಾಗಾಗಿ, ಮನೆಯ ದಕ್ಷಿಣ ಭಾಗದ ಕೋಣೆಯ ದಕ್ಷಿಣ ಗೋಡೆಯಲ್ಲಿ ಕೆಂಪು ಬಣ್ಣದ ಯಾವುದಾದರೂ ವಸ್ತು ಇಲ್ಲವೇ ಪೇಂಟಿಂಗ್ ನೇತು ಹಾಕಿದರೂ ಆದೀತು. ದಕ್ಷಿಣದಲ್ಲಿ ಕೆಂಪು ಬಣ್ಣ ಹಾಕುವುದರಿಂದ ಮನೆಗೆ ಹೆಸರು, ಪ್ರಸಿದ್ಧಿ, ಸಂತೋಷ ಎಲ್ಲವೂ ಸಿದ್ದಿಸುತ್ತದೆ. 

Trustworthy Zodiac Signs: ಈ ರಾಶಿಯವರನ್ನು ನೀವು ಕಣ್ಣು ಮುಚ್ಚಿ ನಂಬಬಹುದು

ಆಮೆ(tortoise)
ಮನೆಯ ಉತ್ತರ ಭಾಗದಲ್ಲಿ ಮೆಟಲ್‌ನಿಂದ ತಯಾರಿಸಿದ ಆಮೆಯನ್ನು ನೀರಿನಿಂದ ತುಂಬಿದ ಬಟ್ಟಲಿನಲ್ಲಿ ಹಾಕಿಡಿ. ಒಂದು ವೇಳೆ ನಿಮ್ಮ ಮಲಗುವ ಕೋಣೆ(bed room) ಉತ್ತರ ದಿಕ್ಕಿನಲ್ಲಿದ್ದರೆ ಬಟ್ಟಲಿನಲ್ಲಿ ನೀರಿಡುವುದು ಬೇಡ. ಏಕೆಂದರೆ, ವಾಸ್ತುವಿನ ಪ್ರಕಾರ, ಮಲಗುವ ಕೋಣೆಯಲ್ಲಿ ನೀರಿಡಬಾರದು. ಆಮೆಯು ಕುಟುಂಬ ಸದಸ್ಯರ ನಡುವೆ ಸಾಮರಸ್ಯ ತರುತ್ತದೆ. ಅಲ್ಲದೆ, ಮನೆಯಲ್ಲಿ ಸಮೃದ್ಧಿಯನ್ನೂ ಹೆಚ್ಚಿಸುತ್ತದೆ. 

ಮಗುವಿನ ಫೋಟೋ(Child’s Photo)
ಪಶ್ಚಿಮ ದಿಕ್ಕು ಕುಟುಂಬ ಹಾಗೂ ಮಗುವಿನ ಬೆಳವಣಿಗೆಯನ್ನು ಸೂಚಿಸುತ್ತದೆ. ಹಾಗಾಗಿ, ಮಗುವಿನ ಫೋಟೋವನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿಡುವುದರಿಂದ ಮಕ್ಕಳ ಪ್ರಗತಿ ಹೆಚ್ಚುವುದಲ್ಲದೆ, ಮನೆಯವರ ನಡುವೆ ಸಂತಸ ಹೆಚ್ಚುವುದು.

ಹೋಮ, ಹವನ
ಮನೆಯಲ್ಲಿ ವರ್ಷಕ್ಕೊಮ್ಮೆಯಾದರೂ ಹೋಮ, ಹವನ, ಪೂಜಾ ಕಾರ್ಯಗಳು ನಡೆಯುತ್ತಿರಬೇಕು. ಅದರಲ್ಲಿ ಮನೆಯವರೆಲ್ಲರೂ ಭಾಗಿಯಾಗಬೇಕು. ಇದರಿಂದ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೋಗಿ ಧನಾತ್ಮಕ ಶಕ್ತಿ(positive vibes) ತುಂಬಿಕೊಳ್ಳುತ್ತದೆ. ಇದಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಾ ಸಾಮರಸ್ಯವೂ ಹೆಚ್ಚುತ್ತದೆ. 

ಗಂಗಾಜಲ
ಗಂಗಾಜಲವಿದ್ದರೆ 21 ದಿನಗಳ ಕಾಲ ಮನೆಯ ಎಲ್ಲ ಕೋಣೆಗಳಿಗೆ ಸಿಂಪಡಿಸಿ. ಇದು ಮನೆಯಲ್ಲಿರುವ ಕೆಟ್ಟ ಶಕ್ತಿ(negative energy) ಹೊರಗೆ ದೂಡುತ್ತದೆ. 

ಯಂತ್ರ(Yantra)
ಯಂತ್ರಗಳನ್ನು ತಂದು ಮನೆಯ ದೇವರ ಕೋಣೆಯಲ್ಲಿಟ್ಟು ಪೂಜಿಸುವುದರಿಂದ ಮನೆಯ ಪ್ರತಿ ಸದಸ್ಯರ ಮನಸ್ಸೂ ತಿಳಿಯಾಗುತ್ತದೆ. ಎಲ್ಲರಿಗೂ ಸುರಕ್ಷಿತ ಭಾವನೆ ಮೂಡುತ್ತದೆ. ಹಾಗೆಯೇ, ಮನೆಗೆ ಯಾರದಾದರೂ ದೃಷ್ಟಿಯಾಗಿದ್ದರೆ, ಮಾಟಮಂತ್ರಗಳ ಬಳಕೆಯಾಗಿದ್ದರೆ, ಅದನ್ನು ತೆಗೆಸಲು ಪರಿಹಾರಕ್ಕಾಗಿ ತಜ್ಞ ಜ್ಯೋತಿಷಿಗಳನ್ನು ಭೇಟಿಯಾಗಿ. 

Follow Us:
Download App:
  • android
  • ios